ಬೆಂಗಳೂರು ಕಮಲಾ ನಗರದಲ್ಲಿ ರೌಡಿ ಶೀಟರ್ ಹತ್ಯೆ
ಬಸವೇಶ್ವರ ಠಾಣೆಯ ರೌಡಿ ಶೀಟರ್ ಆಗಿದ್ದ ಸುನಿಲ್ ಮೇಲೆ ಬುಧವಾರ ಮುಂಜಾನೆ ದಾಳಿ ಮಾಡಿದ ದುಷ್ಕರ್ಮಿಗಳಿಂದ ಹತ್ಯೆ.
ಬೆಂಗಳೂರು, ಮಾರ್ಚ್ 8: ಕಮಲಾ ನಗರದಲ್ಲಿ ರೌಡಿ ಶೀಟರ್ ವ್ಯಕ್ತಿಯೊಬ್ಬನನ್ನು ಬುಧವಾರ ಮುಂಜಾನೆ ಬರ್ಬರವಾಗಿ ಹತ್ಯೆ ಮಾಡಲಾಗಿದೆ.
ಸುನಿಲ್ (28) ಮೃತ ದುರ್ದೈವಿ.
ಈತ ಬಸವೇಶ್ವರ ನಗರ ಪೊಲೀಸ್ ಠಾಣೆಯ ರೌಡಿ ಶೀಟರ್ ಎಂದು ಮೂಲಗಳು ತಿಳಿಸಿವೆ. ಬುಧವಾರ ಮುಂಜಾನೆ ಕಮಲಾ ನಗರದ ಚಂದ್ರಪ್ಪ ರಸ್ತೆಯಲ್ಲಿ ಸುನಿಲ್ ಮೇಲೆ ದಾಳಿ ಮಾಡಿದ ನಾಲ್ಕೈದು ಜನರು ಮಾರಕಾಸ್ತ್ರಗಳಿಂದ ಕೊಚ್ಚಿ ಸುನಿಲ್ ಅವರನ್ನು ಕೊಲೆಗೈದಿದ್ದಾರೆ.
ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ. ಕೊಲೆಗೆ ಕಾರಣ ತಿಳಿದುಬಂದಿಲ್ಲ.











Click it and Unblock the Notifications