BMTC Bus Video: ಸಹ ಪ್ರಯಾಣಿಕಳಿಗೆ ಲೈಂಗಿಕ ಕಿರುಕುಳ, ಧೈರ್ಯ ಪ್ರದರ್ಶಿಸಿದ ಮಹಿಳೆ! ಮುಂದಾಗಿದ್ದೇನು?
ಬೆಂಗಳೂರು, ಮೇ 06: ರಾಜಧಾನಿ ಬೆಂಗಳೂರು ಇತ್ತೀಚಿನ ದಿನಗಳಲ್ಲಿ ಕೆಲವು ಅಸಹ್ಯಕರ ಪ್ರಕರಣಗಳಿಗೆ ಸಾಕ್ಷಿಯಾಗುತ್ತಿದೆ. ಅಪರಾಧ ಪ್ರಕರಣಗಳು, ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳು ಮಾತ್ರವಲ್ಲದೇ, ಸಾರ್ವಜನಿಕ ಸ್ಥಳಗಳಲ್ಲಿ ಅಹಿತಕರ ನಡವಳಿಕೆ ಪ್ರದರ್ಶನದಂತ ಪ್ರವೃತ್ತಿಗಳು ಹೆಚ್ಚಾಗಿವೆ. ಮೊನ್ನೆಯಷ್ಟೇ HSR ಬಡಾವಣೆಯಲ್ಲಿ ಯುವತಿ ನಗ್ನವಾಗಿ ನಡು ರಸ್ತೆಯಲ್ಲಿ ಸಂಚರಿಸಿದ್ದಳು. ಇದೀಗ BMTC ಬಸ್‌ನಲ್ಲಿ ಮುಂದೆ ಕೂತಿದ್ದ ಮಹಿಳೆ ಜೊತೆಗೆ ಸಹ ಪ್ರಯಾಣಿಕ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ ಆಗುತ್ತಿದೆ. ಈ ವಿಡಿಯೋ ಅನ್ನು @karnatakaportf ಎಕ್ಸ್ ಖಾತೆಯಿಂದ ಹಂಚಿಕೊಳ್ಳಲಾಗಿದೆ. ಬಿಎಂಟಿಸಿ ಸೇರಿದಂತೆ ಬೆಂಗಳೂರು ನಗರ ಪೊಲೀಸರಿಗೆ ಟ್ಯಾಗ್ ಮಾಡಿ ಸೂಕ್ತ ಕ್ರಮ ಕೈಗೊಳ್ಳುವಂತೆ ಆಗ್ರಹಿಸಲಾಗಿದೆ. ಈ ವ್ಯಕ್ತಿಯು ನಡವಳಿಕೆಗೆ ಸಾರ್ವಜನಿಕ ಖಂಡನೆ ವ್ಯಕ್ತವಾಗಿದೆ.

ವಿದ್ಯಾರಣ್ಯಪುರ ಮಾರ್ಗದಲ್ಲಿ ತೆರಳುತ್ತಿದ್ದ ಬಿಎಂಟಿಸಿ ಬಸ್‌ನಲ್ಲಿ ಈ ಘಟನೆ ನಡೆದಿದೆ. ಇತ್ತೀಚೆಗೆ ಮಂಗಳೂರು ವಿಭಾಗದ KSRTC ಬಸ್‌ನಲ್ಲಿ ನಿರ್ವಾಹಕನೇ ಮಹಿಳಾ ಪ್ರಯಾಣಿಕಳ ಖಾಸಗಿ ಅಂಗ ಸ್ಪರ್ಶಿಸುವ, ಲೈಂಗಿಕ ಕಿರುಕುಳದ ವಿಡಿಯೋ ವೈರಲ್ ಆಗಿತ್ತು. ಆ ಚಾಲಕನನ್ನು ಸಾರಿಗೆ ಇಲಾಖೆ ಅಮಾನತು ಮಾಡಿದೆ. ಈ ಪ್ರಕರಣ ಮಾಸುವ ಮುನ್ನವೇ ಬೆಂಗಳೂರಿನ ಬಿಎಂಟಿಸಿ ಬಸ್ ನಲ್ಲಿ ಇಂಥದ್ದೊಂದು ಘಟನೆ ನಡೆದಿರುವುದು ಕಳವಳಕಾರಿ ಸಂಗತಿಯಾಗಿದೆ.
An incident on a @BMTC_BENGALURU bus near Vidyaranyapura has raised serious concerns about public behavior and safety. A woman was seated and using her phone when an elderly man sitting behind her began acting in a highly inappropriate manner. He repeatedly touched the back of… pic.twitter.com/iorcMrFAPV
— Karnataka Portfolio (@karnatakaportf) May 5, 2025
ಮಹಿಳೆ ಧೈರ್ಯ ಪ್ರದರ್ಶನ: ವೈರಲ್ ವಿಡಿಯೋದಲ್ಲಿ ಏನಿದೆ?
ವಿದ್ಯಾರಣ್ಯಪುರ ಮಾರ್ಗದ ಬಿಎಂಟಿಸಿ ಬಸ್‌ನಲ್ಲಿ ಮುಂದೆ ಕೂತಿದ್ದ ಮಹಿಳೆಯನ್ನು ಹಿಂಬದಿಯಿಂದ ವಯಸ್ಸಾದ ವ್ಯಕ್ತಿ (ಸಹ ಪ್ರಯಾಣಿಕ) ಕೈ ಬಿಡುತ್ತಿರುವುದು ಗೊತ್ತಾಗಿದೆ. ಮಹಿಳೆಯ ಹಿಂದಿನ ಸೀಟಿನಲ್ಲಿ ಕೂತಿದ್ದ ಪ್ರಯಾಣಿಕ ಮುಂದಿನ ಮಹಿಳೆಯನ್ನು ಸ್ಪರ್ಶಿಸಲು ಯತ್ನಿಸಿದ್ದಾನೆ. ಕೆಲವು ಬಾರಿ ಇದನ್ನು ಮಾಡಿದ್ದು, ಈತನ ಅನುಚಿತ ವರ್ತನೆಯಿಂದ ಮಹಿಳೆ ಕ್ರೋಧಗೊಂಡಿದ್ದಾರೆ.
ಈ ವ್ಯಕ್ತಿಯು ತಲೆಗೆ ಟೋಪಿ ಹಾಕಿದ್ದು, ಮುಸ್ಲಿಂ ವ್ಯಕ್ತಿಯಾಗಿದ್ದಾನೆ. ಈತ ಪದೇ ಪದೇ ಮಹಿಳೆಯನ್ನು ಮುಟ್ಟುವುದನ್ನು ಪುನರಾವರ್ತಿಸಿದ್ದಾನೆ. ಮಹಿಳೆ ತನ್ನ ಕೈ ಅಡ್ಡ ಇಟ್ಟುಕೊಂಡರು ತನ್ನ ಬೆರಳುಗಳಿಂದ ಅವರ ಬೆರಳುಗಳನ್ನು ಮುಟ್ಟಿದ್ದಾನೆ. ಕೂಡಲೆ ಮಹಿಳೆ ಹಿಂತಿರುಗಿ ಕಪಾಳಮೋಕ್ಷ ಮಾಡಿದ್ದಾರೆ. ಸ್ಥಳದಲ್ಲಿ ಘರ್ಷಣೆ ಸಂಭವಿಸಬಹುದೆಂದು ಅರಿತ ಆತ ಏಟು ತಿಂದು ಕೂಡಲೇ ಬಸ್ ನಿಂದ ಇಳಿದು ಹೋಗಿದ್ದಾನೆ. ಇದೆಲ್ಲವನ್ನು ಬೇರೊಬ್ಬರು ಪ್ರಯಾಣಿಕರು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿದಿದ್ದಾರೆ.
ಯಾವುದೇ ಸಮುದಾಯದ ವ್ಯಕ್ತಿ ಈ ರೀತಿ ಮಾಡಿದರೂ ಅದು ಸ್ವೀಕಾರಾರ್ಹವಲ್ಲ. ಸಾರ್ವಜನಿಕ ಸ್ಥಳಗಳು, ಸಾರ್ವಜನಿಕ ಸಾರಿಗೆಗಳಲ್ಲಿ ಇಂತಹ ಅನುಚಿತ ವರ್ತನೆಗೆ ಕಡಿವಾಣ ಹಾಕಬೇಕು. ಪದೇ ಪದೇ ಮಹಿಳೆಯ ತಾಳ್ಮೆ ಪರೀಕ್ಷಿಸಬಾರದು. ಮಹಿಳೆಯರು ಧೈರ್ಯ ಪ್ರದರ್ಶಿಸಬೇಕಿದೆ.












Click it and Unblock the Notifications