ಪತ್ನಿ ಮೇಲೆ ಹಲ್ಲೆ: ಸ್ಯಾಂಡಲ್ ವುಡ್ ಡ್ರಗ್ ಕಿಂಗ್ ಪಿನ್ ವೈಭವ್ ಸೆರೆ

ಬೆಂಗಳೂರು ಫೆಬ್ರವರಿ 18: ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಪ್ರಮುಖ ಕಿಂಗ್ ಪಿನ್ ವೈಭವ್ ಜೈನ್ ಪತ್ನಿ ಮೇಲೆ ಹಲ್ಲೆ ನಡೆಸಿ ಮತ್ತೆ ಜೈಲು ಸೇರಿದ್ದಾನೆ ! ಪತ್ನಿ ಜತೆ ಕಿರಿಕ್ ಮಾಡಿಕೊಂಡಿರುವ ವೈಭವ್ ಜೈನ್ ವಿರುದ್ಧ ವಯ್ಯಾಲಿಕವಲ್ ಠಾಣೆ ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.

ಸ್ಯಾಂಡಲ್ ವುಡ್ ಡ್ರಗ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ವೈಭವ್ ಜೈನ್ ನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದರು. ವಯ್ಯಾಲಿಕವಲ್ ನಲ್ಲಿ ಗಿರವಿ ಅಂಗಡಿ ಇಟ್ಟುಕೊಂಡಿದ್ದ ವೈಭವ್ ಪತ್ನಿ ತನ್ನ ಮಕ್ಕಳ ಜತೆ ವಾಸವಾಗಿದ್ದರು. ಪತಿ ವೈಭವ್ ಫೈನಾನ್ಸ್ ವಹಿವಾಟು ನೋಡಿಕೊಳ್ಳುತ್ತಿದ್ದರಂತೆ. ತನ್ನ ಪತಿ ಗೀತಿಕಾ ಬಿಂದುನಾ ಎಂಬುವರೊಂದಿಗೆ ನನ್ನ ಪತಿ ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾರೆ.

ಹೀಗಾಗಿ ನನ್ನ ಜತೆ ವಿನಾಕಾರಣ ಜಗಳ ತೆಗೆದು ಹಲ್ಲೆ ನಡೆಸುತ್ತಿದ್ದಾರೆ. ವೈಭವ್ ಜೈನ್ ಡ್ರಗ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿ ಜೈಲಿಗೆ ಹೋಗಿದ್ದರು. ನೋಡಲು ಹೋದರೆ ಕರೋನಾ ಕಾರಣಕ್ಕೆ ಪೊಲೀಸರು ಅವಕಾಶ ನೀಡಿರಲಿಲ್ಲ. ದೂರವಾಣಿ ಮೂಲಕ ಮಾತನಾಡುತ್ತಿದ್ದೆ. ಅನ್ಯ ಮಹಿಳೆ ಜತೆ ಸಂಪರ್ಕ ಇಟ್ಟುಕೊಂಡಿದ್ದು ಇದೇ ಕಾರಣಕ್ಕೆ ಹಲ್ಲೆ ನಡೆಸಿದ್ದಾರೆ ಎಂದು ವೈಭವ್ ಪತ್ನಿ ದೂರಿನಲ್ಲಿ ಆರೋಪಿಸಿದ್ದಾರೆ.

bengaluru: sandalwood drug deal king pin vaibhav jain arrest in assult case

ವೈಭವ್ ಜಾಮೀನು ಪಡೆದು ಫೆ. 9 ರಂದು ಬಿಡುಗಡೆಯಾಗಿದ್ದ. ಮನೆಗೆ ಬಂದು ಎರಡು ದಿನ ಸುಮ್ಮನಾಗಿದ್ದರು. ಫೆ. 12 ರಂದು ಏಕಾ ಏಕಿ ಒಡವೆಗಳು ಎಲ್ಲಿ ಎಂದು ಪ್ರಶ್ನೆ ಮಾಡಿದ. ಆನಂತರ ನೀನು ನಿನ್ನ ಮಕ್ಕಳು ನನ್ನ ಮನೆಯಲ್ಲಿರಡಬೇಡ ಎಂದು ಹೊರಗೆ ತಳ್ಳಿದರು. ಪ್ರತಿರೋಧ ತೋರಿದ್ಧಕ್ಕೆ ನನ್ನ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ನನಗೆ ಪರಿಚಿತ ಸಂಬಂಧಿ ವ್ಯಕ್ತಿ ಅರ್ಜುನ್ ಎಂಬುವರನ್ನು ಕರೆಸಿ ನಾನು ಕೆ.ಸಿ. ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾಗಿ ವೈಭವ್ ಪತ್ನಿ ಪೂಜಾಗಾಂಧಿ ದೂರಿನಲ್ಲಿ ಆರೋಪಿಸಿದ್ದಾರೆ. ಪತ್ನಿ ನೀಡಿದ ದೂರಿನ ಮೇರೆಗೆ ವೈಭವ್ ಜೈನ್ ನನ್ನು ವಯ್ಯಾಲಿಕಾವಲ್ ಪೊಲೀಸರು ಮತ್ತೆ ಬಂಧಿಸಿದ್ದಾರೆ. ಕಳೆದ ವರ್ಷದ ಹಿಂದೆಯೂ ಪತ್ನಿ ಮೇಲೆ ಹಲ್ಲೆ ನಡೆಸಿ ವೈಭವ್ ವಿರುದ್ಧ ದೂರು ದಾಖಲಾಗಿತ್ತು.

Recommended Video

      ಮದುವೆಯಲ್ಲಿ ಟ್ರೆಂಡ್‌ಗೆ ತಕ್ಕಂತ ದುಬಾರಿ ಗಿಫ್ಟ್‌ ಪಡೆದ ನವ ದಂಪತಿಗಳು | WeddingGift | Oneindia Kannada

      ಡ್ರಗ್ ಪಾರ್ಟಿಗಳನ್ನು ಆಯೋಜಿಸುತ್ತಿದ್ದ ವೈಭವ್ ಜೈನ್ ಲಕ್ಷಾಂತರ ರೂಪಾಯಿ ಗಳಿಸುತ್ತಿದ್ದ. ಸ್ಯಾಂಡಲ್ ವುಡ್ ಡ್ರಗ್ ಡೀಲ್ ಪ್ರಕರಣದ ಪ್ರಮುಖ ಕಿಂಗ್ ಪಿನ್ ಗಳ ಜತೆ ಸಂಪರ್ಕ ಸಾಧಿಸಿದ್ದ. ಸಿಸಿಬಿ ಪೊಲೀಸರ ತನಿಖೆ ವೇಳೆ ವೈಭವ್ ಹೆಸರು ಹೊರಗೆ ಬಂದಿತ್ತು. ಆ ಬಳಿಕ ಬಂಧನಕ್ಕೆ ಒಳಗಾಗಿದ್ದ ವೈಭವ್ ಇದೀಗ ಪತ್ನಿ ಜತೆ ಕಿರಿಕ್ ಮಾಡಿಕೊಂಡು ಮತ್ತೆ ಜೈಲಿಗೆ ಹೋಗಿದ್ದಾನೆ.

      Notifications
      Settings
      Clear Notifications
      Notifications
      Use the toggle to switch on notifications
      • Block for 8 hours
      • Block for 12 hours
      • Block for 24 hours
      • Don't block
      Gender
      Select your Gender
      • Male
      • Female
      • Others
      Age
      Select your Age Range
      • Under 18
      • 18 to 25
      • 26 to 35
      • 36 to 45
      • 45 to 55
      • 55+