ಈಜಿಪುರ-ಕೇಂದ್ರೀಯ ಸದನ ಜಂಕ್ಷನ್ ಫ್ಲೈಓವರ್ ನಿರ್ಮಾಣಕ್ಕೆ ಚಾಲನೆ
ಬೆಂಗಳೂರು, ಜುಲೈ 24: ಈಜಿಪುರ ರಸ್ತೆ ಒಳವರ್ತುಲ ಜಂಕ್ಷನ್ ನಿಂದ ಕೇಂದ್ರೀಯ ಸದನ ಜಂಕ್ಷನ್ ವರೆಗೆ 'ಫ್ಲೈ ಓವರ್' ನಿರ್ಮಾಣಕ್ಕೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಿದರು.
ಮುಖ್ಯಮಂತ್ರಿಗಳ ನಗರೋತ್ಥಾನ ಯೋಜನೆಯಡಿ ಈ 'ಮೇಲು ಸೇತುವೆ' ನಿರ್ಮಾಣ ಮಾಡಲಾಗುತ್ತಿದೆ.

ಮೇಲು ಸೇತುವೆ ನಿರ್ಮಾಣದಿಂದಾಗುವ ಲಾಭ
ಈ ಮೇಲು ಸೇತುವೆ ನಿರ್ಮಾಣದಿಂದ ಇಲ್ಲಿನ ಮೂರು ವೃತ್ತಗಳಲ್ಲಿ ಟ್ರಾಫಿಕ್ ಸಮಸ್ಯೆ ಬಗೆಹರಿಯಲಿದೆ. ಈಜಿಪುರ ರಸ್ತೆ ಒಳವರ್ತುಲ ಜಂಕ್ಷನ್, ಸೋನಿ ವರ್ಲ್ಡ್ ಜಂಕ್ಷನ್ ಹಾಗೂ ಕೇಂದ್ರೀಯ ಸದನ ಜಂಕ್ಷನ್ ಗಳಲ್ಲಿ ಟ್ರಾಫಿಕ್ ದೊಟ್ಟ ಮಟ್ಟಕ್ಕೆ ತಗ್ಗಲಿದೆ.

ಇನ್ನು ಫ್ಲೈ ಓವರ್ ನಿರ್ಮಾಣವಾದರೆ ಪ್ರಯಾಣಿಕರು ಹೊಸೂರು ರಸ್ತೆಯಿಂದ ದೊಮ್ಮಲೂರಿಗೆ ನೇರವಾಗಿ ಮೇಲು ಸೇತುವೆ ಮೂಲಕ ಪ್ರಯಾಣಿಸಬಹುದಾಗಿದೆ.












Click it and Unblock the Notifications