ನಾಳೆ ನಡೆಯಲಿದೆ 'ಸರ್ಗ' ನಾಟಕ: ಹೇಳಲಿದೆ ಅದು ರಂಗಭೂಮಿಯ ಕೌತುಕ
ಸಾಮಾನ್ಯವಾಗಿ ನಾಟಕಗಳನ್ನು ಎಲ್ಲರೂ ನೋಡಿರುತ್ತಾರೆ. ಆದರೆ ಒಂದು ನಾಟಕದ ಹಿಂದೆ ನಡೆಯುವ ಕುತೂಹಲಕಾರಿ ಘಟನೆಗಳು ಅನೇಕರಿಗೆ ತಿಳಿದಿರುವುವಿಲ್ಲ. ಆ ರೀತಿ ರಂಗಭೂಮಿಯ ಹಿಂದೆ ಆಗುವ ಸಂಗತಿಗಳನ್ನು ಇಟ್ಟುಕೊಂಡು ಮಾಡಿರುವ ನಾಟಕ ಇದೇ ಶನಿವಾರ ಅಂದರೆ ನಾಳೆ ಪ್ರದರ್ಶನ ಆಗುತ್ತಿದೆ. ಅದೇ 'ಸರ್ಗ'.
'ಸರ್ಗ' ಸೈಡ್ ವಿಂಗ್ ಬೆಂಗ್ಳೂರ್ ರಂಗ ತಂಡದ ಹೆಮ್ಮೆಯ ನಾಟಕ. ಭರತ್ ಸ ಜಗ್ಗನ್ನಾಥ್ ಈ ನಾಟಕದ ರಚನೆ ಮತ್ತು ನಿರ್ದೇಶನ ಮಾಡಿದ್ದಾರೆ. ಇದೊಂದು ಪ್ರಯೋಗಾತ್ಮಕ ನಾಟಕ ಆಗಿದೆ. ನಾಟಕದ ಒಳಗಡೆ ಒಂದು ನಾಟಕ ನಡೆಯುತ್ತಿರುತ್ತದೆ. ಅದರ ಮೂಲಕ ಪ್ರಸ್ತುತ ರಂಗಭೂಮಿಯಲ್ಲಿ ನಡೆಯುವ ವಿದ್ಯಮಾನವನ್ನು ಪರಿಣಾಮಕಾರಿ ಹೇಳಲಾಗಿದೆ.

ಈ ನಾಟಕ ನೋಡಿದವರಿಗೆ ರಂಗಭೂಮಿ ಬಗ್ಗೆ ಗೌರವ ಮೂಡುತ್ತದೆ. ಮತ್ತೊಂದು ಕಡೆ ಸಿಕ್ಕಾಪಟ್ಟೆ ಪಂಚಿಂಗ್ ಡೈಲಾಗ್ ಗಳು ಇದ್ದು, ಮಜಾ ನೀಡುತ್ತದೆ. ಅಂದಹಾಗೆ, ಈಗಾಗಲೇ ಐದು ಯಶಸ್ಸಿ ಪ್ರದರ್ಶನ ಕಂಡಿರುವ ಈ ನಾಟಕದ ಆರನೇ ಪ್ರದರ್ಶನ ಈ ಶನಿವಾರ ಬೆಂಗಳೂರಿನ ಮಲ್ಲತಹಳ್ಳಿಯಲ್ಲಿರುವ ಜ್ಞಾನಭಾರತಿ ಆವರಣದ ಕಲಾಗ್ರಾಮದಲ್ಲಿ ಸಂಜೆ 7.30 ನಡೆಯಲಿದೆ.
ಸೈಡ್ ವಿಂಗ್ ಬೆಂಗ್ಳೂರ್ ರಂಗ ತಂಡದ ಈಗಾಗಲೇ 'ಎ ಮಿಡ್ ಸಮ್ಮರ್ ಡೇ ಡ್ರೀಮ್ಸ್' 'ಇಲ್ಲ ಅಂದ್ರೆ ಇದೆ', 'ಸಡನ್ನಾಗ್ ಸತ್ತೋದ್ರೆ??' ಸೇರಿದಂತೆ ಅನೇಕ ಒಳ್ಳೆ ಒಳ್ಳೆಯ ನಾಟಕಗಳನ್ನು ಮಾಡಿದೆ. ಈ ತಂಡದ ಮೂಲಕ ಚಂದ್ರಶೇಖರ್ ಕಂಬಾರರ 'ನಾಯೀಕತೆ' ನಾಟಕ ಸದ್ಯದಲ್ಲಿಯೇ ಪ್ರದರ್ಶನ ಆಗಲಿದ್ದು, ಅದನ್ನು ಶೈಲೇಶ್ ಕುಮಾರ್ ನಿರ್ದೇಶನ ಮಾಡಿದ್ದಾರೆ.

ನಾಟಕ : ಸರ್ಗ
ರಚನೆ, ನಿರ್ದೇಶನ: ಭರತ್ ಸ ಜಗ್ಗನ್ನಾಥ್
ಯಾವಾಗ : ನಾಳೆ (ಶನಿವಾರ) ಸಂಜೆ : 7.30ಕ್ಕೆ
-
IPL 2026 RCB: ಹ್ಯಾಜಲ್ವುಡ್, ಯಶ್ ದಯಾಳ್ ಅಲಭ್ಯರಾದ್ರೆ ಆರ್ಸಿಬಿ ಮುಂದಿರುವ 'ಪ್ಲಾನ್ ಬಿ' ಏನು? -
Jobs: ಆಯುಷ್ ಇಲಾಖೆ ನೇಮಕಾತಿ; ಬಿ.ಕಾಂ, ಬಿಬಿಎ ಓದಿದವರಿಗೆ ಬೆಂಗಳೂರಿನಲ್ಲಿ ಭರ್ಜರಿ ಉದ್ಯೋಗಾವಕಾಶ -
Karnataka weather: ಬೆಂಗಳೂರು ಸೇರಿದಂತೆ 10ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಮಳೆ ಮುನ್ಸೂಚನೆ ನೀಡಿದ IMD -
Karnataka Weather: ಮಾ.23ರಿಂದ 28ರವರೆಗೆ 10ಕ್ಕೂ ಅಧಿಕ ಜಿಲ್ಲೆಗಳಿಗೆ ಮಳೆ ಮುನ್ಸೂಚನೆ -
'ಬೆಂಗಳೂರಿನ ಬಸವನಗುಡಿಯಿಂದ ಬೆಳ್ಳಂದೂರಿಗೆ ಹೋಗಿ ದೊಡ್ಡ ತಪ್ಪು ಮಾಡಿಬಿಟ್ಟೆ': ಅಳಲು ತೋಡಿಕೊಂಡ ಕನ್ನಡಿಗ, ಭಾರೀ ವೈರಲ್ -
Pink Line Metro: ಏಪ್ರಿಲ್ನಲ್ಲಿ ಪರೀಕ್ಷೆ ಮುಕ್ತಾಯ, ಮೇ ತಿಂಗಳಲ್ಲಿ ಗುಲಾಬಿ ಮಾರ್ಗದಲ್ಲಿ ಸಂಚಾರ -
Video: ಲ್ಯಾಂಬೋರ್ಗಿನಿ ಸ್ಟಂಟ್ ಕೇಸ್: ಮುತ್ತಪ್ಪ ರೈ ಪುತ್ರ ರಿಕ್ಕಿ ರೈಗೆ ಪೊಲೀಸರಿಂದ ನೋಟಿಸ್ -
ಮೈಸೂರು, ಬೆಂಗಳೂರು, ವಿಜಯಪುರ ರೈಲು ಪ್ರಯಾಣಿಕರೇ ಗಮನಕ್ಕೆ; ರೈಲುಗಳ ಸಂಚಾರ ಭಾಗಶಃ ರದ್ದು -
NWKRTC ಬಸ್ಗಳಿಗೆ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಕೆಗೆ 'ಆಡಿಟ್' ಬಿಸಿ: ಜಗದೀಶ್ ಶೆಟ್ಟರ್ಗೆ ನಿತಿನ್ ಗಡ್ಕರಿ ಪತ್ರ -
Gold Rate Today: ಸತತ ನಾಲ್ಕನೇ ದಿನವು ಚಿನ್ನ-ಬೆಳ್ಳಿ ದರ ಭರ್ಜರಿ ಇಳಿಕೆ, ಇಂದಿನ ದರವೆಷ್ಟು? -
ಆರ್ಸಿಬಿಗೆ ಚಾರ್ಟರ್ಡ್ ಫ್ಲೈಟ್ ಸೌಲಭ್ಯದ ಬೇಡಿಕೆ ಆರೋಪ: ಒಂದೇ ಎಮೋಜಿ ಹಾಕಿ ಕಿಂಗ್ ಕೊಹ್ಲಿ ಸಷ್ಟನೆ -
Devanahalli accident: ದೇವನಹಳ್ಳಿ ಬಳಿ ಭೀಕರ ಅಪಘಾತ: ಕಾಶಿಯಾತ್ರೆಗೆ ಹೊರಟಿದ್ದ ತಿಪಟೂರಿನ ಮೂವರು ಮಹಿಳೆಯರು ಸಾವು












Click it and Unblock the Notifications