Get Updates
Get notified of breaking news, exclusive insights, and must-see stories!

ನ.20ರಂದು 'ಸತ್ತವನ ಸಂತಾಪ' ನಾಟಕದ 5ನೇ ಪ್ರದರ್ಶನ

ನಾಲ್ಕು ಪ್ರದರ್ಶನಗಳನ್ನು ಯಶಸ್ವಿಯಾಗಿ ಪ್ರದರ್ಶಿಸಿರುವ ಜ್ಯೋತಿರ್ಮೇಘ ನಾಟಕ ತಂಡವು ಈಗ 5ನೇ ಪ್ರದರ್ಶನ ಮಾಡಲು ಸಜ್ಜಾಗಿದೆ. ಇದೇ ನವೆಂಬರ್ 20 ರಂದು ಮಲ್ಲತಹಳ್ಳಿ ಕಲಾಗ್ರಾಮದಲ್ಲಿ ಪ್ರದರ್ಶನಗೊಳ್ಳಲಿದೆ.

ಬೆಂಗಳೂರು, ನವೆಂಬರ್. 19: ನಾಲ್ಕು ಯಶಸ್ವಿ ಪ್ರದರ್ಶನಗಳ ಬಳಿಕ ಇದೀಗ ಜ್ಯೋತಿರ್ಮೇಘ ನಾಟಕ ತಂಡವು ಕೈಲಾಸಂ ಬರೆದಿರುವ "ಸತ್ತವನ ಸಂತಾಪ" ಎಂಬ ನಾಟಕದ ಐದನೇ ಪ್ರದರ್ಶನಕ್ಕೆ ಅಣಿಯಾಗಿದೆ. ಇದೇ (ನ.20) ಭಾನುವಾರ ಬೆಂಗಳೂರಿನ ಮಲ್ಲತಹಳ್ಳಿ ಕಲಾಗ್ರಾಮದಲ್ಲಿ ಸಂಜೆ 7.30ಕ್ಕೆ ಪ್ರದರ್ಶನಗೊಳ್ಳಲಿದೆ.

ಈ "ಸತ್ತವನ ಸಂತಾಪ" ನಾಟಕದಲ್ಲಿ ರಾಜಕೀಯ ಕುತಂತ್ರ, ಭ್ರಷ್ಟಾಚಾರ ಮತ್ತು ಲಂಪಟತನಗಳು ಸಮಾಜದಲ್ಲಿ ಅಂದಿನಿಂದ ಇಂದಿನವರೆಗೂ ಅಳಿಸಾಗದ ಒಂದು ಕಪ್ಪು ಚುಕ್ಕಿ ಎಂಬ ಸಾರವನ್ನು ವಿಡಂಬನೆಯ ಮೂಲಕ ವ್ಯಕ್ತಪಡಿಸಿದ್ದು, ಅದಕ್ಕೆ ಹಾಸ್ಯದ ಲೇಪನದ ಮೂಲಕ ಸಮಾಜಕ್ಕೆ ಕೈಗನ್ನಡಿಯಂತಿದೆ.[ಟಿಪಿ ಕೈಲಾಸಂರ ಸತ್ತವನ ಸಂತಾಪ ನಾಟಕ ನೋಡಿ]

Sattavana Santapa drama 5th show play at mallathahalli Kalagrama

ಮಧ್ಯಮ ವರ್ಗದವರ ನೋವು, ಗಂಡ ಹೆಂಡಿರ ಪ್ರೀತಿ ಕೂಡಿದ ಜಗಳ, ಆಡು ಭಾಷೆಯ ಮಾತುಗಳು, ಇವೆಲ್ಲವನ್ನೂ ನಾಜೂಕಾಗಿ ಹೆಣೆದಿರುವ ಕೈಲಾಸಂ ಅವರ ಈ ನಾಟಕವು ಎಂದೆಂದಿಗೂ ಪ್ರಸತುತವಾಗಿರುವಂತೆ, ಹಾಗೇ ಯೋಚೆನೆಗೆ ಈಡುವಾಡುವಂತೆ ಬರೆದಿದ್ದಾರೆ.

ಸಾವಿನ ಸುತ್ತ ನಡೆಯುವ ತಂತ್ರ-ಪ್ರತಿ ತಂತ್ರಗಳ, ಮಾನವನ ದುರಾದರ್ಶಗಳ ಅತ್ಯಂತ ಸೋಕ್ಷ್ಮವಾದ, ವಿಡಂಬನಾತ್ಮಕ ಹಾಸ್ಯದ ಕಥಾಹಂದರವನ್ನು ಈ ನಾಟಕವು ಹೊಂದಿದೆ. ಬೆಂಗಳೂರಿನ ಕಲಾಗ್ರಾಮದಲ್ಲಿ ಈ ನಾಟಕದ ಐದನೇ ಪ್ರದರ್ಶನವನ್ನು ನವೆಂಬರ್ 20ರಂದು ಸಂಜೆ 7.30ಕ್ಕೆ ನಡೆಯಲಿದೆ. ನಾಟಕದ ಅವಧಿ ತೊಂಭತ್ತು ನಿಮಿಷಗಳು.

ನಾಟಕದ ದರ: 100 ರೂ.
ಆನ್ ಲೈನ್ ಟೆಕೆಟ್ ಬುಕ್ಕಿಂಗ್ ಗಾಗಿ ಇಲ್ಲಿ ಕ್ಲಿಕ್ಕಿಸಿ .

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+