ನಾಲ್ಕು ನೂತನ ಸಚಿವರಿಗೆ ಕೊಠಡಿಗಳ ಹಂಚಿಕೆ
ಬೆಂಗಳೂರು, ಅಕ್ಟೋಬರ್ 31 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟಕ್ಕೆ ನೂತನವಾಗಿ ಸೇರ್ಪಡೆಗೊಂಡ ನಾಲ್ವರು ಸಚಿವರಿಗೆ ಕೊಠಡಿಗಳನ್ನು ಹಂಚಿಕೆ ಮಾಡಿ ಸರ್ಕಾರ ಆದೇಶ ಹೊರಡಿಸಿದೆ. ಇಬ್ಬರು ಸಚಿವರಿಗೆ ವಿಧಾನಸೌಧಲ್ಲಿ ಮತ್ತು ಇಬ್ಬರು ಸಚಿವರಿಗೆ ವಿಕಾಸ ಸೌಧದಲ್ಲಿ ಕೊಠಡಿ ಹಂಚಿಕೆ ಮಾಡಲಾಗಿದೆ.
ಸಂಪುಟ ದರ್ಜೆ ಸಚಿವರಾದ ಡಾ.ಜಿ.ಪರಮೇಶ್ವರ ಅವರಿಗೆ ವಿಧಾನಸೌಧದ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 205 ಎ ಮತ್ತು 206 ಹಾಗೂ ಮನೋಹರ ತಹಶೀಲ್ದಾರ್ ಅವರಿಗೆ ವಿಕಾಸಸೌಧದ ಎರಡನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 234 ಮತ್ತು 253ನ್ನು ನೀಡಲಾಗಿದೆ. [ನೂತನ ಸಚಿವರಿಗೆ ಖಾತೆ ಹಂಚಿಕೆ]

ರಾಜ್ಯ ಸಚಿವರಾದ ಎ.ಮಂಜು ಅವರಿಗೆ ವಿಕಾಸಸೌಧದ ಮೊದಲನೇ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 133 ಮತ್ತು 134 ಹಾಗೂ ವಿನಯ್ ಕುಲಕರ್ಣಿ ಅವರಿಗೆ ವಿಕಾಸಸೌಧದ ನೆಲ ಮಹಡಿಯಲ್ಲಿರುವ ಕೊಠಡಿ ಸಂಖ್ಯೆ 6 ಮತ್ತು 7ನ್ನು ಹಂಚಿಕೆ ಮಾಡಲಾಗಿದೆ. [ಸಿದ್ದರಾಮಯ್ಯ ಸಂಪುಟ ಸೇರಿದ 4 ಸಚಿವರು]
ಡಾ.ಜಿ.ಪರಮೇಶ್ವರ, ವಿನಯ್ ಕುಲಕರ್ಣಿ, ಮನೋಹರ್ ತಹಶೀಲ್ದಾರ್ ಮತ್ತು ಎ.ಮಂಜು ಅವರು ಸಚಿವರಾಗಿ ಗುರುವಾರ ಪ್ರಮಾಣ ವಚನ ಸ್ವೀಕರಿಸಿದ್ದರು. ಶುಕ್ರವಾರ ರಾತ್ರಿ ನೂತನ ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಲಾಗಿದೆ. [ವಿಧಾನಸೌಧಕ್ಕೆ ಕೈಗಾರಿಕಾ ಭದ್ರತಾ ಪಡೆ ಭದ್ರತೆ]
ಖಾತೆಗಳ ಹಂಚಿಕೆ
* ಡಾ.ಜಿ.ಪರಮೇಶ್ವರ : ಗೃಹ
* ಮನೋಹರ ತಹಶೀಲ್ದಾರ್ : ಅಬಕಾರಿ, ಮುಜರಾಯಿ
* ಎ.ಮಂಜು : ಪಶುಸಂಗೋಪನೆ ರೇಷ್ಮೆ
* ವಿನಯ್ ಕುಲಕರ್ಣಿ : ಗಣಿ ಮತ್ತು ಭೂ ವಿಜ್ಞಾನ
ಖಾತೆ ಬದಲಾವಣೆ
* ಕೆಜೆ ಜಾರ್ಜ್ : ಬೆಂಗಳೂರು ನಗರಾಭಿವೃದ್ಧಿ (ಬಿಡಿಎ, ಬಿಬಿಎಂಪಿ, ಜಲಮಂಡಳಿ,ಬಿಎಂಆರ್‌ಡಿಎ), ನಗರ ಯೋಜನೆ
ಹೆಚ್ಚುವರಿ ಖಾತೆ
* ಟಿ.ಬಿ.ಜಯಚಂದ್ರ : ಕಾನೂನು, ಸಂಸದೀಯ ವ್ಯವಹಾರ, ಉನ್ನತ ಶಿಕ್ಷಣ












Click it and Unblock the Notifications