ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಿದ್ದರಾಮಯ್ಯ, ಆರ್‌ಸಿಬಿ ಆಟಕ್ಕೆ ಚಪ್ಪಾಳೆ
ಬೆಂಗಳೂರು, ಮಾರ್ಚ್ 28: ಬೆಳಿಗ್ಗೆ ಐಟಿ ಗಲಾಟೆಯಲ್ಲಿ ಮುಳುಗಿದ್ದ ಸಿದ್ದರಾಮಯ್ಯ, ರಾತ್ರಿ ಕ್ರಿಕೆಟ್ ಮ್ಯಾಚ್ ನೋಡುತ್ತಾ ಚಿಲ್ ಮಾಡುತ್ತಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಚಿನ್ನಸ್ವಾಮಿ ಸ್ಟೇಡಿಯಂಗೆ ತೆರಳಿರುವ ಸಿದ್ದರಾಮಯ್ಯ ಆರ್‌ಸಿಬಿ-ಮುಂಬೈ ಇಂಡಿಯನ್ಸ್ ತಂಡಗಳ ನಡುವಿನ ಮ್ಯಾಚ್ ವೀಕ್ಷಿಸುತ್ತಿದ್ದಾರೆ.
ವಿಐಪಿ ಬಾಕ್ಸ್‌ನಲ್ಲಿ ಕೂತು ತಣ್ಣಗೆ ಮ್ಯಾಚ್ ಸವಿಯುತ್ತಿದ್ದಾರೆ, ಸಿದ್ದರಾಮಯ್ಯ ಅವರು ಮ್ಯಾಚ್ ನೋಡುತ್ತಾ ವೀಕ್ಷಕರತ್ತ ಕೈಬೀಸುತ್ತಿರುವ ಚಿತ್ರ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಕ್ರಿಕೆಟ್ ಪ್ರಿಯ ಸಿದ್ದರಾಮಯ್ಯ ಅವರು ಬೆಂಗಳೂರಿನಲ್ಲಿ ಪಂದ್ಯಗಳು ನಡೆದಾಗ ಬಿಡುವಾದಾಗ ಬೆಂಗಳೂರಿನಲ್ಲಿ ನಡೆವ ಪಂದ್ಯಗಳನ್ನು ನೋಡುವ ಅಭ್ಯಾಸವನ್ನು ಹಿಂದಿನಿಂದಲೂ ಪಾಲಿಸಿಕೊಂಡು ಬಂದಿದ್ದಾರೆ.
ಬೆಂಗಳೂರಿನಲ್ಲಿ ಸಚಿನ್ ತೆಂಡೂಲ್ಕರ್ ಅವರು 200 ರನ್ ಬಾರಿಸಿದಂದು ಸಹ ಸಿದ್ದರಾಮಯ್ಯ ಅವರು ಕ್ರೀಡಾಂಗಣದಲ್ಲಿ ಆ ಪಂದ್ಯ ನೋಡಿದ್ದರು.












Click it and Unblock the Notifications