ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಹೆಲ್ಮಟ್ ಧರಿಸದಿರುವುದು, ಅತಿವೇಗದ ಚಾಲನೆ : ಅಪಾಯಕಾರಿ ಅಂಶಗಳು

|
Google Oneindia Kannada News

ಬೆಂಗಳೂರು, ಫೆಬ್ರವರಿ 27 : ಹೆಲ್ಮಟ್ ಧರಿಸದೆ ದ್ವಿಚಕ್ರ ವಾಹನಗಳನ್ನು ಚಾಲನೆ ಮಾಡುವುದು ಮತ್ತು ಅತಿವೇಗದ ಚಾಲನೆ ರಸ್ತೆ ಸುರಕ್ಷತೆಗಿರುವ ಎರಡು ಪ್ರಮುಖ ಅಪಾಯಕಾರಿ ಅಂಶಗಳು ಎಂಬದು ಅಧ್ಯಯನ ವರದಿಯಿಂದ ಬಯಲಾಗಿದೆ.

ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್ ಬೆಂಗಳೂರು ಆಕ್ಸ ಬ್ಯುಸಿನೆಸ್ ಸರ್ವಿಸಸ್ ಸಹಯೋಗದೊಂದಿಗೆ 'ಸೇಫರ್ ರೋಡ್ಸ್, ಬೆಂಗಳೂರು' ಕಾರ್ಯಕ್ರಮದ ಅಡಿಯಲ್ಲಿ ಇಂದು ಬೆಂಗಳೂರಿನಲ್ಲಿ ರಸ್ತೆ ಬಳಕೆದಾರರ ಹಾಗೂ ಪರಿಣತರ ಸಭೆಯನ್ನು ಆಯೋಜನೆ ಮಾಡಲಾಗಿತ್ತು.

ಬಿಬಿಎಂಪಿಗೆ ಬಿಳಿಯಾನೆಯಾದ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್!ಬಿಬಿಎಂಪಿಗೆ ಬಿಳಿಯಾನೆಯಾದ ಟೆಂಡರ್ ಶ್ಯೂರ್, ವೈಟ್ ಟಾಪಿಂಗ್!

ಬೆಂಗಳೂರು ನಗರದ ಹೆಬ್ಬಾಳದಿಂದ ಕೆ.ಆರ್ ಪುರಂ ರಸ್ತೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಈ ಕಾರ್ಯಕ್ರಮದಲ್ಲಿ ಚರ್ಚಿಸಲಾಯಿತು. ಸಭೆಯಲ್ಲಿ ಸಮಾಜದ ವಿವಿಧ ಕ್ಷೇತ್ರಗಳಿಂದ ರಸ್ತೆ ಬಳಕೆದಾರರು, ಅಧಿಕಾರಿಗಳು, ಶೈಕ್ಷಣಿಕ ಸಂಸ್ಥೆಗಳು, ಸಾರ್ವಜನಿಕ ಆರೋಗ್ಯ ಪರಿಣತರು ಮತ್ತು ರಸ್ತೆ ಸುರಕ್ಷತಾ ಪರಿಣತರು ಭಾಗವಹಿಸಿದ್ದರು. ತಮ್ಮ ಅಮೂಲ್ಯ ಸಲಹೆಗಳನ್ನು ನೀಡಿದರು.

ರಾಜಾಜಿನಗರದಿಂದ ಔಟರ್‌ ರಿಂಗ್ ರೋಡ್‌ವರೆಗೆ ರಸ್ತೆ ಅಗಲೀಕರಣರಾಜಾಜಿನಗರದಿಂದ ಔಟರ್‌ ರಿಂಗ್ ರೋಡ್‌ವರೆಗೆ ರಸ್ತೆ ಅಗಲೀಕರಣ

ಐಪಿಹೆಚ್ 2005 ರಲ್ಲಿ ಪ್ರಾರಂಭಗೊಂಡ ಶೈಕ್ಷಣಿಕ ಹಾಗು ಸಂಶೋಧನಾ ಸಂಸ್ಥೆಯಾಗಿದ್ದು, ಇದರ ಮೂಲ ಉದ್ದೇಶ ಸಮಾನ, ವಿಕೇಂದ್ರೀಕೃತ ಮತ್ತು ಸಾರ್ವಜನಿಕ ಭಾಗವಹಿಸುವಿಕೆಯುಳ್ಳ ಆರೋಗ್ಯ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದಾಗಿದೆ.

ಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿಸರ್ಜಾಪುರ ರಸ್ತೆಯಿಂದ ವೈಟ್‌ಫೀಲ್ಡ್‌ ಪ್ರಯಾಣಿಸುವ ಟೆಕ್ಕಿಗಳಿಗೆ ಸಿಹಿಸುದ್ದಿ

ಅಧ್ಯಯನಕ್ಕೆ ರಸ್ತೆ ಆಯ್ಕೆ

ಅಧ್ಯಯನಕ್ಕೆ ರಸ್ತೆ ಆಯ್ಕೆ

ಡಾ.ಪ್ರಗತಿ ಹೆಬ್ಬಾರ್ ಅವರು ಮಾತನಾಡಿ, 'ಹೆಬ್ಬಾಳ-ಕೆ.ಆರ್ ಪುರಂ ರಸ್ತೆ ಬೆಂಗಳೂರು ನಗರದಲ್ಲಿ ಹೆಚ್ಚಿನ ಅಪಘಾತಗಳು ಸಂಭವಿಸುವ ರಸ್ತೆಗಳಲ್ಲಿ ಒಂದಾಗಿದ್ದರಿಂದ ಈ ರಸ್ತೆಯನ್ನು ನಾವು ನಮ್ಮ ಅಧ್ಯಯನಕ್ಕೆ ಆಯ್ಕೆ ಮಾಡಿಕೊಂಡೆವು. ಈ ರಸ್ತೆಯಲ್ಲಿರುವ ಸಮಸ್ಯೆಗಳನ್ನು ಅಧ್ಯಯನ ಮಾಡಿ ಈ ರಸ್ತೆ ಬಳಸುವ ಎಲ್ಲಾ ಬಳಕೆದಾರರ ಅಭಿಪ್ರಾಯ ಪಡೆದು, ಸಮಸ್ಯೆಗಳಿಗೆ ಪರಿಣಾಮಕಾರೀ ಉಪಾಯಗಳನ್ನು ರೂಪಿಸುವುದು ನಮ್ಮ ಉದ್ದೇಶವಾಗಿತ್ತು. ಜನವರಿ ತಿಂಗಳಿನಲ್ಲಿ ಅಧ್ಯಯನ ನಡೆಸಿದೆವು' ಎಂದರು.

ಸುರಕ್ಷಿತ ರಸ್ತೆ ಮಾಡುವುದು

ಸುರಕ್ಷಿತ ರಸ್ತೆ ಮಾಡುವುದು

'ನಾವು ಕಲೆ ಹಾಕಿದ ಮಾಹಿತಿಯ ಪ್ರಾಥಮಿಕ ವಿಶ್ಲೇಷಣೆಯ ಪ್ರಕಾರ - ಸುರಕ್ಷಿತ ವಾಹನ ಚಾಲನಾ ಪದ್ಧತಿಗಳು, ರಸ್ತೆ ಸುರಕ್ಷತೆ ಕುರಿತ ಕಾನೂನುಗಳ ಮಾಹಿತಿ ಕೊರತೆ ಮತ್ತು ಪರವಾನಗಿ ಇಲ್ಲದೆ ವಾಹನ ಚಲಾವಣೆ ಈ ರಸ್ತೆಯ ಕೆಲವು ಮುಖ್ಯ ಸಮಸ್ಯೆಗಳೆಂದು ಕಂಡುಬಂದಿತು. ಈ ಅಧ್ಯಯನದ ವರದಿ ಮತ್ತು ಸಭೆಯಲ್ಲಿ ದೊರಕುವ ಸಲಹೆ-ಸೂಚನೆಗಳ ಆಧಾರದ ಮೇರೆಗೆ ಈ ರಸ್ತೆಯನ್ನು ಬರುವ ವರ್ಷಗಳಲ್ಲಿ ಸುರಕ್ಷಿತವನ್ನಾಗಿ ಮಾಡಲು ಸೂಕ್ತ ಮಾರ್ಗೋಪಾಯಗಳನ್ನು ಕಂಡುಹಿಡಿಯಬಹುದು' ಎಂದು ಡಾ.ಪ್ರಗತಿ ಹೆಬ್ಬಾರ್ ಹೇಳಿದರು.

1175 ಜನರ ಅಭಿಪ್ರಾಯ ಸಂಗ್ರಹ

1175 ಜನರ ಅಭಿಪ್ರಾಯ ಸಂಗ್ರಹ

ಈ ಅಧ್ಯಯನಕ್ಕೆ ಸದರಿ ರಸ್ತೆಯಲ್ಲಿನ 1175 ಬಳಕೆದಾರರ ಅಭಿಪ್ರಾಯಗಳನ್ನು ಸಂಗ್ರಹಿಸಲಾಗಿದೆ. ಈ ಸಮೀಕ್ಷೆಯ ಪ್ರಮುಖ ಉದ್ದೇಶ ಸದರಿ ರಸ್ತೆ ಬಳಕೆದಾರರ ರಸ್ತೆ ಸುರಕ್ಷೆ ಕುರಿತ ಜ್ಞಾನ, ಚಾಲನಾ ಅಭ್ಯಾಸ, ಸರ್ಕಾರ ರಸ್ತೆ ಸುರಕ್ಷತೆಗೆ ನೀಡುತ್ತಿರುವ ಪ್ರಾಮುಖ್ಯತೆ ಹಾಗು ಅವರ ದೃಷ್ಠಿಯಲ್ಲಿ ಸದರಿ ಮಾರ್ಗದಲ್ಲಿನ ರಸ್ತೆ ಸುರಕ್ಷತೆಯ ಸ್ಥಿತಿಗತಿಗಳನ್ನು ಅರಿಯುವುದಾಗಿತ್ತು. ಈ ಸಮೀಕ್ಷೆಯ ಪ್ರಾಥಮಿಕ ವರದಿಯಿಂದ ತಿಳಿದು ಬಂದಿರುವುದೇನೆಂದರೆ, ಶೇ. 30 ರಷ್ಟು ಜನರು ಯಾವುದೇ ರೀತಿಯ ಚಾಲನಾ ಪರವಾನಗಿ ಹೊಂದಿರದೇ ಕಳೆದ ಮೂರು ತಿಂಗಳ ಅವಧಿಯಲ್ಲಿ ವಾಹನ ಚಾಲನೆ ಮಾಡಿದ್ದಾರೆ.

ಬಸ್ ಮತ್ತು ಕಾರು ಚಾಲನೆ

ಬಸ್ ಮತ್ತು ಕಾರು ಚಾಲನೆ

ವರದಿಯ ಪ್ರಕಾರ ಸಾಮಾನ್ಯ ಸಂಚಾರಿ ಚಿನ್ಹೆಗಳನ್ನು ಗುರುತಿಸುವಲ್ಲಿ ಬಸ್ ಹಾಗು ಕಾರು ಚಾಲನೆ ಮಾಡುವವರು ದ್ವಿಚಕ್ರ ಹಾಗು ತ್ರಿಚಕ್ರ ವಾಹನ ಚಾಲನೆ ಮಾಡುವವರಿಗಿಂತ ಹೆಚ್ಚಿನ ಜ್ಞಾನ ಹೊಂದಿದ್ದಾರೆ ಹಾಗು ಸಾರ್ವಜನಿಕ ಸಾರಿಗೆ (ಬಸ್ ಪ್ರಯಾಣಿಕರು) ಬಳಸುವವರು ಹಾಗು ಪಾದಚಾರಿಗಳಲ್ಲಿ ಈ ಜ್ಞಾನದ ಪ್ರಮಾಣ ಅತ್ಯಂತ ಕಡಿಮೆಯಿದೆ.

ಈ ಸಮೀಕ್ಷೆಯಲ್ಲಿ ಭಾಗವಹಿಸಿದ್ದ ಶೇ.66 ರಷ್ಟು ಜನರು ತಮಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿವಿದೆ ಎಂದು ತಿಳಿಸಿದ್ದಾರೆ. ಆದರೆ, ಇವರಲ್ಲಿ ಕೇವಲ ಶೇ.29 ರಷ್ಟು ಜನರಿಗೆ ಮಾತ್ರ ರಸ್ತೆ ಉಲ್ಲಂಘನೆಗಿರುವ ಸರಿಯಾದ ಪ್ರಮಾಣದ ದಂಡದ ಅರಿವಿದೆ ಹಾಗು ಕೇವಲ ಶೇ. 9 ರಷ್ಟು ಜನರಿಗೆ ಮಾತ್ರ ರಕ್ತದಲ್ಲಿನ ಆಲ್ಕೋಹಾಲ್ ಬಗ್ಗೆ ಮಾಹಿತಿ ಇದೆ. ಹೆಲ್ಮಟ್ ರಹಿತ ಚಾಲನೆ ಈ ಮಾರ್ಗದಲ್ಲಿ ಹೆಚ್ಚಾಗಿ ಕಂಡುಬಂದಿರುವ ಸಂಚಾರಿ ನಿಯಮ ಉಲ್ಲಂಘನೆಯಾಗಿದೆ.

ಸಂಚಾರ ದಟ್ಟಣೆ ಹೆಚ್ಚುತ್ತಿದೆ

ಸಂಚಾರ ದಟ್ಟಣೆ ಹೆಚ್ಚುತ್ತಿದೆ

ಸಭೆಯಲ್ಲಿ ಉಪಸ್ಥಿತರಿದ್ದ ನಿವೃತ್ತ ಐಎಎಸ್ ಅಧಿಕಾರಿ ರಾಮೇಗೌಡ ಅವರು ಮಾತನಾಎಇ 'ಬೆಂಗಳೂರಿನಲ್ಲಿ ಪ್ರಸ್ತುತ 72 ಲಕ್ಷ ನೋಂದಾಯಿತ ವಾಹನಗಳಿದ್ದು ಈ ಸಂಖ್ಯೆ ನಿಯಮಿತವಾಗಿ ಹೆಚ್ಚುತ್ತಿದೆ. ಆದರೆ ಹೆಚ್ಚುತ್ತಿರುವ ವಾಹನ ಸಂಖ್ಯೆಗೆ ಅನುಗುಣವಾಗಿ ರಸ್ತೆ, ಮೂಲ ಸೌಕರ್ಯ ಅಭಿವೃದ್ಧಿಪಡಿಸಲು ವಿಫಲರಾಗುತ್ತಿರುವುದರಿಂದ ಸಂಚಾರ ದಟ್ಟಣೆ ಹೆಚ್ಚುತ್ತಿದೆ' ಎಂದರು.

ವಿದ್ಯಾರ್ಥಿಗಳಿಂದ ನಿಯಮ ಉಲ್ಲಂಘನೆ

ವಿದ್ಯಾರ್ಥಿಗಳಿಂದ ನಿಯಮ ಉಲ್ಲಂಘನೆ

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ನಿರ್ದೇಶಕರು ಹಾಗೂ ಸಾರಿಗೆ ಇಲಾಖೆಯ ಅಪರ ಆಯುಕ್ತರಾದ ನಾರಾಯಣ ಸ್ವಾಮಿ ಅವರು ಮಾತನಾಡಿ, 'ಪ್ರತಿದಿನವೂ ಯುವಜನತೆ ಅದರಲ್ಲೂ ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ರಸ್ತೆ ನಿಯಮಗಳನ್ನು ಉಲ್ಲಂಘಿಸಿವುದನ್ನು ನಾವು ಕಾಣುತ್ತಿದ್ದೇವೆ. ಪೋಷಕರು ಸಹ ತಮ್ಮ ಮಕ್ಕಳಿಗೆ ರಸ್ತೆನಿಯಮಗಳ ಪಾಲನೆ ಕುರಿತು ಸೂಕ್ತ ತಿಳುವಳಿಕೆ ನೀಡುವುದು ಅತ್ಯವಶ್ಯವಾಗಿರುತ್ತದೆ. ಅವರಿಗೆ ಕಾರು ಅಥವಾ ದ್ವಿಚಕ್ರ ವಾಹನವನ್ನು ಕೊಡಿಸುವ ಮೊದಲು, ಮಕ್ಕಳಿಗೆ ಸೂಕ್ತ ಚಾಲನಾ ಪರವಾನಗಿ ಪಡೆಯುವಂತೆ ಹಾಗು ಅವರಿಗೆ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಮನವರಿಕೆ ಮಾಡಿಕೊಡುವುದು ಪೋಷಕರ ಕರ್ತವ್ಯ' ಎಂದರು.

ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ

ಅಪಘಾತಗಳ ಪ್ರಮಾಣ ಕಡಿಮೆಯಾಗಿದೆ

ರಾಜ್ಯ ರಸ್ತೆ ಸುರಕ್ಷತಾ ಪ್ರಾಧಿಕಾರದ ಉಪನಿರ್ದೇಶಕರಾದ ಡಾ.ಆಶಾ ಅಭಿಕರ್ ಮಾತನಾಡಿ, 'ರಸ್ತೆ ಅಪಘಾತಗಳನ್ನು ಕಡಿಮೆ ಮಾಡುಮಾಡುವಲ್ಲಿ ತಮ್ಮ ಇಲಾಖೆಯ ಕಾರ್ಯಕ್ರಮಗಳು ಹಾಗು ವಿವಿಧ ಇಲಾಖೆಗಳ ಜೊತೆಗೂಡಿ ಕೆಲಸ ಮಾಡುವ ಪ್ರಾಮುಖ್ಯತೆಯನ್ನು ವಿವರಿಸಿದರು. ಇದೇ ವೇಳೆ ರಾಜ್ಯದಲ್ಲಿ 2017 ಕ್ಕೆ ಹೋಲಿಸಿದರೆ 2018 ರಲ್ಲಿ ಅಪಾಘಾತಗಳ ಪ್ರಮಾಣ ಕಡಿಮೆಯಾಗಿದೆ ಹಾಗು ಎಲ್ಲರೂ ಒಟ್ಟಾಗಿ ರಸ್ತೆ ಸುರಕ್ಷತೆಗೆ ಶ್ರಮಿಸಿದ್ದಲ್ಲಿ ಅಪಘಾತಗಳ ಪ್ರಮಾಣ ಗಣನೀಯವಾಗಿ ಇಳಿಕೆ ಮಾಡಬಹುದು' ಎಂದರು.

English summary
A roundtable discussion was organized in Bengaluru city by Institute of Public Health with the support of AXA Business services under the banner of Safer roads Bengaluru initiative.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X