ಜೈಲಿನಿಂದ ಪೆರೋಲ್ ಮೇಲೆ ಬಿಡುಗಡೆಯಾದ ಶಶಿಕಲಾಗೆ ಹಾಕಿರುವ ಷರತ್ತುಗಳಿವು

Recommended Video

      Sasikala Natarajan gets 5-day parole to visit ailing husband | Oneindia Kannada

      ಬೆಂಗಳೂರು, ಅಕ್ಟೋಬರ್ 6: ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲಿನಲ್ಲಿ ಶಿಕ್ಷೆ ಅನುಭವಿಸುತ್ತಿರುವ ಶಶಿಕಲಾ ನಟರಾಜನ್ ಗೆ 5 ದಿನಗಳ ಪೆರೋಲ್ ಮಂಜೂರು ಮಾಡಲಾಗಿದ್ದು, ಅವರು ಜೈಲಿನಿಂದ ಬಿಡುಗಡೆಯಾಗಿ ಚೆನ್ನೈಗೆ ಧಾವಿಸಿದ್ದಾರೆ.

      ಶಶಿಕಲಾ ಪತಿ ನಟರಾಜನ್ ಲಿವರ್ ಮತ್ತು ಕಿಡ್ನಿ ವೈಫಲ್ಯದಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ಈ ಹಿನ್ನಲೆಯಲ್ಲಿ ಪೆರೋಲ್ ನೀಡಲಾಗಿದೆ.

      Sasikala granted conditional parole for 5 days to visit her ailing husband

      ಹಲವು ಷರತ್ತುಗಳನ್ನು ವಿಧಿಸಿ ಜೈಲು ಅಧಿಕಾರಿಗಳು ಚಿನ್ನಮ್ಮನಿಗೆ ಪೆರೋಲ್ ನೀಡಿದ್ದಾರೆ. ಪೆರೋಲ್ ಅವಧಿಯಲ್ಲಿ ಶಶಿಕಲಾ ಪತಿ ಚಿಕಿತ್ಸೆ ಪಡೆಯುತ್ತಿರುವ ಆಸ್ಪತ್ರೆ ಹಾಗೂ ಅರ್ಜಿಯಲ್ಲಿ ಸೂಚಿಸಲಾದ ಮನೆಗೆ ಮಾತ್ರ ಭೇಟಿ ನೀಡಲು ಅವಕಾಶ ನೀಡಲಾಗಿದೆ.

      ಇನ್ನು ಪೆರೋಲ್ ಅವಧಿಯಲ್ಲಿ ಶಶಿಕಲಾ ಯಾರನ್ನೇ ಭೇಟಿಯಾಗುವಂತಿಲ್ಲ. ಸಾರ್ವಜನಿಕ ಹಾಗೂ ಪಕ್ಷದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವಂತಿಲ್ಲ. ಮಾಧ್ಯಮಗಳ ಜತೆ ಸಂವಾದ ನಡೆಸುವಂತಿಲ್ಲ ಎಂಬ ಷರತ್ತುಗಳನ್ನು ವಿಧಿಸಿರುವುದಾಗಿ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದ ಅಧಿಕಾರಿಗಳು ಹೇಳಿದ್ದಾರೆ.

      ಚೆನ್ನೈ ಪೊಲೀಸ್ ಆಯುಕ್ತರು ಪೆರೋಲ್ ನೀಡಲು ಒಪ್ಪಿ ಜೈಲು ಅಧಿಕಾರಿಗಳಿಗೆ ಈ-ಮೇಲ್ ಮಾಡಿದ್ದರು. ನಂತರ ಜೈಲು ಅಧಿಕಾರಿಗಳು ಹಿರಿಯ ಅಧಿಕಾರಿಗಳ ಜತೆ ಚರ್ಚೆ ನಡೆಸಿ ಷರತ್ತುಗಳ ಮೇಲೆ ಜಾಮೀನು ನೀಡಿರುವುದಾಗಿ ಶಶಿಕಲಾ ವಕೀಲರು ಹೇಳಿದ್ದಾರೆ.

      ಇನ್ನು ಚಿನ್ನಮ್ಮರನ್ನು ಕರೆದೊಯ್ಯಲು ಎಐಎಡಿಎಂಕೆಯ ಬಂಡಾಯ ನಾಯಕ ಟಿಟಿವಿ ದಿನಕರನ್ ಬೆಂಗಳೂರಿನ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಂದಿದ್ದರು. ಅವರ ಜತೆ ಚಿನ್ನಮ್ಮ ಚೆನ್ನೈಗೆ ತೆರಳಿದ್ದಾರೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+