ಕಲಾಸೌಧದಲ್ಲಿ ತಪ್ಪದೇ ನೋಡಿ : ಕೈಲಾಸಂ ನಾಟಕ ಸತ್ತವನ ಸಂತಾಪ
ಬೆಂಗಳೂರು, ಡಿ. 07: ಬಹುತೇಕ ಹೊಸಬರೇ ಸೇರಿ, ರಂಗಭೂಮಿಯ ಒಲವಿಗಾಗಿ ಒಟ್ಟುಗೂಡಿ "ಜ್ಯೋತಿರ್ಮೇಘ" ಎಂಬ ಪುಟ್ಟ ತಂಡವೊಂದನ್ನು ಕಟ್ಟಿಕೊಂಡು ಮೊಟ್ಟ ಮೊದಲ ಬಾರಿಗೆ ಪ್ರಯೋಗಿಸುತ್ತಿರುವ ನಾಟಕ ಟಿ.ಪಿ. ಕೈಲಾಸಂ ಅವರ "ಸತ್ತವನ ಸಂತಾಪ". ತಪ್ಪದೇ ನೋಡಿ
ಬೆಂಗಳೂರು ವಿಶ್ವವಿದ್ಯಾಲಯದ ಥಿಯೇಡರ್ ಆರ್ಟ್ ನಲ್ಲಿ ಮಾಸ್ಟರ್ ಮಾಡಿರುವ ಪ್ರಭುರಾಜ್ ಅವರಿಂದ ಐದು ದಿನಗಳ ಕಾರ್ಯಗಾರದೊಂದಿಗೆ ಈ ನಾಟಕಕ್ಕೆ ತಯಾರಿ ಆರಂಭವಾಯಿತು.
ಬಹುತೇಕ ಎಲ್ಲ ಕೈಲಾಸಂ ನಾಟಕಗಳಂತೆ, ಸತ್ತವನ ಸಂತಾಪ ನಾಟಕವು ಈಗಿನ ಸಾಮಾಜಿಕ ಸ್ಥತಿಗೆ ತುಂಬ
ಹತ್ತಿರ. ಈ ನಾಟಕವು ಹೆಂಡತಿಯನ್ನು ತನ್ನ ತಂದೆಯಿಂದ ಹಣ ಕೇಳಲು ಪದೇ ಪದೇ ಸತಾಯಿಸುವ ನರಸಿಂಹಯ್ಯ ಎಂಬ
ವ್ಯಕ್ತಿಯ ಸುತ್ತ ನಡೆಯುತ್ತದೆ. ತಂದೆಗೆ ಹಣಕ್ಕಾಗಿ ಪತ್ರ ಬಾರೆಯಲು ನಿರಾಕರಿಸುವ ಹೆಂಡತಿಗೆ ತನ್ನ ಬೆಲೆ ತಿಳಿಸಬೇಕು
ಎಂದು ತಾನು ಕೆರೆಗೆ ಬಿದ್ದು ಸತ್ತಂತೆ ನಟಿಸುತ್ತಾನೆ, ನರಸಿಂಹಯ್ಯ.

ನರಸಿಂಹಯ್ಯನ ಸಾವನ್ನು ಊರಿನ ಶ್ಯಾನುಭೋಗರು ತಮ್ಮ ಲಾಭಕ್ಕೆ ಬಳಸಿಕೊಳ್ಳುತ್ತಾರೆ. ಕೊನೆಗೆ ನರಸಿಂಹಯ್ಯನ ಬೆಲೆ ತನ್ನ ಹೆಂಡತಿಗೆ ಗೊತ್ತಾಗುತ್ತದೋ ಅಥವ ಅವನ ಹೆಂಡತಿಗೆ ತನ್ನ ಗಂಡನ ಬೆಲೆ ಗೊತ್ತಾಗುತ್ತೋ, ಅಥವ ಯಾರ ಬೆಲೆ ಮತ್ತು
ಯೋಗ್ಯತೆಗಳು ಯಾರಿಗೆ ಅರಿವಾಗುತ್ತೆ ಎಂಬುದು ಈ ನಾಟಕದ ಕಥಾ ವಸ್ತು.
ನಾಟಕದ ಹೆಸರು: ಸತ್ತವನ ಸಂತಾಪ
ತಂಡ: ಜ್ಯೋತಿರ್ಮೇಘ
ನಿರ್ದೇಶನ: ಕಿರಣ್ ಪ್ರಭು
ಸಹ ನಿರ್ದೇಶನ: ಅಜಯ್ ನಾಯಕ್
ಸಂಗೀತ: ಶಶಾಂಕ್ ಪ್ರಣವ್
ಬೆಳಕು: ಮನಸ್ ಸಂಪತ್
ರಂಗ ಸಜ್ಜಿಕೆ: ಮಂಜು ಬಿ.ಎಂ.

ಪ್ರದರ್ಶನದ ಸ್ಥಳ: ಕೆ.ಹೆಚ್. ಕಲಾಸೌಧ
ದಿನಾಂಕ: ಡಿಸೆಂಬರ್ 9, 2015.
ಸಮಯ: ಸಂಜೆ 7.30
ಟಿಕೆಟ್ ದರ: 100 /
ಟಿಕೆಟುಗಳು ಫಿಲ್ಮೀ ಸ್ಪಿಯರ್ ನಲ್ಲಿ ಲಭ್ಯ
ಪಾತ್ರವರ್ಗ
1. ಕಿರಣ್ ಚನ್ನವೀರ್ (ನರಸಿಂಹಯ್ಯ)
2. ಸಿಂಧು ಪುರೋಹಿತ್ (ಲಕ್ಷಮ್ಮ)
3. ಅಲ್ತಾಫ್ (ಶ್ಯಾನುಭೋಗ)
4. ಅಶ್ವಿನಿ (ಕೆಂಪಮ್ಮ)
5. ಪ್ರವೀಣ್ (ಧರಣ್ಣಯ್ಯ)
6. ನಿಖಿಲ್ ವಾಯ್ಕರ್ (ಸದಾಶಿವಯ್ಯ)
7. ಅರ್ಜುನ್ ಕುಮಾರ್ (ವೆಂಕಟರಮಣ ಶೆಟ್ರು)
8. ಪವನ್ ಕುಮಾರ್ ಎ (ಪೊಲೀಸ್ ಇನ್ಸ್ಪೆಕ್ಟರ್)
9. ಆಕಾಶ (ಪೊಲೀಸ್ ಪೇದೆ)
10. ಅನಿರುಧ್ಧ ರಮೇಶ, ಶ್ರೀನಿಧಿ, ಚೇತನ್ ಕ.ಜೆ, ವರುಣ್ (ದನಕಾಯುವವರು)
ಸಹಕಾರ: ಅವಿನಾಶ ಶಾಸ್ತ್ರಿ, ವರ್ಷ ವ.ಕೆ. ರಾವ್, ಧೀರಜ್, ವಿನಯ್, ಮನೋಜ್ ಎನ್.
Our Facebook page: http://facebook.com/jyotirmegha
Food partner: South Kitchen
Online partner: One India
Ticketing partner: Filmy sphere












Click it and Unblock the Notifications