ದೊಡ್ಡ ಕಲ್ಲಸಂದ್ರ ಬಳಿ ಶೂಟೌಟ್, ರೌಡಿಶೀಟರ್ ಸ್ಟಾರ್ ರಾಹುಲ್ ಬಂಧನ
ಬೆಂಗಳೂರು, ಜನವರಿ 17: 'ಪೊಲೀಸರು ನನ್ನನ್ನು ಬಂಧಿಸಲು ಸಾಧ್ಯವಿಲ್ಲ' ಎಂದು ವಿಡಿಯೋ ಮಾಡಿದ್ದ ರೌಡಿಶೀಟರ್ ಸ್ಟಾರ್ ರಾಹುಲ್ ಇಂದು ಕಾಲಿಗೆ ಗುಂಡು ಹೊಕ್ಕಿದೆ. ಸೋಮವಾರ ಬೆಳ್ಳಂಬೆಳಗ್ಗೆ ಬೆಂಗಳೂರಲ್ಲಿ ಗುಂಡಿನ ಸದ್ದು ಕೇಳಿ ಬಂದಿದ್ದು, ರೌಡಿಶೀಟರ್ ರಾಹುಲ್ ಬಂಧನವಾಗಿದೆ.
ಗಾಂಜಾ ಪ್ರಕರಣದಲ್ಲಿ ಬೇಕಾಗಿದ್ದ ರೌಡಿಶೀಟರ್ ಕಾಲಿಗೆ ಗುಂಡುನುಗ್ಗಿಸಿ ಬಂಧಿಸಲಾಗಿದೆ. ಕೆಂಪೇಗೌಡ ನಗರದಲ್ಲಿ ಸಿಕ್ಕ 200 ಕೆಜಿ ಗಾಂಜಾ ಪ್ರಕರಣದಲ್ಲಿ ರಾಹುಲ್ ಅಲಿಯಾಸ್ ಸ್ಟಾರ್ ರಾಹುಲ್ ವಾಟೆಂಡ್ ಆರೋಪಿಯಾಗಿದ್ದ. ಈತ ಪೊಲೀಸರು ನನ್ನ ಬಂಧಿಸಲು ಆಗಲ್ಲ ಅಂತ ವಿಡಿಯೋ ಮಾಡಿ ಹಂಚಿಕೊಂಡಿದ್ದ ಕುಖ್ಯಾತ ರೌಡಿಶೀಟರ್ ಕುಳ್ಳ ರಿಜ್ವಾನ್ ಸಹಚರನಾಗಿರುವ ಸ್ಟಾರ್ ರಾಹುಲ್ 20ಕ್ಕೂ ಪ್ರಕರಣಗಳಲ್ಲಿ ಪೊಲೀಸರಿಗೆ ಬೇಕಾಗಿದ್ದ. ಈತನನ್ನು ಬಂಧಿಸಲು ಕಾದಿದ್ದ ಪೊಲೀಸರಿಗೆ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಆರೋಪಿ ಬೀಡುಬಿಟ್ಟಿರುವ ಮಾಹಿತಿ ಸಿಕ್ಕಿದೆ.
ರೌಡಿಶೀಟರ್ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ ಪೊಲೀಸರು!#Bengaluru #BengaluruPolice #Shootout #ಒನ್ಇಂಡಿಯಾಕನ್ನಡಸುದ್ದಿ pic.twitter.com/Mrulq0XUJ7
— oneindiakannada (@OneindiaKannada) January 17, 2022
ಇಂದು ಆರೋಪಿ ಕೋಣನಕುಂಟೆ ಪೊಲೀಸ್ ಠಾಣಾ ವ್ಯಾಪ್ತಿಯ ದೊಡ್ಡ ಕಲ್ಲಸಂದ್ರ ಬಳಿ ಇರುವ ಮಾಹಿತಿ ಹನುಮಂತನಗರ ಪೊಲೀಸರಿಗೆ ಸಿಕ್ಕಿದೆ. ಈ ಹಿನ್ನೆಲೆ ಹನುಮಂತನಗರ ಠಾಣೆ ಸಬ್ ಇನ್ಸಪೆಕ್ಟರ್ ಬಸವರಾಜ್ ಪಾಟೀಲ್ ಹಾಗೂ ತಂಡ ಆರೋಪಿಯನ್ನು ಬಂಧಿಸಲು ಬೆಳಗ್ಗೆ ಸುಮಾರು 4:30ಕ್ಕೆ ತೆರಳಿತ್ತು. ಪೊಲೀಸರು ಕಂಡು ಗಾಬರಿಗೊಂಡ ಆರೋಪಿ ಸ್ಟಾರ್ ರಾಹುಲ್ ತನ್ನ ಬಳಿ ಇದ್ದ ಡ್ರ್ಯಾಗರ್ ಬಳಸಿ ಹೆಡ್ ಕಾನ್ಸಟೇಬಲ್ ನಿಂಗಪ್ಪ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಆತ್ಮರಕ್ಷಣೆಗೆ ಪಿಎಸ್‌ಐ ಬಸವರಾಜ್ ಪಾಟೀಲ್ ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

Recommended Video
ಕುಳ್ಳು ರಿಜ್ವಾನ್ ಅತ್ಯಾಪ್ತ ಸಹಚರರಲ್ಲಿ ಒಬ್ಬನಾಗಿದ್ದ ಸ್ಟಾರ್ ರಾಹುಲ್ ಮೇಲೆ ನಗರದ ವಿವಿಧ ಪೊಲೀಸ್ ಠಾಣೆಗಳಲ್ಲಿ 20 ಕ್ಕೂ ಹೆಚ್ಚು ಪ್ರಕರಣಗಳು ಇವೆ. ಇತ್ತೀಚಿಗೆ ಇನ್ಸ್ಟಾಗ್ರಾಂ ವಿಡಿಯೋ ಮಾಡಿದ್ದ ಸ್ಟಾರ್ ರಾಹುಲ್ ಸಿಸಿಬಿ ಹಾಗೂ ಬೆಂಗಳೂರು ಸೌತ್ ಪೊಲೀಸ್ರು ಪೂರ್ತಿ ಹುಡುಕುತ್ತಿದ್ದಾರೆ ಆದ್ರೂ ನಾನು ಸಿಗಲ್ಲ ಎಂದಿದ್ದ. ಜೊತೆಗೆ ಇನ್ನೊಬ್ಬ ರೌಡಿಶೀಟರ್ ಸೈಕಲ್ ರವಿ ಅಪ್ತ ಬೇಕರಿ ರಘು ಹತ್ಯೆಗೆ ಯತ್ನಿಸಿರುವುದಾಗಿಯೂ ವಿಡಿಯೋದಲ್ಲಿ ಹೇಳಿ ಪೊಲೀಸ್ರನ್ನ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ. ಈ ಹಿನ್ನಲೆ ಪೊಲೀಸ್ರು ಆರೋಪಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದರು. ಈತನ ಮೇಲೆ ಕೊಲೆಯತ್ನ, ಸುಲಿಗೆ, ಡಕಾಯಿತಿ ಸೇರಿದಂತೆ 20ಕ್ಕೂ ಹೆಚ್ಚು ಪ್ರಕರಣಗಳಿವೆ.ಇನ್ನು ಗಾಂಜಾ ಕೇಸ್ ಸಂಬಂಧ ಮತ್ತಷ್ಟು ರೌಡಿಶೀಟರ್‌ಗಳು ಬಲೆಗೆ ಬೀಳುವ ಸಾಧ್ಯತೆಯಿದೆ.
{document3}
-
Gold Price Today: ಇಂದು ಚಿನ್ನ-ಬೆಳ್ಳಿ ದರದಲ್ಲಿ ದಾಖಲೆಯ ಇಳಿಕೆ, 30000 ರೂ ಕುಸಿದ ಬಿಳಿ ಲೋಹ -
AI ಮೂಲಕ ಬರುವ ಉದ್ಯೋಗ ಅರ್ಜಿಗಳಿಂದ ಬೆಂಗಳೂರು ಉದ್ಯಮಿ ಬೇಸರ: 'ಅರ್ಜಿಗಳು ಜಾಸ್ತಿ, ಅರ್ಹತೆ ಕಡಿಮೆ’ -
ತಿಂಗಳಿಗೆ 50 ಸಾವಿರ ಸಂಬಳ ಇದೆಯಾ? 2026ರಲ್ಲಿ ಬೆಂಗಳೂರಿನಂತಹ ಮಹಾನಗರದಲ್ಲಿ ಜೀವನ ವೆಚ್ಚ ಎಷ್ಟಾಗುತ್ತೆ ಗೊತ್ತಾ? ಇಲ್ಲಿದೆ ಮಾಹಿತಿ -
Rain Alert: ಕರ್ನಾಟಕದಲ್ಲಿ ಮಾ.27ರವರೆಗೆ ಗುಡುಗು ಸಹಿತ ಮಳೆ, ಕರಾವಳಿಗೆ ಉಷ್ಣ ಅಲೆ ಎಚ್ಚರಿಕೆ -
Rishab Shetty: ಹೊಂಬಾಳೆ ಫಿಲ್ಮ್ಸ್ ಅನ್ಫಾಲೋ ಮಾಡಿದ ರಿಷಬ್ ಶೆಟ್ಟಿ: ಕಾಂತಾರ ಕುಟುಂಬದಲ್ಲಿ ಬಿರುಕು ವದಂತಿ -
Bengaluru Second Airport: ಬೆಂಗಳೂರು ಎರಡನೇ ವಿಮಾನ ನಿಲ್ದಾಣದ ಸ್ಥಳ: ಸಚಿವ ಎಂ.ಬಿ.ಪಾಟೀಲ್ ಮಹತ್ವದ ಮಾಹಿತಿ -
ಮಳೆ.. ಮಳೆ.. ಮುಂದಿನ 48 ಗಂಟೆಯಲ್ಲಿ ಮಳೆ ಬಗ್ಗೆ ಹವಾಮಾನ ಇಲಾಖೆ ಮಹತ್ವದ ಮಾಹಿತಿ... Karnataka Rain -
March 20 Horoscope: ಆರೋಗ್ಯ ಮತ್ತು ಹಣಕಾಸು ವಿಷಯದಲ್ಲಿ ಈ ರಾಶಿಗೆ ಲಾಭ -
Karnataka Rain: ಬೆಂಗಳೂರು ಸೇರಿ 18 ಜಿಲ್ಲೆಗಳಲ್ಲಿ ನಾಳೆವರೆಗೆ ಗುಡುಗು ಸಹಿತ ಮಳೆ ಸಾಧ್ಯತೆ -
40,000 ಹೋಟೆಲ್ ಮಾಲೀಕರಿಗೆ ಭರ್ಜರಿ ಸುದ್ದಿ, ಎಲ್ಪಿಜಿ ಸಿಲಿಂಡರ್ ನಿಯಮ ಬದಲಾವಣೆ... LPG Cylinder Supply -
ಕೇವಲ 2 ನಿಮಿಷದಲ್ಲಿ ಉದ್ಯೋಗ ಅರ್ಜಿ ರಿಜೆಕ್ಟ್: 'ಎಐ' ನೇಮಕಾತಿ ಬಗ್ಗೆ ಭಾರತೀಯ ಮೂಲದ ವಿದ್ಯಾರ್ಥಿನಿ ಬೇಸರ -
Gold Rate Today: ಬೆಂಗಳೂರಿನಲ್ಲಿ ಚಿನ್ನದ ದರ ಮತ್ತೆ ಏರಿಕೆ: 15,000 ರೂಪಾಯಿ ಗಡಿ ದಾಟಿದ 24 ಕ್ಯಾರೆಟ್ ಚಿನ್ನ












Click it and Unblock the Notifications