ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಡ್ ವಿಂಗ್ ಬೆಂಗ್ಳೂರ್ ತಂಡದ ನಾಟಕಕ್ಕೆ 8 ಪ್ರಶಸ್ತಿ

By Mahesh
|
Google Oneindia Kannada News

ಬೆಂಗಳೂರು, ಜುಲೈ 30: ಬೆಂಗಳೂರಿನ ರಂಗ ತಂಡ ಸೈಡ್ ವಿಂಗ್ ತನ್ನ ಪ್ರಯೋಗಗಳ ಮೂಲಕ ಜನ ಮೆಚ್ಚುಗೆ ಗಳಿಸಿರುವುದಲ್ಲದೆ, ಪ್ರಶಸ್ತಿಗಳನ್ನು ಬಾಚಿಕೊಳ್ಳುತ್ತಿದೆ. 38ನೇ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ಸೈಡ್ ವಿಂಗ್ ತಂಡದ 'ನಾಯೀಕತೆ' ನಾಟಕಕ್ಕೆ ಬರೋಬ್ಬರಿ 8 ಪ್ರಶಸ್ತಿಗಳು ಲಭಿಸಿವೆ.

ಕನ್ನಡ ಚಿತ್ರರಂಗದ ದಿಗ್ಗಜ ಖಳನಟ, ದಿವಂಗತ ವಜ್ರಮುನಿ ಅವರು ಸ್ಥಾಪಿಸಿದ್ದ ರಂಗಶ್ರೀ ಕಲಾಸಂಸ್ಥೆ ಹಾಗೂ ದಯಾನಂದ ಸಾಗರ ಪ್ರತಿಷ್ಠಾನ ಸಹಯೋಗದೊಂದಿಗೆ ನಡೆದ 38ನೇ ರಾಜ್ಯ ಮಟ್ಟದ ನಾಟಕ ಸ್ಪರ್ಧೆಯಲ್ಲಿ ನಾಯೀಕತೆ ಪ್ರಶಸ್ತಿಗಳನ್ನು ಬಾಚಿಕೊಂಡಿದೆ.

ಜುಲೈ 16 ರಿಂದ 25 ರವರೆಗೆ ನಾಟಕೋತ್ಸವ ನಡೆದಿದ್ದು, ಇದರಲ್ಲಿ ರಾಜ್ಯದ 25ಕ್ಕೂ ಹೆಚ್ಚು ನಾಟಕಗಳು ಭಾಗವಹಿಸಿತ್ತು. ಬೆಂಗಳೂರಿನ ರವೀಂದ್ರ ಕಲಾಕ್ಷೇತ್ರದಲ್ಲಿ ನಾಟಕ ಪ್ರದರ್ಶನ ನಡೆದಿತ್ತು.

Sidewing teamNayikathe drama win prize at State level competition.

ಈ ನಾಟಕೋತ್ಸವದಲ್ಲಿ ಸೈಡ್ ವಿಂಗ್ ತಂಡ ಚಂದ್ರಶೇಖರ ಕಂಬಾರರ 'ನಾಯೀಕತೆ' ನಾಟಕವನ್ನು ಪ್ರದರ್ಶನ ಮಾಡಿದ್ದು, ಶೈಲೇಶ್ ಕುಮಾರ್ ಎಂ.ಎಂ ನಿರ್ದೇಶನ ಮಾಡಿದ್ದರು.

ಉಳಿದಂತೆ, ದ್ವಿತೀಯ ಪ್ರಶಸ್ತಿಯನ್ನು ಬೆಂಗಳೂರು ಏಷಿಯನ್ ಥಿಯೇಟರ್ ತಂಡ ತಮ್ಮ 'ಬೂಟುಗಾಲಿನ ಸದ್ದು' ಹಾಗೂ ತೃತೀಯ ಪ್ರಶಸ್ತಿಯನ್ನು ರಂಗಾಸ್ಥೆ ತಂಡ 'ಕಡೆ ದಿನ ಕಡೆ ಶೋ' ನಾಟಕಕ್ಕೆ ಪಡೆದುಕೊಂಡಿದೆ.

Sidewing teamNayikathe drama win prize at State level competition.

'ನಾಯೀಕತೆ' ನಾಟಕ್ಕೆ ದೊರೆತ ಪ್ರಶಸ್ತಿಗಳು

ಸರಣಿಯ ಅತ್ಯುತ್ತಮ ನಾಟಕ : ನಾಯೀಕತೆ

ಅತ್ಯುತ್ತಮ ಸಂಗೀತ : ಸೈಡ್ ವಿಂಗ್ ತಂಡ

ಅತ್ಯುತ್ತಮ ನಿರ್ದೇಶನ : ಶೈಲೇಶ್ ಕುಮಾರ್.ಎಂ.ಎಂ.

ಅತ್ಯುತ್ತಮ ಕಲಾವಿದೆ : ಅಶ್ವಿತ ಹೆಗಡೆ

ಅತ್ಯುತ್ತಮ ಪೋಷಕ ನಟ : ಭರತ್ ಸ.ಜಗನ್ನಾಥ್

ಅತ್ಯುತ್ತಮ ವಸ್ತ್ರ ವಿನ್ಯಾಸ
ದ್ವಿತೀಯ ಪ್ರಶಸ್ತಿ : ಲತಾ ಎಂ.ಬಿ

ಅತ್ಯುತ್ತಮ ರಂಗ ಸಜ್ಜೆಕೆ : ವಿಶ್ವನಾಥ್ ಮಂಡಿ

ಅತ್ಯುತ್ತಮ ಪ್ರಸಾದನ
ದ್ವಿತೀಯ ಪ್ರಶಸ್ತಿ: ರಾಘವೇಂದ್ರ ಸಮಷ್ಟಿ

'ನಾಯೀಕತೆ' ನಾಟಕ ಈಗಾಗಲೇ ಎರಡು ಹೌಸ್ ಫುಲ್ ಪ್ರದರ್ಶನವನ್ನು ಕಂಡಿದೆ. ಇದೇ ತಂಡದ 'ಇಲ್ಲ ಅಂದ್ರೆ ಇದೆ' ಎಂಬ ನಾಟಕ ಆಗಸ್ಟ್ 12ರಂದು ಎನ್.ಆರ್.ಕಾಲೋನಿಯ ಪ್ರಭಾತ್ ಕಲಾ ಪೂರ್ಣಿಮದಲ್ಲಿ ಪ್ರದರ್ಶನ ಆಗಲಿದೆ.

English summary
Sidewing team'Nayikathe' drama win prize at State level competition organised by Late Vajamuni's Rangashri art association and Dayananda Sagar trust.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X