ಮಳೆಗೆ ಕೊಚ್ಚಿ ಹೋದ ತಾಯಿ-ಮಗಳ ಪತ್ತೆಗೆ ಮುಂದುವರಿದ ಶೋಧ
ಬೆಂಗಳೂರು, ಅಕ್ಟೋಬರ್ 14: ಬೆಂಗಳೂರಿನಲ್ಲಿ ಸುರಿದ ಭಾರಿ ಮಳೆಗೆ ಕುರುಬರಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಕೊಚ್ಚಿ ಹೋದ ತಾಯಿ-ಮಗಳ ಪತ್ತೆಗೆ ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಶುಕ್ರವಾರ ರಾತ್ರಿ ಸುರಿದ ಮಳೆ ನೀರಿನ ರಭಸಕ್ಕೆ 50 ವರ್ಷದ ಪುಷ್ಪಾ ಹಾಗೂ ಅವರ 22 ವರ್ಷದ ಮಗಳು ಕೊಚ್ಚಿ ಹೋಗಿದ್ದು, ಇದುವರೆಗೂ ಪತ್ತೆಯಾಗಿಲ್ಲ. ಅಗ್ನಿ ಶಾಮಕ ದಳ ಸಿಬ್ಬಂದಿ ಹಾಗೂ ನಿರ್ವಹಣೆ ತಂಡ ಬೆಳಗ್ಗೆಯಿಂದ ಸತತವಾಗಿ ತಾಯಿ-ಮಗಳ ಪತ್ತೆಗೆ ಕಾರ್ಯಚರಣೆ ನಡೆಸಿವೆ. ಇದೀಗ ಲಗ್ಗೆರೆಯಲ್ಲಿ ಶೋಧ ಕಾರ್ಯ ಆರಂಭವಾಗಿದೆ.

ಕುರುಬರಹಳ್ಳಿಯ 19ನೇ ಮುಖ್ಯರಸ್ತೆಯ ಮನೆಯೊಂದರಲ್ಲಿ ವಾಸವಿದ್ದ ಇವರ ಮನೆಗೆ ಶುಕ್ರವಾರ ರಾತ್ರಿ ನೀರು ನುಗ್ಗಿದ ರಭಸಕ್ಕೆ ಶಿವದೊಡ್ಡಯ್ಯ ಪತ್ನಿ ಪುಷ್ಪಾ ಹಾಗೂ ಮಗಳು ಕೊಚ್ಚಿ ಹೋಗಿದ್ದರು.
In Pics : ಬೆಂಗಳೂರನನ್ನು ಮುಳುಗಿಸಿದ ಪ್ರಳಯಸದೃಶ ಮಳೆ
ಈ ಬಗ್ಗೆ ಪುಷ್ಪಾ ಅವರ ಪತಿ ಶಿವದೊಡ್ಡಯ ಮಹಾಲಕ್ಷ್ಮಿ ಲೇಔಟ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅದೇ ಶುಕ್ರವಾರದ ರಾತ್ರಿ ಕುರುಬರಹಳ್ಳಿಯ ರಾಜಾಕಾಲುವೆಯಲ್ಲಿ ವಾಸುದೇವ್ ಭಟ್ ಎನ್ನುವರು ಕೊಚ್ಚಿ ಹೋಗಿದ್ದರು. ಅವರ ಮೃತ ದೇಹ ಶನಿವಾರ ಬೆಳಗ್ಗೆ ಸುಮಮಹಳ್ಳಿ ಬ್ರಿಡ್ಜ್ ಬಳಿ ಪತ್ತೆಯಾಗಿದೆ.












Click it and Unblock the Notifications