• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸಕ್ರ ವರ್ಲ್ಡ್ ಆಸ್ಪತ್ರೆಯಿಂದ ಅಪರೂಪದ ಭುಜದ ಕಾಳಜಿ ಕೇಂದ್ರ ಆರಂಭ

|

ಬೆಂಗಳೂರು, ಮಾರ್ಚ್17: ಸಕ್ರ ವರ್ಲ್ಡ್ ಆಸ್ಪತ್ರೆಯು ಇಂದು ಬೆಂಗಳೂರಿನಲ್ಲಿ ತಮ್ಮ ಬುಜದ ಚಿಕಿತ್ಸಾ ಕೇಂದ್ರವನ್ನು ಆರಂಭಿಸಿದೆ. ಕರ್ನಾಟಕದಲ್ಲಿಯೇ ಇದೊಂದು ವಿಶೇಷ ತಜ್ಞತೆಯನ್ನು ಒಳಗೊಂಡ ಬುಜದ ಆರೈಕೆ ಕೇಂದ್ರವಾಗಿ ಲಭಿಸಿದೆ. ವಿಶೇಷವಾಗಿ ಹಾಗೂ ಶರೀರದ ಮೇಲ್ಭಾಗದ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕಾರ್ಯ ಮಾಡಲಿದೆ.

ಕ್ರೀಡಾ ಗಾಯಗಳಿಂದ ಬಳಲುತ್ತಿರುವವರಿಗೆ ಅತ್ಯುಪಯುಕ್ತ ಚಿಕಿತ್ಸೆ ನೀಡುವ ಅತ್ಯಂತ ಸುಸಜ್ಜಿತ ಕೇಂದ್ರ ಹಾಗೂ ವಿಶೇಷ ತಜ್ಞ ವೈದ್ಯರ ತಂಡವನ್ನು ಸಕ್ರ ಭುಜದ ಆರೈಕೆ ಕೇಂದ್ರ ಹೊಂದಿದೆ. ಇಲ್ಲಿಗೆ ಅನೇಕ ಕ್ರೀಡಾ ಸಂಸ್ಥೆಗಳು ಹಾಗೂ ಸಂಘಟನೆ ಮತ್ತು ದೇಶದೆಲ್ಲೆಡೆಯಿಂದ ಕ್ರೀಡಾಯೇತರ ಗಾಯಗಳಿಂದ ಬಳಲುತ್ತಿರುವವರು ಕೂಡ ಇಲ್ಲಿ ಆಗಮಿಸಿ ಚಿಕಿತ್ಸೆ ಪಡೆಯಬಹುದಾಗಿದೆ.

ಈ ವಿಶೇಷ ಮುಂಚೂಣಿಯ ಕೇಂದ್ರವನ್ನು ಸಕ್ರ ವರ್ಲ್ಡ್ ಆಸ್ಪತ್ರೆಯ ಆರ್ಥೋಪೆಡಿಕ್ಸ್ ವಿಭಾಗದ ಹಿರಿಯ ಸಲಹೆಗಾರ ಡಾ. ಬನಾರ್ಜಿ ಬಿ.ಎಚ್. ಮಾರ್ಗದರ್ಶನದಲ್ಲಿ ನಡೆಸಲಾಗುವುದು. ಡಾ. ಬನಾರ್ಜಿ ಶರೀರದ ಮೇಲಿನ ಅಂಗಗಳ ಮೂಳೆ ಚಿಕಿತ್ಸಕರಾಗಿ ಜನಪ್ರಿಯವಾಗಿದ್ದಾರೆ. ಭುಜ, ಶರೀರದ ಮೇಲ್ಭಾಗದ ಅಸ್ವಸ್ಥತೆ, ಆರ್ಥೋಸ್ಕೋಪಿ ಹಾಗೂ ಕ್ರೀಡಾ ಔಷಧ ವಿಭಾಗದಲ್ಲಿ ತಜ್ಞತೆ ಹೊಂದಿದ್ದಾರೆ.

ಈಗಾಗಲೇ ಅವರು ಸುಮಾರು 3000 ಕ್ಕೂ ಅಧಿಕ ಬುಜದ ಶಸ್ತ್ರಚಿಕಿತ್ಸೆ ನಡೆಸಿದ್ದಾರೆ. ಇದರಲ್ಲಿ ಸೂಕ್ಷ್ಮ ರಂದ್ರಕೊರೆದು ಅಸ್ತಿರಜ್ಜುಗಳ ಪುನರ್ ನಿರ್ಮಾಣ, ಭುಜದ ಸ್ಥಿರೀಕರಣ ಪ್ರಕ್ರಿಯೆಗಳು, ಬಿಜ ಹಾಗೂ ಮೊಣಕೈ ಜಂಟಿ ಬದಲಿ ರೀತಿಯ ಹೆಚ್ಚು ನುರಿತ ಎಂಡೋಸ್ಕೋಪಿಕ್ ಪುನಾರಚನೆ ವಿಭಾಗದಲ್ಲೂ ಇವರು ಕಾರ್ಯನಿರ್ವಹಿಸಿದ್ದಾರೆ.

ಸದಾ ನಿರ್ಲಕ್ಷ್ಯಕ್ಕೆ ಒಳಗಾಗುವ ಪ್ರಮುಖ ಅಂಗ

ಸದಾ ನಿರ್ಲಕ್ಷ್ಯಕ್ಕೆ ಒಳಗಾಗುವ ಪ್ರಮುಖ ಅಂಗ

"ಭುಜದ ಭಾಗವು ಸಾಮಾನ್ಯವಾಗಿ ಶರೀರದಲ್ಲಿ ಸದಾ ನಿರ್ಲಕ್ಷ್ಯಕ್ಕೆ ಒಳಗಾಗುವ ಪ್ರಮುಖ ಅಂಗವಾಗಿದೆ. ಬುಜದ ಗಾಯಗಳಿಗೆ ಕಾರಣವಾದ ಕಾಳಜಿಯನ್ನು ಮತ್ತು ಗಮನವನ್ನು ಹರಿಸುವುದನ್ನು ಹೆಚ್ಚಿನವರು ಮಾಡುವುದಿಲ್ಲ. ಅದರ ಕೊರತೆಯಿಂದಾಗಿ ಅಂಗ ದುರ್ಬಲತೆ ಮತ್ತು ಅಂಗವೈಕಲ್ಯದಂತಹ ಸಮಸ್ಯೆಗಳು ಉಂಟಾಗಬಹುದು. ಸಕ್ರ ಬುಜದ ಚಿಕಿತ್ಸಾ ಕೇಂದ್ರವು ಅತ್ಯಾಧುನಿಕ ಬುಜ ಮತ್ತು ಮೊಣಕೈ ಕಾರ್ಯವಿದಾನಗಳು ಮತ್ತು ಶಸ್ತ್ರಚಿಕಿತ್ಸೆಯೊಂದಿಗೆ ಕಾರ್ಯನಿರ್ವಹಿಸುವ ಸಕ್ರ ಇನ್‍ಸ್ಟಿಟ್ಯೂಟ್ ಆಫ್ ಬೋನ್ಸ್ ಅಂಡ್ ಜಾಯಿಂಟ್ (ಮೂಳೆ ಹಾಗೂ ಸಂದುಗಳ ಕೇಂದ್ರವಾಗಿ) ಮೀಸಲಿರುವ ಘಟಕವಾಗಿದೆ. ವ್ಯಕ್ತಿಯ ದೈನಂದಿಕ ಭೌತಿಕ ಬೇಡಿಕೆಗಳಿಗಾಗಿ ಶಸ್ತ್ರಚಿಕಿತ್ಸೆಯ ನಂತರದ ಆರೈಕೆ, ಮರು ಗಾಯಗಳನ್ನು ತಡೆಯಲು ಮತ್ತು ಸಾಧ್ಯವಾದಷ್ಟು ಬೇಗ ಮರಳಿ ದೈನಂದಿನ ಚಟುವಟಿಕೆಗಳಿಗೆ ಮರಳಲು ರೋಗಿಗಳಿಗೆ ಈ ಕೇಂದ್ರ ಸಹಾಯ ಮಾಡುತ್ತದೆ' ಎಂದು ಡಾ. ಬನಾರ್ಜಿ ಬಿ.ಎಚ್. ತಿಳಿಸಿದ್ದಾರೆ.

ಎಡ್ಜ್ ಇಮೇಜಿಂಗ್ ತಂತ್ರಜ್ಞಾನ

ಎಡ್ಜ್ ಇಮೇಜಿಂಗ್ ತಂತ್ರಜ್ಞಾನ

ಈ ವಿಶೇಷ ಕೇಂದ್ರವು ಎಂಡೋಸ್ಕೋಪಿಕ್ ಪುನಾರಚನೆ ವಿಧಾನಗಳು, ಲಿಗಮೆಂಟ್ಸ್‍ಗಳ ಪುನರ್ ನಿರ್ಮಾಣ, ಭುಜದ ಸ್ಥಿರೀಕರಣ ವಿಧಾನ, ಬುಜ ಹಾಗೂ ಒಟ್ಟಾರೆ ಮೊಣಕೈ ಬದಲಿಸುವ ಕಾರ್ಯ ಸೇರಿದಂತೆ ವಾಡಿಕೆಯ ಎಲ್ಲಾ ಶಸ್ತ್ರಚಿಕಿತ್ಸಾ ಕಾರ್ಯವಿಧಾನಗಳನ್ನು ಇದು ನೀಡುತ್ತದೆ. ಆರ್ಥೋಸ್ಕೋಪಿಕ್ ಎಸಿ ಜಂಟಿ ದುರಸ್ತಿ, ಆರ್ಥೋಸ್ಕೋಪಿಕ್ ಸುಪ್ರಾಸ್ಯಾಕ್ಯುಲರ್ ನರಗಳ ನಿಶ್ಯಕ್ತಿ, ಆರ್ಥೋಸ್ಕೋಪಿಕ್ ಟ್ರಾನ್ಸಿಶಿಯಸ್ ಆವರ್ತಕಗಳ ಪಟ್ಟಿಯ ದುರಸ್ತಿ ಸೇರಿದಂತೆ ಅನನ್ಯ ಚಿಕಿತ್ಸಾ ವಿಧಾನಗಳು ಇಲ್ಲಿ ಲಭ್ಯವಿದೆ.

ಕೇಂದ್ರದಲ್ಲಿ ಗಣಯಂತ್ರ ಚಾಲಿನ ನ್ಯಾವಿಗೇಷನ್ ಮಾಡುವ ವ್ಯವಸ್ಥೆ, ಇಂಟ್ರಾಪರೇಟಿವ್ ಸಿಟಿ ಸ್ಕ್ಯಾನ್, ಉನ್ನತ ಗುಣಮಟ್ಟದ ಕ್ಯಾಮರಾಗಳು, ತಾಂತ್ರಿಕವಾಗಿ ಸವಾಲಿನ ಕಾರ್ಯವಿಧಾನವನ್ನು ಸಮರ್ಥವಾಗಿ ನಿರ್ವಹಿಸುವ ಆರ್ಥೋಸ್ಕೋಪಿಕ್ ಸಲಕರಣೆಗಳು, ಎಡ್ಜ್ ಇಮೇಜಿಂಗ್ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳಲಾಗಿದೆ. ಅಲ್ಲದೇ 7 ಸಾವಿರ ಚದರ ಅಡಿ ಉದ್ದದ ಸ್ಟೆಲೆಟೋ ಮಸ್ಕ್ಯುಲರ್ ಪುನರ್ವಸತಿ ಸೌಲಭ್ಯಗಳನ್ನು ಅಳವಡಿಸಲಾಗಿದೆ.

ಸಕ್ರ ವರ್ಲ್ಡ್ ಆಸ್ಪತ್ರೆಯ ಬಗ್ಗೆ:

ಸಕ್ರ ವರ್ಲ್ಡ್ ಆಸ್ಪತ್ರೆಯ ಬಗ್ಗೆ:

ಸಕ್ರ ವರ್ಲ್ಡ್ ಆಸ್ಪತ್ರೆಯು 350 ಹಾಸಿಗೆಗಳ ವ್ಯವಸ್ಥೆ ಇರುವ ಆಸ್ಪತ್ರೆ ಇಎನ್‍ಟಿ, ತಲೆ ಮತ್ತು ಕುತ್ತಿಗೆ, ನರ ಶಾಸ್ತ್ರ, ಹೃದಯ ರೋಗ, ಮೂಳೆ ಶಾಸ್ತ್ರ, ಸ್ತ್ರೀ, ಮತ್ತು ಮಕ್ಕಳ ಆರೋಗ್ಯ ಸೇವೆ, ಪಚನ ಕ್ರಿಯೆ, ಹೆಪಟೋಬಿಲರಿ ವಿಜ್ಞಾನ, ಮೂತ್ರಪಿಂಡ ಶಾಸ್ತ್ರ, ತುರ್ತು ಮತ್ತು ಅಪಘಾತ ವಿಭಾಗ ದಂಹತ ಎಲ್ಲಾ ವಿಭಾಗಗಳಲ್ಲಿ ಆರೋಗ್ಯ ಸೇವೆಯನ್ನು ಒದಗಿಸುತ್ತದೆ. ಆಧುನಿಕ ತಂತ್ರಜ್ಞಾನ ಹೊಂದಿರುವ ಒಟ್ಟು 12 ಒಗ್ಗೂಡಿದ ಮಾಡ್ಯುಲರ್ ಆಪರೇಶನ್ ಥಿಯೇಟರ್ ಗಳ (ಓಟಿ) ವ್ಯವಸ್ಥೆಯಿದ್ದು, ಇದರಲ್ಲಿ ಸರ್ಜಿಕಲ್ ಕ್ಯಾಮರ್, ಫೆರೆಫೆರೆಲ್ ಕ್ಯಾಮರ್ ಮತ್ತು ಎಮ್‍ಐಎಸ್ ಕ್ಯಾಮರ್‍ಗಳಿಂದ ಬರುವ ದೃಶ್ಯಗಳನ್ನು ರೆರ್ಕಾಡಿಂಗ್ ಮಾಡುವ ಹಾಗೂ ಆದನ್ನು ಸಂರಕ್ಷಿಸುವ ಮತ್ತು ಪ್ರದರ್ಶನ ಪಡಿಸುವ ವ್ಯವಸ್ಥೆ ಇದೆ.

ಪೋಲೆಂಡ್ ದೇಶದ ವೃತ್ತಿಪರ ಆರ್ಮ್ ಮೆಸ್ಲಿಂಗ್ ಲೀಗ್‍

ಪೋಲೆಂಡ್ ದೇಶದ ವೃತ್ತಿಪರ ಆರ್ಮ್ ಮೆಸ್ಲಿಂಗ್ ಲೀಗ್‍

ಸಕ್ರದ ಈ ವಿಶೇಷ ಕೇಂದ್ರವನ್ನು ಪೋಲೆಂಡ್ ದೇಶದ ವೃತ್ತಿಪರ ಆರ್ಮ್ ಮೆಸ್ಲಿಂಗ್ ಲೀಗ್‍ನ ಅಧ್ಯಕ್ಷ ಇಗೊರ್ ಮುಜುರೆಂಕೋ ಅವರು ಉದ್ಘಾಟಿಸಿದರು. ಬುಲ್ಡಾಗ್ ಆರ್ಮ್- ವ್ರೆಸ್ಲಿಂಗ್ ಮತ್ತು ವೃತ್ತಿಪರ ಆರ್ಮ್- ರೆಸ್ಲಿಂಗ್ ಲೀಗ್ (ಪಿಎಎಲ್) ಆಯೋಜಿಸಿದ ವಿಶ್ವ Ranking ಸರಣಿಯನ್ನು ಮುಂದುವರಿಸಿದ ಯುನಿಫೈಡ್ Ranking ಆಫ್ ವೃತ್ತಿಪರ ಅಥ್ಲೆಟ್ಸ್ (ಯುಆರ್ ಪಿಎ) ಯನ್ನು ಕೂಡ ಆರಂಭಿಸಲಾಯಿತು.

"ಪಂದ್ಯ ಇಲ್ಲವೇ ಅಭ್ಯಾಸದ ಸಂದರ್ಭದಲ್ಲಿ ಮೈದಾನದಲ್ಲಿ ಗಾಯಗಳು ಆಗುವುದು ಸರ್ವೇಸಾಮಾನ್ಯ. ಅಲ್ಲದೇ ಇದರಿಂದ ವೃತ್ತಿ ಬದುಕಿನ ಬದುದೊಡ್ಡ ಪಾಲು ವಿಶ್ರಾಂತಿಗೆ ಮೀಸಲಾಗಿ ಬಿಡುತ್ತದೆ. ನನ್ನ ತೋಳುಗಳು ಕುಸ್ತಿಯ ವೃತ್ತಿ ಜೀವನದ ಉದ್ದಕ್ಕೂ ಹಾಗೂ ಈಗ ತರಬೇತುದಾರನಾಗಿ ನಮ್ಮೆಲ್ಲಾ ಆಟಗಾರರಿಗೆ ಉತ್ತಮ ವೈದ್ಯಕೀಯ ಮಧ್ಯಸ್ಥಿಕೆ ದೊರೆಯಲಿ ಉತ್ತಮ ಪುನರ್ವಸತಿ ನೀಡುವ ಕಾರ್ಯ ಆಗುತ್ತದೆ ಎಂದು ನಾನು ಸದಾ ನಂಬಿದವ. ಇದೀಗ ಅದನ್ನು ಸಾಕಾರಗೊಳಿಸಿದ ಸಕ್ರ ವರ್ಲ್ಡ್ ಆಸ್ಪತ್ರೆಯ ಬುಜದ ಕೇಂದ್ರವು ವಿಶ್ವದರ್ಜೆಯ ಸೌಲಭ್ಯಗಳನ್ನು ಒಳಗೊಂಡು ಪರಿಣಿತ ವೈದ್ಯರನ್ನು, ಸೇವೆಯನ್ನು ಒಳಗೊಂಡಿರುವುದು ನಿಜಕ್ಕೂ ಸಂತಸ ತರುತ್ತದೆ. ನಾನು ಡಾ. ಬನಾರ್ಜಿ ಹಾಗೂ ಅವರ ಪರಿಣಿತ ತಂಡದ ಆರೈಕೆಯಲ್ಲಿ ಕ್ರೀಡಾಪಟುಗಳು ಮತ್ತು ಇತರೆ ರೋಗಿಗಳಿಗೆ ನೀಡಲಾದ ಚಿಕಿತ್ಸೆಯ ಗುಣಮಟ್ಟದ ಬಗ್ಗೆ ನಾವು ಭರವಸೆ ನೀಡುತ್ತೇನೆ. ಈ ವಿಚಾರದಲ್ಲಿ ನನ್ನ ಅಭಿಪ್ರಾಯ ಖಚಿತವಾದದ್ದು ಎಂದು ಹೇಳುತ್ತೇನೆ' ಎಂದು ಪಿಎಎಲ್‍ನ ಅಧ್ಯಕ್ಷ ಇಗೋರ್ ಮಜುರೆಂಕೊ ಹೇಳಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Sakra World Hospital launches its Shoulder Centre in Bengaluru today. This centre is a one-of-its-kind dedicated specialized shoulder care centre in Karnataka and will offer advanced state of the art surgeries for shoulder and upper limb.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more