Get Updates
Get notified of breaking news, exclusive insights, and must-see stories!

ಪ್ರೇಮಿಗಳ ಹಬ್ಬ ವಿಶೇಷ: ವಿಶೇಷ ಕರಕುಶಲ ವಸ್ತು ಪ್ರದರ್ಶನ ಮೇಳ

ಬೆಂಗಳೂರು ಫೆಬ್ರವರಿ 7: ಪ್ರೇಮಿಗಳ ಹಬ್ಬ - ವ್ಯಾಲಂಟೈನ್ಸ್‌ ಡೇಯನ್ನು ಮತ್ತಷ್ಟು ವಿಶೇಷ ಗೊಳಿಸುವ ಉದ್ದೇಶದಿಂದ ನಗರದ ಹೃದಯಭಾಗದಲ್ಲಿರುವ ಕರ್ನಾಟಕ ಚಿತ್ರಕಲಾ ಪರಿಷತ್ತಿನಲ್ಲಿ ಆಯೋಜಿಸಲಾಗಿರುವ ದ ಸೋಕ್‌ ಮಾರ್ಕೇಟ್‌ ಗೆ ನಟಿ ರಿಷಿಕಾ ಶರ್ಮಾ ಚಾಲನೆ ನೀಡಿದರು.

ನಂತರ ಮಾತನಾಡಿದ ಅವರು, ಫೆಬ್ರವರಿ 14 - ವ್ಯಾಲಂಟೈನ್‌ ಡೇ - ಪ್ರೇಮಿಗಳ ದಿನಕ್ಕೆ ಅದರದೇ ಆದ ವಿಶೇಷತೆ ಇದೆ. ತಮ್ಮ ಸಂಗಾತಿಗೆ ವಿಶೇಷವಾದ ಕೊಡುಗೆಯನ್ನು ಕೊಡುವ ಮೂಲಕ ಬಹುತೇಕ ಪ್ರೇಮಿಗಳು ಇದನ್ನು ಆಚರಿಸುತ್ತಾರೆ. ಸಂಗಾತಿಗೆ ವಿಶಿಷ್ಟವಾದ ಕೊಡುಗೆಯನ್ನು ಆಯ್ಕೆ ಮಾಡುವ ಅವಕಾಶವನ್ನು ನೀಡುವ ಉದ್ದೇಶದಿಂದ ಕರ್ನಾಟಕ ಚಿತ್ರಕಲಾ ಪರಿಷತ್ತಿನ ಆವರಣದಲ್ಲಿ ಫೆಬ್ರವರಿ 5 ರಿಂದ 14 ರ ವರೆಗೆ ದ ಸೋಕ್‌ ಮಾರ್ಕೇಟ್‌ - ಆರ್ಟ್‌ ಅಂಡ್‌ ಕ್ರಾಫ್ಟ್‌ ಮೇಳವನ್ನು ಆಯೋಜಿಸಲಾಗಿದೆ ಎಂದು ಹೇಳಿದರು.

Rishika Sharma inaugurates Valentines Day Special Arts Crafts Mela at CKP

ಕರಕುಶಲ ವಸ್ತು ಪ್ರದರ್ಶನ ಹಾಗೂ ಮಾರಾಟ ಮೇಳದ ಆಯೋಜಕ ಅಫ್ತಾಬ್‌ ಮಾತನಾಡಿ, ಚಿತ್ತಾರ - ಗ್ರಾಂಡ್‌ ಫ್ಲಿಯಾ ಮಾರ್ಕೇಟ್‌ ಸಹಯೋಗದಲ್ಲಿ ಆಯೋಜಿಸಿರುವ ಈ ಕರಕುಶಲ ಪ್ರದರ್ಶನ ಹಾಗೂ ಮಾರಾಟ ಮೇಳದಲ್ಲಿ, ನೂರಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ದೇಶದ ವಿವಿಧ ಮೂಲೆಗಳ ಕಲಾವಿದರ ಕಲಾಕೃತಿಗಳು ಹಾಗೂ ಉತ್ಪನ್ನಗಳು ನೇರವಾಗಿ ಜನರಿಗೆ ತಲುಪಲಿವೆ. ನಿಮ್ಮ ಮನೆಯ ಗಾರ್ಡನ್‌ ಅಲಂಕರಿಸಲು, ನಿಮಗೊಪ್ಪುವ ಹ್ಯಾಂಡ್‌ ಲೂಮ್‌ ಸ್ಯಾರಿಯನ್ನು ಸೆಲೆಕ್ಟ್‌ ಮಾಡಲು, ಕುರ್ತಿಗಳು ಮತ್ತು ಆಭರಣಗಳನ್ನು ಕೊಳ್ಳಲು ಅತ್ಯುತ್ತಮ ಮೇಳ ಇದಾಗಿರಲಿದೆ.

Rishika Sharma inaugurates Valentines Day Special Arts Crafts Mela at CKP

ಈ ಮೇಳದಲ್ಲಿ ದೇಶದ ವಿವಿಧ ಭಾಗಗಳ ಕರಕುಶಲಕಾರರು ತಯಾರಿಸಿದ ತರಹೇವಾರಿ ಕರಕುಶಲ ವಸ್ತುಗಳು, ಆಟಿಕೆಗಳು, ಉಡುಪುಗಳ ಸೇರಿದಂತೆ ರಾಜಧಾನಿ ಬೆಂಗಳೂರಿನ ಜನತೆಗೆ ಮುದ ನೀಡುವಂತಹ ಉತ್ಪನ್ನಗಳು ಒಂದೇ ಸೂರಿನಡಿ ದೊರೆಯುಲಿವೆ.

ಫೆಬ್ರವರಿ 5 ರಿಂದ ಫೆಬ್ರವರಿ 14 ವರೆಗೆ ಈ ಪ್ರದರ್ಶನವು ನಡೆಯಲಿದ್ದು, ಪ್ರತಿದಿನ 11 ರಿಂದ ಸಂಜೆ 7 ಗಂಟೆಯವರೆಗೆ ಪ್ರದರ್ಶನ ಮತ್ತು ಮಾರಾಟ ಮೇಳ ಇರಲಿದೆ ಎಂದು ಹೇಳಿದರು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+