ಯಾವುದೇ ಸಂಸ್ಕೃತಿಯನ್ನು ಬಲವಂತದಿಂದ ತಡೆಯುವುದು ತಪ್ಪು: ಸಿದ್ದರಾಮಯ್ಯ

ಬೆಂಗಳೂರು, ಫೆಬ್ರವರಿ 20: ''ಸಿಂಧೂರ ಆಗಲಿ-ಹಿಜಾಬ್ ಆಗಲಿ ಎರಡು ನಮ್ಮ ನಮ್ಮ ಸಂಸ್ಕøತಿ ಮತ್ತು ನಂಬಿಕೆ. ಕುಂಕುಮ ಇಡುವುದರಿಂದ-ಹಿಜಾಬ್ ಹಾಕುವುದರಿಂದ ಯಾರಿಗೂ ತೊಂದರೆ ಇಲ್ಲ. ಯಾವುದೇ ಸಂಸ್ಕೃತಿಯನ್ನು ಬಲವಂತದಿಂದ ತಡೆಯುವುದು ತಪ್ಪು,'' ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ನುಡಿದರು.

ವಿಧಾನಸೌಧದಲ್ಲಿ ಮಾಧ್ಯಮಗಳಿಗೆ ಅವರು ಪ್ರತಿಕ್ರಿಯಿಸಿ, ''ಹಣೆಗೆ ಕುಂಕುಮ ಇಡುವ ಮಕ್ಕಳನ್ನು ಕಾಲೇಜುಗಳಿಗೆ ಪ್ರವೇಶ ನಿರಾಕರಿಸುತ್ತಿರುವ ಮತ್ತು ಸಿಂಧೂರ ವಿವಾದದ ಬಗ್ಗೆ ಮಾಧ್ಯಮಗಳು ಕೇಳಿದ ಪ್ರಶ್ನೆಗೆ ಉತ್ತರಿಸಿ, ಸಿಂಧೂರ ಇಡುವುದರಿಂದ ಯಾರಿಗೂ ತೊಂದರೆ ಇಲ್ಲ. ಹಾಗೆಯೇ ಹಿಜಾಬ್ ಧರಿಸುವುದರಿಂದಲೂ ಯಾರಿಗೂ ತೊಂದರೆ ಇಲ್ಲ. ಹಿಂದಿನಿಂದ ನಡೆದುಕೊಂಡು ಬಂದಿರುವ ನಂಬಿಕೆ, ಆಚರಣೆ, ಪರಂಪರೆಗೆ ತಕ್ಕಂತೆ ನಡೆದುಕೊಳ್ಳುವುದು ಯಾರಿಗೂ ತೊಂದರೆ ಇಲ್ಲ,'' ಎಂದರು.

ಹಿಜಾಬ್‌ನ್ನು ಹಿಂದಿನಿಂದಲೂ ಧರಿಸಿಕೊಂಡು ಬರುತ್ತಿದ್ದರು. ಕೇಸರಿ ಶಾಲು ಹಿಂದಿನಿಂದ ಯಾರೂ ಹಾಕುತ್ತಿರಲಿಲ್ಲ. ಹಿಜಾಬ್ ಅನ್ನು ವಿರೋಧಿಸುವುದಕ್ಕೋಸ್ಕರವೇ ಕೇಸರು ಶಾಲು ಹಾಕಿಸುವುದು ಅತ್ಯಂತ ಸಣ್ಣತನ. ಇದು ಕೇಸರಿ ಶಾಲಿಗೂ ಮಾಡುವ ಅವಮಾನ ಎಂದರು. ಕೇಸರಿ ಶಾಲನ್ನು ಅಮಾನವೀಯ, ಅನಾಗರಿಕ ಕಾರಣಗಳಿಗೆ ಬಳಸಬಾರದು ಎಂದು ಹೇಳಿದರು.

Siddaramaiah on Hijab- Kesari Shawl Row, Condemns BJP Govt

ಮಂಗಳೂರಿನಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ವಿಧಾನಸಭಾ ಅಧಿವೇಶನದಲ್ಲಿ ಹಿಜಾಬ್ ವಿಚಾರ ಯಾಕೆ ಚರ್ಚೆ ಮಾಡುತ್ತಿಲ್ಲ ಎಂದು ಪ್ರಶ್ನೆ ಮಾಡಿದ್ದಾರೆ. ಹಿಜಾಬ್ ಪರವಾಗಿ ಇದೆ ಎಂದು ಹೇಳಲು ಡಿ.ಕೆ.ಶಿವಕುಮಾರ್ ಬಿಡುತ್ತಿಲ್ಲ. ನಾವು ಹಿಂದೂ ಪರವಾಗಿದ್ದೇವೆ ಎಂದು ಹೇಳಲು ಸಿದ್ದರಾಮಯ್ಯ ಬಿಡುತ್ತಿಲ್ಲ. ಇದು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ನಡುವಿನ ಫೈಟ್ ಅಷ್ಟೇ. ವಿಧಾನಸಭೆಯಲ್ಲಿ ಹಿಜಾಬ್ ಕೇಸರಿ ಶಾಲು ವಿವಾದದ ಬಗ್ಗೆ ಯಾಕೆ ಮಾತನಾಡುತ್ತಿಲ್ಲ ಎಂದು ಸಚಿವ ಆರ್ ಅಶೋಕ್ ಪ್ರಶ್ನೆ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

ನ್ಯಾಯಾಲಯದಲ್ಲಿ ಹಿಜಾಬ್ ವಿವಾದ:
ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಆದೇಶದ ಮೇರೆಗೆ ಅಂತಹ ಕಾಲೇಜುಗಳು ಮತ್ತು ಶಾಲೆಗಳ ಹೊರಗೆ ಹಿಜಾಬ್ ಮತ್ತು ಬುರ್ಖಾಗಳನ್ನು ತೆಗೆದುಹಾಕಲು ವಿದ್ಯಾರ್ಥಿಗಳಿಗೆ ಸೂಚಿಸಲಾಗುತ್ತಿದೆ ಎಂದು ವಕೀಲ ತಾಹೀರ್ ಹೇಳಿದರು. ಹೈಕೋರ್ಟ್‌ನ ಮಧ್ಯಂತರ ಆದೇಶವನ್ನು ಪಾಲಿಸುತ್ತಿದ್ದೇವೆ ಎಂದು ಹೇಳುವ ಮೂಲಕ ಹಿಜಾಬ್ ಧರಿಸಿರುವ ಶಿಕ್ಷಕರನ್ನೂ ಅಧಿಕಾರಿಗಳು ತಡೆಯುತ್ತಿದ್ದಾರೆ. ಈ ನಿಟ್ಟಿನಲ್ಲಿ ಎಲ್ಲ ಇಲಾಖೆಗಳು ಆದೇಶ ಹೊರಡಿಸುತ್ತಿವೆ ಎಂದರು.

ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಮತ್ತು ನ್ಯಾಯಮೂರ್ತಿ ಖಾಜಿ ಜೈಬುನ್ನೇಸಾ ಮೊಹಿಯುದ್ದೀನ್ ಅವರನ್ನೊಳಗೊಂಡ ಪೀಠ, ಈ ವಿಷಯದ ಬಗ್ಗೆ ಲಿಖಿತ ಸಲ್ಲಿಕೆಯನ್ನು ನೀಡುವಂತೆ ವಕೀಲರಿಗೆ ಸೂಚಿಸಿತು ಮತ್ತು ಮಧ್ಯಂತರ ಆದೇಶಗಳನ್ನು ಉಲ್ಲಂಘಿಸದಂತೆ ನೋಡಿಕೊಳ್ಳಲು ಸರ್ಕಾರಕ್ಕೆ ಸೂಚಿಸಿತು.

ಸರ್ಕಾರದ ಪರ ವಾದ ಮಂಡಿಸಿದ ಅಡ್ವೊಕೇಟ್ ಜನರಲ್ ಪ್ರಭುಲಿಂಗ ನಾವದಗಿ, ಮಧ್ಯಂತರ ಆದೇಶದ ಒಂದು ತುಣುಕು ಉಲ್ಲಂಘನೆಯಾಗದಂತೆ ನೋಡಿಕೊಳ್ಳಲಾಗುವುದು ಎಂದು ನ್ಯಾಯಾಲಯಕ್ಕೆ ಭರವಸೆ ನೀಡಿದರು. ಏತನ್ಮಧ್ಯೆ, ಧಾರ್ಮಿಕ ವಿಷಯಗಳಲ್ಲಿ ತೊಡಗಿಸಿಕೊಳ್ಳಲು ಸರ್ಕಾರಕ್ಕೆ ಯಾವುದೇ ಹಕ್ಕಿಲ್ಲ ಎಂದು ಕಟುವಾಗಿ ವಾದಿಸಿದ ಅರ್ಜಿದಾರರ ಪರ ವಕೀಲರ ವಾದಕ್ಕೆ ಪ್ರತಿವಾದಿಸಿದ ಎಜಿ ನಾವದಗಿ, ಆರ್ಟಿಕಲ್ 25 (1) ರ ಪ್ರಕಾರ ಧಾರ್ಮಿಕ ವಿಷಯಗಳನ್ನು ನಿರ್ಬಂಧಿಸಲು ರಾಜ್ಯ ಸರ್ಕಾರಕ್ಕೆ ಅಧಿಕಾರವಿದೆ ಎಂದು ವಾದಿಸಿದರು.

ಈ ನಡುವೆ "ದೇಶದ ಸಂವಿಧಾನದಲ್ಲಿ ಮಕ್ಕಳ ಶಿಕ್ಷಣಕ್ಕೆ ವಿಶೇಷ ಹಕ್ಕು ನೀಡಲಾಗಿದೆ. ಶಾಲೆ, ಕಾಲೇಜು ಮಕ್ಕಳಿಗೆ ಉಚಿತ ಹಾಗೂ ಕಡ್ಡಾಯ ಶಿಕ್ಷಣ ಪಡೆಯಲು ಅವರಿಗೆ ಈ ಹಕ್ಕಿನ ಮೂಲಕ ಅವಕಾಶ ನೀಡಲಾಗಿದೆ. ಅವರವರ ಧರ್ಮ ಹಾಗೂ ಭಾವನೆ ರಕ್ಷಣೆಯಲ್ಲೂ ಅವರಿಗೆ ಹಕ್ಕಿದೆ," ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅಭಿಪ್ರಾಯಪಟ್ಟಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+