ಈ ವೀಕೆಂಡ್ನಲ್ಲಿ ನೋಡಿ ’ರೋಮಿಯೋ ಲವ್ಸ್ ಅನಾರ್ಕಲಿ’

ಬೆಂಗಳೂರು, ಆಗಸ್ಟ್ 13: ರಂಗಾಸಕ್ತ ಯುವಕರ ಕನಸಿನ ಕೂಸಾಗಿ ರೂಪುಗೊಂಡು ಕನ್ನಡ ರಂಗಭೂಮಿಗೆ ತನ್ನ ಅಳಿಲು ಸೇವೆಯನ್ನು ನೀಡುತ್ತಾ ಬಂದಿರುವ 'ಧ್ವನಿ' ನಾಟಕ ತಂಡ ಸದಾ ಹೊಸ ಪ್ರಯೋಗಗಳನ್ನು ಮಾಡುತ್ತಿದೆ. ಆಗಸ್ಟ್ 14 ರಂದು ಇಂಥದ್ದೊಂದು ಹೊಸ ಪ್ರಯೋಗ ಕೆಎಚ್ ಕಲಾಸೌಧದಲ್ಲಿ ಕಾಣಬಹುದಾಗಿದೆ.

ಸುಮಾರು ನೂರಕ್ಕೂ ಹೆಚ್ಚು ಸಕ್ರಿಯ ಹವ್ಯಾಸಿ ರಂಗ ತಂಡಗಳನ್ನೊಳಗೊಂಡ ಬೆಂಗಳೂರು ನಗರವು ಸತತ ಪ್ರಯೋಗಗಳಿಂದ ಹೊರಹೊಮ್ಮುವ ರಂಗ ಚಟುವಟಿಕೆಗಳಿಂದ ತನ್ನ ಪ್ರೇಕ್ಷಕರನ್ನು ಪುಳಕಿತಗೊಳಿಸುತ್ತಿದೆ.

ಇದೇ ನಿಟ್ಟಿನಲ್ಲಿ ಬೆಂಗಳೂರಿನ ಕನ್ನಡದ ರಂಗ ಪ್ರೇಕ್ಷಕರಿಗೆ ರಂಗ ಭೂಮಿಯ ವಿವಿಧ ಪ್ರಾಕಾರಗಳನ್ನು ಕೊಡುತ್ತ ಬಂದಿರುವ ಹೊಸತಂಡ "ಧ್ವನಿ". ತಂಡ ಹೊಸತಾದರು ತಂಡದ ಮೂಲಕ ಹಲವು ಬಗೆಯ ನಾಟಕಗಳನ್ನು ಪ್ರಾಯೋಜಿಸ ಬೇಕೆಂದು ಪಣತೊಟ್ಟಿರುವ ಕೆಲವು ಹಳೆಯ ರಂಗ ಮಿತ್ರರು ಸೇರಿ ರೂಪಿಸಿರುವ ಹವ್ಯಾಸಿತಂಡ ಈ "ಧ್ವನಿ".

ತಂಡದ ಪರಿಚಯ : "ಧ್ವನಿ": "ಧ್ವನಿ" ತಂಡವು ಜನವರಿ 2015 ರಂದು ಜನ್ಮತಾಳಿತಾದರು, ಮೂರು ಪ್ರತ್ಯೇಕ ನಾಟಕಗಳನ್ನು ಸಿದ್ದಪಡಿಸಿಕೊಂಡು ಈ ವರ್ಷದಾದ್ಯಂತ ಪ್ರದರ್ಶನ ಗೊಳಿಸಲು ಸಜ್ಜುಗೊಂಡಿದೆ. ಮರಾಠಿ ಮೂಲದ ಎರಡು ಕನ್ನಡ ನಾಟಕಗಳಾದ 'ಪುರುಶ್' ಹಾಗೂ 'ಆಲ್ ಲೈನ್ ಕ್ಲಿಯರ್' ಎಂಬ ಸಾಮಾಜಿಕ ಹಾಗೂ ಹಾಸ್ಯನಾಟಕಗಳು ಕಳೆದ ತಿಂಗಳುಗಳಲ್ಲಿ ಪ್ರದರ್ಶನ ಹಾಗೂ ಮರುಪ್ರದರ್ಶನಗಳನ್ನು ಕಂಡಿದೆ.

ತದನಂತರ 'ರೋಮಿಯೋ ಲವ್ಸ್ ಅನಾರ್ಕಲಿ' ಎಂಬ ವಿಭಿನ್ನ ಪ್ರಯೋಗದ ಪ್ರೇಮ ಕಥೆಯ ಹಂದರವುಳ್ಳ ಹಾಸ್ಯ ಹಾಗೂ ಸಂಗೀತ ಮಯ ನಾಟಕವು ತನ್ನ ಎರಡನೆ ಪ್ರದರ್ಶನವನ್ನು ಇದೇ ಆಗಸ್ಟ್ 14 ರಂದು ಕೆ.ಹೆಚ್.ಕಲಾಸೌಧದಲ್ಲಿ ಪ್ರದರ್ಶಿಸುತ್ತಿದೆ.

Romeo Loves Anarkali comedy play Dhwani, KH Kalasoudha

'ರೊಮಿಯೋ ಲವ್ಸ್ ಅನಾರ್ಕಲಿ' : ನಾಟಕ ಕಟ್ಟಿದ ಪ್ರಾಕಾರ
"ಧ್ವನಿ" ತಂಡವು ಪ್ರಾಯೊಜನೆಗೊಳಿಸಿದ ಮೂರು ತಿಂಗಳ ವಾರಾಂತ್ಯ ರಂಗ ಶಿಬಿರದಲ್ಲಿ ಪಾಲ್ಗೊಂಡಿದ್ದ ಯುವಕರ ತಂಡವು ಹಂಚಿಕೊಂಡ ಸ್ವಾನುಭವಗಳು ಈ ನಾಟಕ ಕಟ್ಟಲು ಸಹಕಾರಿಯಾಯಿತೆಂದರೆ ಅತಿಶಯೋಕ್ತಿಯೆನಿಸದು. ಅನೇಕರ ಅನುಭವಗಳು, ಪ್ರಸಂಗಗಳು, ಹೃದಯದಲ್ಲಿ ಹುದುಗಿಕೊಂಡಿದ್ದ ಭಾವಪೂರಿತ ಪಿಸುಮಾತುಗಳು ಧ್ವನಿಯ ಮುಖೇನ ಹೊರ ಬಂದು ಕಥೆಯಾಗಿ, ರೂಪಕವಾಗಿ, ಪ್ರಹಸನವಾಗಿ, ನಾಟಕದ ಮುಖಾಂತರ ಕನ್ನಡದಲ್ಲಿ ಒಂದು ಪ್ರೇಮ ಕಥೆಯಾಗಿ ರೂಪುಗೊಂಡಿತು.

'ರೊಮಿಯೋ ಲವ್ಸ್ ಅನಾರ್ಕಲಿ' ಎಂಬ ಕುತೂಹಲ ಮೂಡುವ ನಾಟಕದ ಹೆಸರು, ಅದೇ ಪ್ರೀತಿ ಹೊಸ ರೀತಿ ಎಂಬ ಉಪಶೀರ್ಶಿಕೆಯನ್ನೊಳಗೊಂಡು ಕುತೂಹಲವನ್ನು ಇಮ್ಮಡಿಗೊಳಿಸುತ್ತದೆ. ಸತತ 100 ನಿಮಿಷಗಳ (10 ನಿಮಿಷಗಳ ವಿರಾಮವನ್ನು ಹೊರತುಪಡಿಸಿ) ಈ ಹಾಸ್ಯ ಮಿಶ್ರಿತ, ವಿಶಿಷ್ಟ ಪ್ರೇಮಕಥೆಯುಳ್ಳ, ಭಾವನೆಗಳ ಸಂಗಮವಾಗಿರುವ, ಮಧುರ ಸಂಗೀತವನ್ನೊಳಗೊಂಡ ಈ ನಾಟಕವು ಪ್ರೇಕ್ಷಕರಲ್ಲಿ ನಗೆಯ ಗದ್ದಲವನ್ನು ಸೃಷ್ಟಿಸುತ್ತದೆ.

ಈ ನಾಟಕದ ಕೊನೆಯಲ್ಲಿ ಪ್ರೇಮಿಗಳು ಒಂದಾಗತ್ತಾರೆಯೋ ಅಥವಾ ತಾವೆ ಸ್ರುಷ್ಟಿಸಿಕೊಂಡ ಕ್ರುತಕ ಸಂಪ್ರದಾಯಗಳಿಗೆ ತಮ್ಮ ಪ್ರೀತಿಯನ್ನು ಬಲಿಕೊಡುತ್ತರೆಯೋ ಎಂಬ ಪ್ರಶ್ನೆಗೆ ಉತ್ತರವನ್ನು ಕೊಡುವ ಮೂಲಕ ನಾಟಕವು ಅಂತ್ಯಗೊಳ್ಳುತ್ತದೆ.

Romeo loves Anarkali

ರಂಗಪರಿಕರಗಳೆ ಅನೇಕ ರಂಗ ದೃಶ್ಯಗಳಾಗಿ ಮಾರ್ಪಟ್ಟು, ಸಹಕಲಾವಿದರು ವಿವಿಧ ಪಾತ್ರಗಳಾಗಿ ನಾಟಕದುದ್ದಕ್ಕೂ ಲವ ಲವಿಕೆಯಿಂದ ರೊಮಿಯೋ ಹಾಗೂ ಅನಾರ್ಕಲಿಗೆ ಸಹಕರಿಸುತ್ತ ಸಾಗುವ ಈ ನಾಟಕವು ನಿರಂತರ ಮನರಂಜನೆಯನ್ನು ಕೊಡುವುದರಲ್ಲಿ ಯಶಸ್ವಿಯಾಗಿದೆ.

ಈ ಪ್ರೇಮಕಥೆಯನ್ನು ರಂಗಪ್ರಯೋಗವಾಗುವ ರೀತಿಯಲ್ಲಿ ಬರೆದವರು- ಮಹೇಶ್ ಎಸ್.ಪಿ ಹಾಗೂ ಕಥೆಗೆ ನಿರ್ದೇಶನ ಮಾಡಿದವರು ಶಂಕರ್ ಗಣೇಶ್. ರೊಮಿಯೋ ಲವ್ಸ್ ಅನಾರ್ಕಲಿ ಈ ನಾಟಕವನ್ನು ಕನ್ನಡ ರಂಗ ಭೂಮಿಗೆ, ಸಪ್ರೇಕ್ಷಕರಿಗೆ ಅರ್ಪಿಸುತ್ತಿರುವವರು "ಧ್ವನಿ" ತಂಡದ ಪ್ರತಿಯೊರ್ವರು.

'ರೊಮಿಯೋ ಲವ್ಸ್ ಅನಾರ್ಕಲಿ' ನಾಟಕವು ಇದೇ ತಿಂಗಳ ಆಗಸ್ಟ್ 14 ರಂದು ಹನುಮಂತ ನಗರದ ಕೆ.ಹೆಚ್. ಕಲಾಸೌಧದಲ್ಲಿ ತನ್ನ ಎರಡನೆ ಪ್ರದರ್ಶನವನ್ನು ಕಾಣುತ್ತಿದೆ. ಸಮಯ ಸಂಜೆ 7.30. ತಾವೂ ಬನ್ನಿ ತಮ್ಮವರನ್ನೂ ಕರೆತನ್ನಿ. ಟಿಕೆಟ್ ದರ: ₨.100/-
(ಒನ್ ಇಂಡಿಯಾ ಸುದ್ದಿ)

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+