Seaweed Paper Tricolour Flag: ಬೆಂಗಳೂರಲ್ಲಿ ಪರಿಸರ ಸ್ನೇಹಿ ಧ್ವಜ ಉಚಿತ ವಿತರಣೆ, ಅದರ ವಿಶೇಷತೆ ತಿಳಿಯಿರಿ
ಬೆಂಗಳೂರು, ಆಗಸ್ಟ್ 13: ಸ್ವಾತಂತ್ರ್ಯ ದಿನಾಚರಣೆ ಆಗಸ್ಟ್ 15ರ ಪ್ರಯುಕ್ತ 'ಸೀಡ್ ಪೇಪರ್ ಇಂಡಿಯಾ' ಸಂಸ್ಥೆಯು ಪ್ಲಾಸ್ಟಿಕ್ ಅಲ್ಲದ ಪರಿಸರ ಸ್ನೇಹಿ ವಿನೂತನ ತ್ರಿವರ್ಣ ಧ್ವಜಗಳನ್ನು ತಯಾರಿಸಿದ್ದಾರೆ. ಕಡಲಕಳೆಯಿಂದ ರಚಿಸಲಾದ ಈ ಭಾವುಟದ 'ಸೀವೀಡ್ ತ್ರಿವರ್ಣ ಕಾಗದ ಧ್ವಜ' ವನ್ನು ಬೆಂಗಳೂರಿನಲ್ಲಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಸಂಸ್ಥೆ ವಿತರಣೆ ಮಾಡಲಿದೆ.
ಸುಸ್ಥಿರತೆಗೆ ಈ ಸೀಡ್ ಪೇಪರ್ ಇಂಡಿಯಾ ಖ್ಯಾತಿ ಪಡೆದಿದೆ. ಆಗಸ್ಟ್ 14 ರಂದು ತಾನು ತಯಾರಿಸಿದ ಈ ಸೀವೀಡ್ ತ್ರಿವರ್ಣ ಧ್ವಜಗಳನ್ನು ಕೋರಮಂಗಲದಲ್ಲಿ ಬೆಳಗ್ಗೆ 11 ರಿಂದ ಮಧ್ಯಾಹ್ನ 2 ರವರೆಗೆ 1,000 ಮಂದಿ ಸಾರ್ವಜನಿಕರಿಗೆ ವಿತರಣೆ ಮಾಡಲು ಈ ನೀರ್ಧರಿಸಿದೆ. ಈ ಮೂಲಕ ಪರಿಸರಕ್ಕೆ ಕೊಡುಗೆ ನೀಡುತ್ತಿದೆ.

ಈ ಸೀವೀಡ್ ತ್ರಿವರ್ಣ ಧ್ವಜಗಳು ನೀರು ತಾಕದಂತೆ (ತೇವಾಂಶ) ದೂರವಿದ್ದರೆ ಸುಮಾರು ಎರಡು ವರ್ಷಗಳ ಬಾಳಿಕೆ ಬರುತ್ತವೆ. ನಂತರ ಅವುಗಳನ್ನು ವಿಲೇವಾರಿ ಮಾಡಿದರೆ ಜೈವಿಕ ವಿಘಟನೆಯಾಗುತ್ತದೆ. ಅಂದರೆ ಬೇಗ ಕೊಳೆಯುತ್ತದೆ ಎಂದು ಸೀಡ್ ಪೇಪರ್ ಇಂಡಿಯಾದ ಸಂಸ್ಥಾಪಕ ರೋಶನ್ ರಾಯ್ ಮಾಹಿತಿ ನೀಡಿದರು.
ಸ್ವಾತಂತ್ರ್ಯೋವದ ಸಂದರ್ಭದಲ್ಲಿ ಇಂತಹ ಧ್ವಜಗಳನ್ನು ರಚಿಸುವುದು ಅವುಗಳ ಬಳಕೆಯು ಪರಿಸರಕ್ಕೆ ಸುರಕ್ಷಿತತೆ ಒದಗಿಸುತ್ತದೆ. ಸುಸ್ಥಿರ ವಸ್ತುಗಳ ಬಳಕೆ ಪ್ರಯೋಜನೆ ಪ್ರಮುಖ ಚರ್ಚೆಗಳಿಗೆ ಕಾರಣವಾಗುತ್ತದೆ. ಈ ಭಾರಿಯ ಸ್ವಾತಂತ್ರ್ಯೋತ್ವದಲ್ಲಿ ಈ ಕಡಲಕಳೆ ಆಧಾರಿತ ತ್ರಿವರ್ಣ ಧ್ವಜಗಳು ಸುಸ್ಥಿರತೆ ಮತ್ತು ಸಂರಕ್ಷಣೆಗೆ ಭಾರತದ ಭಕ್ತಿಯ ಸಂದೇಶ ಸಾರಲಿವೆ.
ಮಾಲಿನ್ಯವೇ ತುಂಬಿರುವ ಇಂದಿನ ದಿನಮಾನಳಲ್ಲಿ ಬೀಜ ಒಳಗೊಂಡ ಕಾಗದದ ಧ್ವಜಗಳ (ಸೀಡ್ ಪೇಪರ್ ಫ್ಲಾಗ್) ಪರಿಕಲ್ಪನೆ ಮತ್ತು ಪ್ಲಾಸ್ಟಿಕ್ ಪ್ರತಿರೂಪಗಳನ್ನು ಬದಲಿಸುವ ಸಾಮರ್ಥ್ಯವು ಭೂಮಿಗೆ ಒಂದು ಜೀವಸೆಲೆಯಾಗಿ ನೆಲೆಗೊಳ್ಳುತ್ತದೆ. ಅಂದರೆ ಪ್ಲಾಸ್ಟಿಕ್ ನಂತಹ ವಸ್ತುಗಳ ಬಳಕೆಯಷ್ಟು ಆದಷ್ಟು ಕಡಿಮೆ ಮಾಡಲು ಇಂತಹ ಪ್ರಯೋಗಗಳು ಸಹಕಾರಿಯಾಗುತ್ತವೆ.

ಈ ವರ್ಷ ತ್ರಿವರ್ಣ ಧ್ವಜ ಕಡಿಮೆ ಮಾರಾಟ?
ಕರ್ನಾಟಕ ರಾಜ್ಯದಲ್ಲಿ ಭಾರತದ ಏಕೈಕ BIS-ಪ್ರಮಾಣಿತ ರಾಷ್ಟ್ರಧ್ವಜ ಉತ್ಪಾದನಾ ಘಟಕವು ಬೆಂಗಳೂರಿನಲ್ಲಿದ್ದು, ಅದು ಈ ವರ್ಷದ ಸ್ವಾತಂತ್ರ್ಯ ದಿನಾಚರಣೆ ವೇಳೆ ಧ್ವಜಗಳ ಚಿಲ್ಲರೆ ಮಾರಾಟದಲ್ಲಿ ಕನಿಷ್ಠ ಶೇಕಡಾ 50ರಷ್ಟು ಕುಸಿತ ಕಾಣುವ ಸಾಧ್ಯತೆಗಳು ಇವೆ.
ಇದೇ ಘಟಕದಿಂದ ಕಳೆದ ಬಾರಿ ತ್ರಿವರ್ಣ ಧ್ವಜದ ಚಿಲ್ಲರೆ ಮಾರಾಟವು 30 ಲಕ್ಷ ರೂಪಾಯಿ ತಲುಪಿತ್ತು ಎಂದು ಕರ್ನಾಟಕ ಖಾದಿ ಗ್ರಾಮೋದ್ಯೋಗ ಸಂಯುಕ್ತ ಸಂಘವು ತಿಳಿಸಿದೆ. ಕಳೆದ ವರ್ಷ 75 ನೇ ಸ್ವಾತಂತ್ರ್ಯ ಮಹೋತ್ಸವ ಆಚರಿಸಲಾಯಿತು. ಹೀಗಾಗಿ ಆ ವರ್ಷ ಗರಿಷ್ಠ ತ್ರಿವರ್ಣ ಧ್ವಜಗಳು ಮಾರಾಟವಾಗಿವೆ. ಸದರಿ ವರ್ಷ ಮಾರಾಟ 2022ಕ್ಕೂ ಮೊದಲಿದ್ದ ಸಾಮಾನ್ಯಗಳ ದಿನಗಳ ಸ್ಥಿತಿಗೆ ಮರಳಲಿದೆ. 10-15 ಲಕ್ಷ ರೂಪಾಯಿಗಳ ಚಿಲ್ಲರೆ ಮಾರಾಟವನ್ನು ನಿರೀಕ್ಷೆ ಮಾಡಲಾಗಿದೆ.
ಆಗಸ್ಟ್ 15ಕ್ಕೆ ಮೆಗಾ ಸೈಕ್ಲಿಂಗ್ ಕಾರ್ಯಕ್ರಮ
ನಗರದಲ್ಲಿ ಭಾರತದ 76 ನೇ ಸ್ವಾತಂತ್ರ್ಯ ದಿನದ ಅಂಗವಾಗಿ ರೋಟರಿ ಕ್ಲಬ್ ಆಫ್ ಬೆಂಗಳೂರು ವಿನೂತನ 'ಚಕ್ರಥಾನ್ - ಪೆಡಲ್ ಫಾರ್ ಇಂಡಿಯಾ' ಕಾರ್ಯಕ್ರಮವನ್ನು ಅನ್ನು ಹಮ್ಮಿಕೊಂಡಿದೆ. ಇದೊಂದು ಮೆಗಾ ಸೈಕ್ಲಿಂಗ್ ಕಾರ್ಯಕ್ರಮವಾಗಿದೆ. ಆಗಸ್ಟ್ 15ರಂದು ಆರಂಭವಾಗಿದೆ. ಮುಂದಿನ ವರ್ಷ 2024ರ ಜನವರಿ 26ರಂದು ಗಣರಾಜ್ಯೋತ್ಸವ ವೇಳೆ ಈ ಉಪಕ್ರಮ ಕೊನೆಗೊಳ್ಳಲಿದೆ ಎಂದು ಹೇಳಲಾಗಿದೆ.
ಈ ಸೈಕ್ಲಿಂಗ್ ಕಾರ್ಯಕ್ರಮ ಮೂಲಕ ದೇಶಾದ್ಯಂತ ರೋಟರಿ ಕ್ಲಬ್‌ಗಳು ಮತ್ತು ಸೈಕ್ಲಿಂಗ್ ಕ್ಲಬ್‌ಗಳನ್ನು ಒಟ್ಟಗೂಡಿಸುವ ಹಾಗೂ ಮುಂದಿನ 165 ದಿನಗಳಲ್ಲಿ 76 ಮಿಲಿಯನ್ ಕಿಮೀ ಸೈಕಲ್‌ನಲ್ಲಿ ಆರೋಗ್ಯ ಮತ್ತು ಪರಿಸರ ಜಾಗೃತಿ ಮೂಡಿಸುವುದು ಇದರ ಉದ್ದೇಶ ವಾಗಿದೆ ಎಂದು ರೋಟರಿ ಕ್ಲಬ್ ತಿಳಿಸಿದೆ.












Click it and Unblock the Notifications