ಲಕ್ಷ್ಮಣ ಕೊಲೆ ಪ್ರಕರಣ : 6 ಆರೋಪಿಗಳು ಸಿಸಿಬಿ ಪೊಲೀಸರ ವಶಕ್ಕೆ
ಬೆಂಗಳೂರು, ಮಾರ್ಚ್ 12 : ರೌಡಿ ಲಕ್ಷ್ಮಣ ಕೊಲೆ ಪ್ರಕರಣದ 6 ಆರೋಪಿಗಳನ್ನು ಮಾರ್ಚ್ 21ರ ತನಕ ಪೊಲೀಸ್ ಕಸ್ಟಡಿಗೆ ನೀಡಲಾಗಿದೆ. 11 ಜನರು ಹತ್ಯೆ ಪ್ರಕರಣದಲ್ಲಿ ಭಾಗಿಯಾಗಿದ್ದು, ಉಳಿದ ಆರೋಪಿಗಳಿಗಾಗಿ ಸಿಸಿಬಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಲಕ್ಷ್ಮಣ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೂಪೇಶ (25), ಕು.ವರ್ಷಿಣಿ (21), ದೇವರಾಜ (24), ವರುಣ್ ಕುಮಾರ್ (24), ಮಧು ಕುಮಾರ್ (21), ಅಲೋಕ (24) ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಮಂಗಳವಾರ ಪೊಲೀಸರು ಆರೋಪಿಗಳನ್ನು 1ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದರು.
ನ್ಯಾಯಾಲಯ ಎಲ್ಲಾ ಆರೋಪಿಗಳನ್ನು ಮಾರ್ಚ್ 21ರ ತನಕ ಪೊಲೀಸರ ಕಸ್ಟಡಿಗೆ ನೀಡಿ ಆದೇಶ ಹೊರಡಿಸಿದೆ. ಸಿಸಿಬಿ ಪೊಲೀಸರು ಆರೋಪಿಗಳ ವಿಚಾರಣೆ ನಡೆಸಲಿದ್ದು, ಉಳಿದ ಆರೋಪಿಗಳಿಗಾಗಿ ಹುಡಕಾಟ ನಡೆಸಲಿದ್ದಾರೆ.

ಮಾರ್ಚ್ 7ರಂದು ಬೆಂಗಳೂರು ನಗರದ ಶ್ರೀಮಂತ ರೌಡಿ ಲಕ್ಷ್ಮಣನನ್ನು ಇಸ್ಕಾನ್ ದೇವಾಲಯದ ಬಳಿ ಹಾಡಹಗಲೇ 12 ಗಂಟೆ ಸುಮಾರಿಗೆ ಹತ್ಯೆ ಮಾಡಲಾಗಿತ್ತು. ಲಕ್ಷ್ಮಣ ಕೊಲೆ ಹಿಂದೆ ಹೆಣ್ಣಿನ ಪಾತ್ರ ಇದ್ದು, ಲಕ್ಷ್ಮಣನಿಗೆ ವಾಟ್ಸಪ್ ಕರೆ ಮಾಡಿ ಹೋಟೆಲ್‌ಗೆ ಬರಲು ಹೇಳಿದ್ದ ವರ್ಷಿಣಿಯನ್ನು ಪೊಲೀಸರು ಬಂಧಿಸಿದ್ದಾರೆ.












Click it and Unblock the Notifications