ಊಬರ್ ಕ್ಯಾಬ್ ಚಾಲಕರನ್ನು ಟಾರ್ಗೆಟ್ ಮಾಡ್ತಿದ್ದ ನಾಲ್ವರು ದರೋಡೆಕೋರರ ಸೆರೆ
ಬೆಂಗಳೂರು, ಏ. 16: ಉಬರ್ ಕ್ಯಾಬ್ ಚಾಲಕನನ್ನು ಕರೆಸಿಕೊಂಡು ದರೋಡೆ ಮಾಡಿದ್ದ ನಾಲ್ವರು ದರೋಡೆಕೋರರ ಗ್ಯಾಂಗ್ ನ್ನು ಸಂಪಿಗೆಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಹೃತಿಕ್ ಗೌಡ, ನಿತಿನ್ ಗೌಡ, ದರ್ಶನ್ ಹಾಗೂ ಸುಮಂತ್ ಬಂಧಿತರು. ಇವರಿಂದ ಮಾರುತಿ ಸ್ವಿಫ್ಟ್ ಕಾರು, ಚಿನ್ನದ ಸರ, ಪಲ್ಸರ್ ಬೈಕ್ ವಶಪಡಿಸಿಕೊಳ್ಳಲಾಗಿದೆ.
ನಂದಿನಿ ಬಡಾವಣೆ ಲಕ್ಷ್ಮೀದೇವಿ ನಗರ ನಿವಾಸಿ ಹೃತಿಕಗೌಡ, ಹಾಗೂ ಸಂಪಿಗೆಹಳ್ಳಿ ವೆಂಕಟೇಶ್ವರ ನಗರ ನಿವಾಸಿ ನಿತನ್ ಗೌಡ ಪರಸ್ಪರ ಸ್ನೇಹಿತರು. ಇವರೊಂದಿಗೆ ನಾಗಮಂಗಲ ತಾಲೂಕಿನ ಸಮಂತ್ ಮತ್ತು ದರ್ಶನ್ ನಾಲ್ವರು ಸೆರಿಕೊಂಡು ಐಶಾರಾಮಿ ಜೀವನಕ್ಕೆ ಜೋತು ಬಿದ್ದು ಅಪರಾಧ ಕೃತ್ಯಗಳನ್ನು ಎಸಗುತ್ತಿದ್ದರು.
ಕಳೆದ ಏ. 1 ರಂದು ರಾತ್ರಿ ವೆಂಕಟೇಶ್ವರ ಗರ ಸಮೀಪದ ಶಿವರಾಮಕಾರಂತ ನಗರ ಕ್ಲಬ್ ಬಳಿ ಉಬರ್ ಕ್ಯಾಬ್ ಬುಕ್ ಮಾಡಿ ಕರೆಸಿಕೊಂಡಿದ್ದಾರೆ. ಈ ವೇಳೆ ಕ್ಯಾಬ್ ಚಾಲಕನಿಗೆ ನಾಲ್ವರು ಅರೋಪಿಗಳು ಚಾಕು ತೋರಿಸಿ ಹೆದರಿಸಿದ್ದು, ನಗದು ಹಣ, ಮೊಬೈಲ್ ಪೋನ್, ಹಾಗೂ ಕ್ಯಾಬ್ ಕಿತ್ತುಕೊಂಡು ಪರಾರಿಯಾಗಿದ್ದಾರೆ. ಈ ಕುರಿತು ಕ್ಯಾಬ್ ಚಾಲಕ ಸಂಪಿಗೆಹಳ್ಳಿ ಠಾಣೆಗೆ ದೂರು ನೀಡಿದ್ದರು.

ದರೋಡೆ ಮಾಡಿದ್ದ ಕ್ಯಾಬ್ ನ ಜಾಡು ಹಿಡಿದು ತನಿಖೆ ನಡೆಸಿದ ಸಂಪಿಗೆಹಳ್ಳಿ ಪೊಲೀಸರು ಹೃತಿಕ ಗೌಡನನ್ನು ಬಂಧಿಸಿದ್ದು, ಆತ ನೀಡಿದ ಮಾಹಿತಿ ಮೇರೆಗೆ ಇತರೆ ಮೂವರನ್ನು ಬಂಧಿಸಿದ್ದಾರೆ. ವಿಚಾರಣೆ ವೇಳೆ ದೊಡ್ಡಬಳ್ಳಾಪುರ ಸೇರಿದಂತೆ ವಿವಿಧ ಕಡೆ ಅಪರಾಧ ಕೃತ್ಯಗಳು ಎಸಗಿರುವುದು ಪತ್ತೆಯಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಡಿಸಿಪಿ ಅನೂಪ್ ಶೆಟ್ಟಿ ನೇತೃತ್ವದಲ್ಲಿ ಈ ಪ್ರಕರಣ ಪತ್ತೆ ಮಾಡಲಾಗಿದೆ.

ಉಬರ್ ಚಾಲಕರನ್ನು ಟಾರ್ಗೆಟ್ ಮಾಡಿ ದರೋಡೆ ಮಾಡುತ್ತಿರುವ ಪ್ರಕರಣಗಳು ಇತ್ತೀಚೆಗೆ ಜಾಸ್ತಿಯಾಗುತ್ತಿದೆ.
Recommended Video
-
Karnataka Rains: ರಾಜ್ಯಾದ್ಯಂತ ಏಪ್ರಿಲ್ 20ರ ತನಕ ಮಳೆ, 6 ಜಿಲ್ಲೆಗಳಿಗೆ ಉಷ್ಣ ಅಲೆ ಮುನ್ಸೂಚನೆ -
ಬೆಂಗಳೂರು ಸೇರಿ 11 ಜಿಲ್ಲೆಗಳಲ್ಲಿ ಕೈಗಾರಿಕಾ ಅಭಿವೃದ್ಧಿ: 18,430 ರೂ ಹೂಡಿಕೆಗೆ ಅಸ್ತು, 15000 ಉದ್ಯೋಗ ಸೃಷ್ಟಿ -
PUC ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್: ಇದೇ ವರ್ಷದಿಂದಲೇ ಸಿಗಲಿವೆ ಉಚಿತ ಪಠ್ಯ ಪುಸ್ತಕ -
ಭಾರತೀಯ ರೈಲ್ವೆಯ ಹೊಸ ಹೆಜ್ಜೆ: 12 ಸ್ಲೀಪರ್ ವಂದೇ ಭಾರತ್ ರೈಲುಗಳ ಪರಿಚಯ, ಎಲ್ಲೆಲ್ಲಿ-ಯಾವಾಗ? -
Railway Food: ರೈಲು ಪ್ರಯಾಣಿಕರ ಬಳಿ ಬರುತ್ತೆ ಆಹಾರ: ರೈಲ್ವೆ ಇಲಾಖೆಗೆ ಕಂಪನಿಗಳ ಸಾಥ್ -
Gas Booking New Rules: ಎಲ್ಪಿಜಿ ಗ್ಯಾಸ್ ಬುಕ್ಕಿಂಗ್ನಲ್ಲಿ ಹೊಸ ನಿಯಮ, ಎಷ್ಟು ದಿನಕ್ಕೆ ಸಿಗುತ್ತೆ ಗ್ಯಾಸ್ ಸಿಲಿಂಡರ್ -
Ram Gopal Varma: ದಾವೂದ್ ಇಬ್ರಾಹಿಂ ಇಲ್ಲದಿದ್ದರೆ ನಾನು ಬದುಕು ಕಟ್ಟಿಕೊಳ್ಳುತ್ತಿರಲಿಲ್ಲ: ನಿರ್ದೇಶಕ ರಾಮ್ ಗೋಪಾಲ್ ವರ್ಮಾ -
Dhurandhar 2 Pakistan: ಅರಬ್ ರಾಷ್ಟ್ರದ ಸಾಲ ತೀರಿಸಲು ದುರಂಧರ್ 2 ಬಿಡುಗಡೆಗೆ ಮುಂದಾಯ್ತಾ ಪಾಕಿಸ್ತಾನ, ಟ್ವಿಸ್ಟ್ -
Karnataka Train: ಕಲಬುರಗಿ - ಕಲ್ಯಾಣ ಕರ್ನಾಟಕದಲ್ಲಿ ರೈಲು ಪ್ರಯಾಣಿಕರ ನಿತ್ಯ ಪರದಾಟ: ಸಿದ್ದು ಮಠಪತಿ ಬರಹ -
Lata Mangeshkar & Asha Bhosle: ಆ ಒಂದು ಕಾರಣಕ್ಕೆ ತಂಗಿ ಆಶಾ ಬೋಸ್ಲೆ ಜೊತೆ ಮಾತು ಬಿಟ್ಟಿದ್ದ ಲತಾ ಮಂಗೇಶ್ಕರ್ -
ಸೌದಿ ಅರೇಬಿಯಾದಲ್ಲಿ ಪಾಕಿಸ್ತಾನಿ ಸೇನಾಪಡೆ ನಿಯೋಜನೆ: ಮಿತ್ರ ರಾಷ್ಟ್ರಕ್ಕೆ 13,000 ಸೈನಿಕರು, ಯುದ್ಧ ವಿಮಾನಗಳ ರವಾನೆ -
Asha Bhosle Kannada Songs: ಆಶಾ ಭೋಸ್ಲೆ ಹಾಡಿದ ಕನ್ನಡದ ಹಾಡುಗಳು: ಕರ್ನಾಟಕದ ಜನರ ಮನ ಗೆದ್ದ ಖ್ಯಾತ ಗಾಯಕಿ












Click it and Unblock the Notifications