ಸಂಸ್ಕೃತ ವಿವಿ. ಫಲಿತಾಂಶ: ಸಂಗೀತಾ ಪ್ರಥಮ ಶ್ರೇಯಾಂಕ
ಬೆಂಗಳೂರು, ಜೂ.19: ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯ ಸ್ನಾತಕೋತ್ತರ ಪದವಿ ಫಲಿತಾಂಶ ಪ್ರಕಟಗೊಂಡಿದ್ದು ಬೆಂಗಳೂರಿನ ಸಂಗೀತಾ ರಮೇಶ್ ಪ್ರಥಮ ಸ್ಥಾನಿಯಾಗಿ ಹೊರಹೊಮ್ಮಿದ್ದಾರೆ.
ಸಂಸ್ಕೃತ- ತರ್ಕಶಾಸ್ತ್ರ(ವಿದ್ವತ್ ಉತ್ತಮ) ಪರೀಕ್ಷೆಯಲ್ಲಿ ಪ್ರಥಮ ಶ್ರೇಯಾಂಕ ಪಡೆದಿರುವ ಇವರು ಐದು ವಿಷಯಗಳಲ್ಲಿ 94, 90, 85, 85 ಮತ್ತು 66 ಅಂಕಗಳನ್ನು ಪಡೆಯುವ ಮೂಲಕ ಡಿಸ್ಟಿಂಕ್ಷನ್‌ನಲ್ಲಿ ತೇರ್ಗಡೆಯಾಗಿದ್ದಾರೆ.
ಬೆಂಗಳೂರಿನ ಚಾಮರಾಜ ಸಂಸ್ಕೃತ ಕಾಲೇಜಿನಲ್ಲಿ ಐದು ವರ್ಷಗಳ ಕಾಲ ವಿದ್ವತ್ ಅಧ್ಯಯನ ಮಾಡಿರುವ ಇವರು ಈಗ ವಿದುಷಿ ಪದವಿ ಪಡೆದಿದ್ದಾರೆ. ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಪೇಜಾವರ ಶ್ರೀ ವಿದ್ಯಾ ತೀರ್ಥ ಸ್ವಾಮೀಜಿ ಹೆಸರಿನಲ್ಲಿ ಕೊಡಮಾಡುವ ಚಿನ್ನದ ಪದಕ ಇವರಿಗೆ ಲಭಿಸಿದೆ.

ದಾಖಲೆ ಮಾಡುವುದನ್ನೇ ಹವ್ಯಾಸ ವಾಗಿರಿಸಿಕೊಂಡಿರುವ ಸಂಗೀತಾ ಅವರ ತಂದೆ ರಮೇಶ್ ಬಾಬು ಭಾರತದಲ್ಲೇ ಅತಿ ಹೆಚ್ಚು ದಾಖಲೆ ಮಾಡಿದ ವ್ಯಕ್ತಿ ಎಂಬ ಪಟ್ಟಕ್ಕೆ ಭಾಜನರಾಗಿದ್ದಾರೆ. ದಾಖಲೆಗಳ ಸಂಖ್ಯೆಯಿಂದಾಗಿಯೇ ಈಗ ''ರೆಕಾರ್ಡ್ ರಮೇಶ್'' ಎಂದು ಪ್ರಸಿದ್ಧಿ ಪಡೆದಿದ್ದಾರೆ. ಬೆಂಗಳೂರಿನ ಟಾಟಾ ನಗರದ ನಿವಾಸಿಯಾಗಿರುವ 57 ವರ್ಷದ ರಮೇಶ್ ಬಾಬು ವಿವಿಧ ಕ್ಷೇತ್ರದಲ್ಲಿ ತಮ್ಮನ್ನು ಸಕ್ರಿಯವಾಗಿ ತೊಡಗಿಸಿಕೊಂಡು ರಾಷ್ಟ್ರ ಮತ್ತು ವಿಶ್ವ ಮಟ್ಟದಲ್ಲಿ ದಾಖಲೆ ನಿರ್ಮಿಸುತ್ತಿದ್ದಾರೆ.[ವಿಶ್ವ ದಾಖಲೆ ವೀರ ರಮೇಶ್ ಬಾಬು ಸಂದರ್ಶನ]











Click it and Unblock the Notifications