ಬೆಂಗಳೂರು: ಚಿತ್ರಕಲಾ ಪರಿಷತ್‌ನಲ್ಲಿ ಸಂಪೂರ್ಣ ಸಂತೆ

ಬೆಂಗಳೂರು, ಜೂ.13: ಕರಕುಶಲ ಕಲೆ ಹಾಗೂ ಇತರೆ ಕಲೆಗೆ ಸಂಬಂಧಪಟ್ಟ ಕಲಾವಿಧಾನಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ 'ಸಂಪೂರ್ಣ‌ ಸಂತೆ ನಗರದ ಚಿತ್ರಕಲಾ ಪರಿಷತ್‌‌ನಲ್ಲಿ ಆರಂಭವಾಗಿದೆ.

ಬೆಳಿಗ್ಗೆ 10 ರಿಂದ ರಾತ್ರಿ 8ರವರೆಗೆ ತೆರೆದಿರುವ ಈ ಮೇಳದಲ್ಲಿ ದೇಶದ 23 ರಾಜ್ಯಗಳ ವಿವಿಧ ನುರಿತ ಕರಕುಶಲ ಕೌಶಲ್ಯ ಪರಿಣಿತರಿಂದ ಕಾರ್ಯಾಗಾರ, ತರಹೇವಾರಿ ಭೋಜನ, ಜಾನಪದ ನೃತ್ಯ ಅಲ್ಲದೇ ಇನ್ನೂ ಅನೇಕ ರೀತಿಯ ಕಲಾ ಪ್ರಪಂಚವನ್ನು ನೀಡುವ ಸದಾವಕಾಶವನ್ನು ಸಂಪೂರ್ಣ ಸಂತೆ ಒದಗಿಸಿದೆ.

ಸಂಪೂರ್ಣ ಸಂತೆಯ ಉಸ್ತುವಾರಿ ವಹಿಸಿರುವ ಶಾಲಿನಿ ಕೈಲಾಶ್‌ ಮಾತನಾಡಿ ರೈತರು ಹಾಗೂ ಕರಕುಶಲ ಕಲಾವಿದರಿಂದ ತಯಾರಿಸಲ್ಪಟ್ಟ ವಿವಿಧ ನಮೂನೆಯ ಆಟಿಕೆಗಳು, ಗೃಹಪಯೋಗಿ ವಸ್ತುಗಳು ಮತ್ತು ಇತರೆ ಸಾವಯುವ ಪದಾರ್ಥ‌ಗಳನ್ನು ಒಂದೇ ಸ್ಥಳದಲ್ಲಿ ಆಕರ್ಷಕ ದರದಲ್ಲಿ ನೀಡಲು ಈ ಸಂತೆಯನ್ನು ಆಯೋಜಿಸಲಾಗಿದೆ. ಎಲ್ಲ ಗುಣಮಟ್ಟದ ವಸ್ತುಗಳನ್ನು ಒಂದೇ ಸೂರಿನಡಿ ಪಡೆದು ಕೊಳ್ಳಲು ಸಾಧ್ಯವಿಲ್ಲ. ಈ ನಿಟ್ಟಿನಲ್ಲಿ ಈ ಸಂತೆ ವಿಶೇಷವಾಗಿದ್ದು ಇದರ ಉಪಯೋಗವನ್ನು ಸಾರ್ವ‌ಜನಿಕರು ಪಡೆದುಕೊಳ್ಳಬಹುದು ಎಂದರು.

ಪ್ರಿಯಾಂಕ ಉಪೇಂದ್ರರಿಂದ ಚಾಲನೆ

ಪ್ರಿಯಾಂಕ ಉಪೇಂದ್ರರಿಂದ ಚಾಲನೆ

ಚಿತ್ರಕಲಾ ಪರಿಷತ್‌ನಲ್ಲಿ ಹತ್ತು ದಿನಗಳ ನಡೆಯಲಿರುವ ಸಂಪೂರ್ಣ ಸಂತೆಗೆ ಚಿತ್ರ ನಟಿ ಪ್ರಿಯಾಂಕ ಉಪೇಂದ್ರ ಚಾಲನೆ ನೀಡಿದರು.

ಸಂತೆಯಲ್ಲಿ ಏನಿದೆ?

ಸಂತೆಯಲ್ಲಿ ಏನಿದೆ?

ಮಧುಬನಿ ಚಿತ್ರಗಳು, ಬಳೆ ಮಾಡುವ ಬಗೆ, ಬಟ್ಟೆಗಳು, ಗೃಹಪಯೋಗಿ ವಸ್ತುಗಳು, ಆಭರಣಗಳು, ಆಟಿಕೆಗಳು, ಚರ್ಮದಿಂದ ತಯಾರಾದ ವಸ್ತುಗಳು, ಮಡಕೆ ಇತರ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಇಲ್ಲಿದೆ.

ವಿವಿಧ ಬಟ್ಟೆಗಳು

ವಿವಿಧ ಬಟ್ಟೆಗಳು

ತುಸ್ಸಾರ್‌‌, ಕೋಲಾ, ಚಾಂಡೇರಿ, ಜಮದಾನಿ, ಇಕಾಟ್‌, ಖಾದಿಯಿಂದ ತಯಾರಿಸಲಾದ ಬಟ್ಟೆಗಳ ಮಾರಾಟ ಇದೆ.

 ಸಂತೆಯಲ್ಲಿ ಏನಿದೆ?

ಸಂತೆಯಲ್ಲಿ ಏನಿದೆ?

ಟೆರ್‍ರಾಕೋಟಾ ಮಡಿಕೆ, ಸಿಲ್ವರ್‌‌ ಹಾಗೂ ಮೆಟಲ್‌ ಆಭರಣ, ಕುರ್ಚಿ‌, ಮೇಜುಗಳು ಆಹಾರ ದಿನಸಿ ಪದಾರ್ಥ‌‌ಗಳ ಹಾಗೂ ಇನ್ನು ಅನೇಕ ವಸ್ತುಗಳ ಮಾರಾಟ ಈ ಸಂತೆಯಲ್ಲಿದೆ.

 140 ಕಲಾ ಗುಂಪುಗಳು ಭಾಗಿ

140 ಕಲಾ ಗುಂಪುಗಳು ಭಾಗಿ

ಹತ್ತು ದಿನಗಳ ಕಾಲ ನಡೆಸಯುವ ಸಂತೆಯಲ್ಲಿ ದೇಶದ 140 ಕಲಾ ಗುಂಪುಗಳು ಭಾಗವಹಿಸಿದ್ದು, ಬೆಳಗ್ಗೆ 10 ರಿಂದ ರಾತ್ರಿ 8ರ ವರೆಗೆ ಸಂತೆ ತೆರೆದಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+