ಬೆಂಗಳೂರಿನಿಂದ ವಲಸೆ ಕಾರ್ಮಿಕರನ್ನು ಹೊತ್ತುಹೊರಟ ಶ್ರಮಿಕ ರೈಲು

ಬೆಂಗಳೂರು, ಮೇ 3: ವಲಸೆ ಕಾರ್ಮಿಕರನ್ನು ಅವರವರ ಊರಿಗೆ ಕಳಿಸಲು ವಿಶೇಷ ರೈಲು ಸೇವೆಯ ಅಗತ್ಯವಿದೆ ಎಂದು ಕರ್ನಾಟಕ ಸರ್ಕಾರದ ಮನವಿಗೆ ಭಾರತೀಯ ರೈಲ್ವೆ ಇಲಾಖೆ‌ ಗ್ರೀನ್ ಸಿಗ್ನಲ್ ನೀಡಿದೆ. ಇದರ ಫಲವಾಗಿ ಇಂದು ಬೆಂಗಳೂರು ಸೇರಿದಂತೆ ದೇಶದಲ್ಲಿ ಶ್ರಮಿಕ ಸ್ಪೆಷಲ್ ಟ್ರೈನ್ ಸಂಚಾರ ಆರಂಭವಾಗಿದೆ.

ವಿವಿಧ ರಾಜ್ಯದಲ್ಲಿ ಸಿಲುಕಿರುವ ಕಾರ್ಮಿಕರು, ವಿದ್ಯಾರ್ಥಿಗಳ ನೆರವಿಗಾಗಿ ವಿಶೇಷ ರೈಲುಗಳು ಸಂಚರಿಸುತ್ತಿವೆ. ರಾಜ್ಯ ಸರ್ಕಾರಗಳ ಮನವಿಗೆ ರೈಲ್ವೆ ಓಡಿಸಲು‌ ನಿರ್ಧಾರ ಕೈಗೊಂಡಿದ್ದು, ಕೆಲವು ಷರತ್ತುಗಳೊಂದಿಗೆ ಸಂಚರಿಸಲಿವೆ. ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಸಂಚರಿಸಲು ಎರಡು ರಾಜ್ಯಗಳ ಒಪ್ಪಿಗೆ‌‌ ಇರಬೇಕು.

ಶ್ರಮಿಕ ಟ್ರೈನ್ ಗಳು ನಾನ್ ಸ್ಟಾಪ್ ರೈಲುಗಳಾಗಿದ್ದು..ಒಂದೇ ಸ್ಥಳದಲ್ಲಿ ನಿಲ್ಲುತ್ತವೆ. 22 ಕೋಚ್ ಗಳಿರಲಿದ್ದು, ಪ್ರತಿ ಕೋಚ್ ನಲ್ಲಿ 54 ಪ್ರಯಾಣಿಕರಿಗೆ ಪ್ರಯಾಣದ ಅವಕಾಶವಿರುತ್ತದೆ. ಯಾವುದೇ ಸ್ಟೇಷನ್ ನಡುವೆ ನಿಲುಗಡೆ ಇರುವುದಿಲ್ಲ.

ನಿಬಂಧನೆಗೆ ಬದ್ಧರಾಗಿರಬೇಕು

ನಿಬಂಧನೆಗೆ ಬದ್ಧರಾಗಿರಬೇಕು

ರೈಲಿನಲ್ಲಿ ಸಾಮಾಜಿಕ ಅಂತರ ಕಾಪಾಡಬೇಕು,ಮದ್ಯ ಸೀಟ್ ಖಾಲಿ ‌ಇರಬೇಕು, ರೈಲ್ವೆ ಸಂಚಾರಕ್ಕೂ‌ ಮುನ್ನಾ ಸ್ಕ್ರೀನಿಂಗ್ ನಡೆಸಬೇಕು. ಪ್ಯಾಸೆಂಜರ್ ಸಂಪೂರ್ಣ ವಿಳಾಸ ಹಾಗೂ ಪೋನ್ ನಂಬರ್ ಪಡೆಯಬೇಕು.

ಕೋವಿಡ್ 19 ರೋಗದ ಲಕ್ಷಣವಿದ್ದರೆ ಪ್ರಯಾಣವಿಲ್ಲ

ಕೋವಿಡ್ 19 ರೋಗದ ಲಕ್ಷಣವಿದ್ದರೆ ಪ್ರಯಾಣವಿಲ್ಲ

ಕೋವಿಡ್ 19 ರೋಗದ ಲಕ್ಷಣಗಳು ಇದ್ರೆ ಪ್ರಯಾಣಕ್ಕೆ ಅವಕಾಶ ಇಲ್ಲ ಎಂಬ ನಿಬಂಧನೆಗಳನ್ನು ಹಾಕಲಾಗಿದೆ. ಇನ್ನೂ ರೈಲ್ವೆ ಟಿಕೆಟ್ ಅನ್ನು ರೈಲ್ವೆ ‌ಇಲಾಖೆ ಪ್ರಿಂಟ್ ‌ಮಾಡಿ ರಾಜ್ಯ ಸರ್ಕಾರಕ್ಕೆ ನೀಡುತ್ತದೆ.ರಾಜ್ಯ ‌ಸರ್ಕಾರ ಪ್ಯಾಸೆಂಜರ್ ಗೆ ನೀಡಬೇಕು. ಪ್ರಯಾಣಿಕರು ಮಾಸ್ಕ್ ಧರಿಸಲೇಬೇಕು.

ಬೆಂಗಳೂರಿನಲ್ಲಿ ಹೇಗಿದೆ ವ್ಯವಸ್ಥೆ

ಬೆಂಗಳೂರಿನಲ್ಲಿ ಹೇಗಿದೆ ವ್ಯವಸ್ಥೆ

ವಲಸೆ ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಜಿಲ್ಲಾಡಳಿತ, ಪೋಲಿಸ್ ಇಲಾಖೆ, ಬಿಬಿಎಂಪಿ, ಬಿಎಂಟಿಸಿ ಮತ್ತು ರೈಲ್ವೆ ಇಲಾಖೆಯು ಚಿಕ್ಕಬಾಣಾವಾರ ರೈಲ್ವೆ ನಿಲ್ದಾಣದಲ್ಲಿ ಸೂಕ್ತ ವ್ಯವಸ್ಥೆ ಕಲ್ಪಿಸಲಾಗಿದೆ. ಎಲ್ಲಾ ಕಾರ್ಮಿಕರಿಗೆ ಸರಿಯಾಗಿ ತಪಾಸಣೆಯ ನಂತರ ಒಡಿಶಾಗೆ ಹಿಂತಿರುಗಲು ಅವಕಾಶ ಮಾಡಲಾಗಿದೆ.

ಎರಡು ಶ್ರಮಿಕ ರೈಲುಗಳು ಇಂದು ಪ್ರಯಾಣ

ಎರಡು ಶ್ರಮಿಕ ರೈಲುಗಳು ಇಂದು ಪ್ರಯಾಣ

ರೈಲ್ವೆ ಇಲಾಖೆಯು ಇಂದು ವಲಸೆ ಕಾರ್ಮಿಕರಿಗೆ ಬೆಂಗಳೂರಿನಿಂದ ತೆರಳಲು ತಲಾ 2 ರೈಲುಗಳನ್ನು ಪಾಟ್ನಾ ಮತ್ತು ಭುವನೇಶ್ವರ ಹಾಗೂ 1 ರೈಲನ್ನು ಹಟಿಯಾಗೆ ವ್ಯವಸ್ಥೆ ಮಾಡಿದೆ. ಬಿಎಂಟಿಸಿ, ಬಿಬಿಎಂಪಿಯಿಂದ ಟಿಕೆಟಿಂಗ್ ಪ್ರಕ್ರಿಯೆಯ ನಂತರ, ಪೋಲಿಸರು 6,000 ಪ್ರಯಾಣಿಕರನ್ನು ತಪಾಸಣೆ ನಡೆಸಿ ಚಿಕ್ಕ ಬಾಣಾವರ ಹಾಗೂ ಮಾಲೂರು ನಿಲ್ದಾಣಕ್ಕೆ 250 ಬಸ್ಸುಗಳ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+