Bengaluru: ನಮ್ಮ ಮೆಟ್ರೊ ರೀತಿಯಲ್ಲಿಯೇ ಬಿಎಂಟಿಸಿ ಬಸ್‌ಗಳಲ್ಲಿ 'ಶಕ್ತಿ' ಸ್ಮಾರ್ಟ್ ಕಾರ್ಡ್- ಮಾಹಿತಿ, ವಿವರ
ಬೆಂಗಳೂರು, ಜುಲೈ 21: ಸರ್ಕಾರಿ ಬಸ್‌ಗಳಲ್ಲಿ ಮಹಿಳೆಯರಿಗೆ ಉಚಿತವಾಗಿ ಪ್ರಯಾಣಿಸಲು ಕರ್ನಾಟಕ ಸರ್ಕಾರ 'ಶಕ್ತಿ' ಸ್ಮಾರ್ಟ್ ಕಾರ್ಡ್‌ಗಳನ್ನು ವಿತರಿಸಲು ಮುಂದಾಗಿದೆ. ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯು (ಬಿಎಂಟಿಸಿ) ಪ್ರಯಾಣಿಕರಿಗೆ ಬೆಂಗಳೂರು ಮೆಟ್ರೊದಲ್ಲಿ ಬಳಸುವ ಸ್ಮಾರ್ಟ್‌ಕಾರ್ಡ್‌ಗಳನ್ನು ಅಳವಡಿಸಲು ಯೋಜಿಸಿದೆ.
ಕರ್ನಾಟಕ ಸರ್ಕಾರವು ರಾಜ್ಯಾದ್ಯಂತ ಮಹಿಳೆಯರಿಗೆ ಉಚಿತ ಪ್ರಯಾಣವನ್ನು ಒದಗಿಸುವ 'ಶಕ್ತಿ' ಯೋಜನೆಯನ್ನು ಪ್ರಾರಂಭಿಸಿದೆ. ಇದರ ನಂತರ ಬಸ್‌ಗಳಲ್ಲಿ ಜನಸಂದಣಿಯು ವೇಗವಾಗಿ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಬಸ್ ಕಂಡಕ್ಟರ್‌ಗಳು ಟಿಕೆಟ್ ನೀಡುವಾಗ ಹಲವು ತೊಂದರೆಗಳನ್ನು ಎದುರಿಸುತ್ತಿದ್ದಾರೆ. ಇದನ್ನು ತೊಂದರೆಗಳನ್ನು ತಗ್ಗಿಸಲು ಬಿಎಂಟಿಸಿ ಉಪಾಯವನ್ನು ಮಾಡಿದೆ.

ಬಿಎಂಟಿಸಿ ಬಸ್‌ಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳನ್ನು ಅಳವಡಿಸಬಹುದು. ಮೆಟ್ರೊ ಪ್ರಯಾಣಿಸಲು ಬಳಸುವಂತೆಯೇ ಬಿಎಂಟಿಸಿ ಬಸ್‌ಗಳಲ್ಲಿ ಸ್ಮಾರ್ಟ್ ಕಾರ್ಡ್‌ಗಳು ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಲಭ್ಯವಾಗಿದೆ. ಪ್ರಯಾಣಿಕರು ಬಸ್ ಹತ್ತುವಾಗ ಮತ್ತು ಇಳಿಯುವಾಗ ಸೆನ್ಸಾರ್‌ನಲ್ಲಿ ಅವುಗಳನ್ನು ಟ್ಯಾಪ್ ಮಾಡಬೇಕು ಎಂದು ಟಿವಿ9 ಕನ್ನಡ ವರದಿ ಮಾಡಿದೆ.
ಶಕ್ತಿ ಯೋಜನೆಯನ್ನು ಅನುಷ್ಠಾನಗೊಳಿಸುವುದರಿಂದ ದೀರ್ಘಾವಧಿಯಲ್ಲಿ ನಿಗಮಕ್ಕೆ ಲಾಭಕ್ಕಿಂತ ಹೆಚ್ಚಿನ ನಷ್ಟವಾಗುತ್ತದೆ ಎಂದು ಹೇಳಲಾಗುತ್ತಿದೆ. ಆದರೆ, ಇದನ್ನು ನಿಗಮ ಹಾಗೂ ಸರ್ಕಾರಗಳು ಹೇಗೆ ನಿಭಾಯಿಸುತ್ತವೆ ಎಂಬುದನ್ನು ಕಾದುನೋಡಬೇಕಿದೆ.
ಶಕ್ತಿ ಯೋಜನೆಯನ್ನು ಪ್ರಾರಂಭಿಸಿದಾಗಿನಿಂದ, ಕರ್ನಾಟಕದಲ್ಲಿ 22 ಕೋಟಿಗೂ ಹೆಚ್ಚು ಮಹಿಳೆಯರು ಪ್ರೀಮಿಯಂ ಅಲ್ಲದ ಸರ್ಕಾರಿ ಬಸ್‌ಗಳಲ್ಲಿ ಉಚಿತವಾಗಿ ಪ್ರಯಾಣಿಸಿದ್ದಾರೆ. ಈ ಯೋಜನೆಯು ಬಹಳ ಜನಪ್ರಿಯವಾಗಿದೆ. ಬಸ್‌ಗಳಲ್ಲಿ ಜನಸಂದಣಿ ಹೆಚ್ಚಿದ್ದರೂ, ಮಹಿಳೆಯರು ಸರ್ಕಾರಿ ಬಸ್‌ಗಳಲ್ಲೇ ಪ್ರಯಾಣಿಸುತ್ತಿರುವುದನ್ನು ನಾವು ಕಾಣಬಹುದು.

ಮಹಿಳೆಯರಿಗೆ ಉಚಿತ ಪ್ರಯಾಣ ಕಲ್ಪಿಸುವ 'ಶಕ್ತಿ' ಯೋಜನೆ ಜಾರಿಯಿಂದ ಸರ್ಕಾರಿ ಬಸ್‌ಗಳಲ್ಲಿ ಪ್ರಯಾಣಿಕರ ಸಂಖ್ಯೆ ಹೆಚ್ಚಿದ್ದು, ಹೆಚ್ಚಿನ ಬಸ್‌ಗಳನ್ನು ಅಳವಡಿಸಬೇಕೆಂಬ ನಿರಂತರ ಬೇಡಿಕೆ ಇದೆ.
ನಗರದ ಪ್ರಯಾಣಿಕರ ಬೇಡಿಕೆಯನ್ನು ಪರಿಹರಿಸಲು ಎರಡು ಹೊಸ ಬಸ್ ಮಾರ್ಗಗಳನ್ನು ಬಿಎಂಟಿಸಿ ಪ್ರಾರಂಭಿಸಿದೆ. ಮೊದಲ ಮಾರ್ಗವು ಶಿವಾಜಿನಗರದಿಂದ ಯಲಹಂಕ ಸ್ಯಾಟಲೈಟ್ ಟೌನ್‌ಗೆ ಮತ್ತು ಎರಡನೇ ಮಾರ್ಗವು ಶಿವಾಜಿನಗರದಿಂದ ಬ್ಯಾಟರಾಯನಪುರಕ್ಕೆ ಸಂಪರ್ಕ ಕಲ್ಪಿಸಲಿದೆ. ಶಿವಾಜಿನಗರದಿಂದ ಈ ಎರಡು ಮಾರ್ಗಗಳಲ್ಲಿ ನಾನ್ ಎಸಿ ಬಸ್ಸುಗಳಿರುತ್ತವೆ.
ಬಿಎಂಟಿಸಿ ಬಸ್ ಸಂಖ್ಯೆ 290-ಇಬಿ ಶಿವಾಜಿನಗರ ಬಸ್ ನಿಲ್ದಾಣದಿಂದ ಹೊರಟು ಯಲಹಂಕ ಸ್ಯಾಟಲೈಟ್ ಟೌನ್ ತಲುಪಲಿದೆ. ಟ್ಯಾನರಿ ರಸ್ತೆ, ನಾಗವಾರ, ಆರ್‌ಕೆ ಹೆಗಡೆ ನಗರ, ಚೊಕ್ಕನಹಳ್ಳಿ, ಅಗ್ರಹಾರ ಲೇಔಟ್ ಮತ್ತು ಕೋಗಿಲು ಕ್ರಾಸ್‌ನಲ್ಲಿ ಬಸ್ ನಿಲುಗಡೆಯಾಗಲಿದೆ.

ಶಿವಾಜಿನಗರ ಬಸ್ ನಿಲ್ದಾಣದಿಂದ ಬ್ಯಾಟರಾಯನಪುರಕ್ಕೆ ಹೋಗುವ ಎರಡು ಬಸ್‌ಗಳಿಗೆ ಬಸ್ ಸಂಖ್ಯೆ 290-ಎಸ್ ಅನ್ನು ನೀಡಲಾಗಿದೆ. ಈ ಮಾರ್ಗದಲ್ಲಿ ಸಂಚರಿಸುವ ಬಸ್‌ಗಳು ಟ್ಯಾನರಿ ರಸ್ತೆ, ನಾಗವಾರ, ಥಣಿಸಂದ್ರ, ಮೇಸ್ತ್ರಿ ಪಾಳ್ಯ, ಶ್ರೀರಾಂಪುರ ಮತ್ತು ಜಕ್ಕೂರು ಲೇಔಟ್‌ನಲ್ಲಿ ನಿಲ್ಲುತ್ತವೆ.












Click it and Unblock the Notifications