ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯ ಪೊಲೀಸರಿಗೆ ಒಲಿದು ಬಂದ 'ಆರೋಗ್ಯ ಭಾಗ್ಯ'

By Manjunatha
|
Google Oneindia Kannada News

ಬೆಂಗಳೂರು, ನವೆಂಬರ್ 21 : ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಭಾಗ್ಯಗಳ ಸರಣಿಗೆ ಈಗ ಪೊಲೀಸರು ಸೇರಿಕೊಂಡಿದ್ದಾರೆ. ಸರ್ಕಾರ ಘೋಷಿಸಿರುವ ಹೊಸ ಯೋಜನೆಯ ಪ್ರಕಾರ 20000 ನಿವೃತ್ತ ಪೊಲೀಸರು ಆರೋಗ್ಯ ಭಾಗ್ಯ ಯೋಜನೆಯ ಫಲಾನುಭವಿಗಳಾಗಲಿದ್ದಾರೆ.

ಪೊಲೀಸರಿಗೆ 'ಯುವ ಬ್ರಿಗೇಡ್‌' ಉಪನ್ಯಾಸ, ತನಿಖೆಗೆ ಸೂಚಿಸಿದ ಎಡಿಜಿಪಿಪೊಲೀಸರಿಗೆ 'ಯುವ ಬ್ರಿಗೇಡ್‌' ಉಪನ್ಯಾಸ, ತನಿಖೆಗೆ ಸೂಚಿಸಿದ ಎಡಿಜಿಪಿ

ನಿವೃತ್ತ ಪೊಲೀಸರ ಆರೋಗ್ಯವನ್ನು ಗಮನದಲ್ಲಿಟ್ಟುಕೊಂಡು ಈ ಯೋಜನೆ ಜಾರಿಗೆ ತರಲಾಗಿದೆ.

ಮಕ್ಕಳ ಹುಟ್ಟುಹಬ್ಬದಂದು ಮೈಸೂರು ಪೊಲೀಸರಿಗೆ ರಜಾ ಮಕ್ಕಳ ಹುಟ್ಟುಹಬ್ಬದಂದು ಮೈಸೂರು ಪೊಲೀಸರಿಗೆ ರಜಾ

Retired police to get helath benifits from new scheem of state govt

ಯೋಜನೆ ಕುರಿತು ಟ್ವಿಟರ್ ನಲ್ಲಿಯೂ ಪ್ರಕಟಿಸಿರುವ ಸಿದ್ದರಾಮಯ್ಯ ಅವರು 'ಸಮಾಜದಲ್ಲಿ ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಪೊಲೀಸ್ ಸಿಬ್ಬಂದಿಗಾಗಿ ರಾಜ್ಯ ಸರ್ಕಾರವು ನಿವೃತ್ತ ಪೊಲೀಸ್ ಸಿಬ್ಬಂದಿಗಾಗಿ "ಆರೋಗ್ಯ ಭಾಗ್ಯ" ಯೋಜನೆಯನ್ನು ಜಾರಿಗೊಳಿಸಿದೆ. ಈ ನಿರ್ಣಯದಿಂದ 20000 ನಿವೃತ್ತ ಪೊಲೀಸರು ಆರೋಗ್ಯ ಭಾಗ್ಯ ಸೇವೆಗೆ ಭಾಜನರಾಗಲಿದ್ದಾರೆ' ಎಂದು ಹೇಳಿದ್ದಾರೆ.

ರಾಜ್ಯದ ಪೊಲೀಸರು ಸಾಮಾಜಿಕ ಒತ್ತಡ ಹಾಗೂ ಕೆಲಸದ ಒತ್ತಡದಿಂದಾಗಿ ಹಲವು ರೀತಿಯ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಎಂದು ಕಳೆದ ವರ್ಷ ಖಾಸಗಿ ಸಂಸ್ಥೆಯೊಂದು ನಡೆಸಿದ ಸಮೀಕ್ಷೆಯಲ್ಲಿ ಹೇಳಲಾಗಿತ್ತು. ರಾಜ್ಯದಲ್ಲಿ ಅತಿ ಒತ್ತಡದಲ್ಲಿ ಕೆಲಸ ಮಾಡುವರಲ್ಲಿ ಪೊಲೀಸರು ಮೊದಲಿಗರು ಎಂದೂ ಸಹ ಸಮೀಕ್ಷೆ ಹೇಳಿತ್ತು.

ಬೆಳಗಾವಿ ಅಧಿವೇಶನ : ಈ ಬಾರಿ ಪೊಲೀಸರಿಗೆ ಊಟ, ವಸತಿಗೆ ಸಂಕಷ್ಟವಿಲ್ಲಬೆಳಗಾವಿ ಅಧಿವೇಶನ : ಈ ಬಾರಿ ಪೊಲೀಸರಿಗೆ ಊಟ, ವಸತಿಗೆ ಸಂಕಷ್ಟವಿಲ್ಲ

ಕಳೆದ ವರ್ಷ ಪೊಲೀಸರು ತಮ್ಮ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಪ್ರತಿಭಟನೆ ಮಾಡಲು ಸಹ ಮುಂದಾಗಿದ್ದರು, ಆದರೆ ಸರ್ಕಾರದ ಕಟ್ಟುನಿಟ್ಟಿನ ಆಜ್ಞೆ ಕಾರಣ ಅದು ನಡೆಯಲಿಲ್ಲ. ಆಗ ಪೊಲೀಸರ ವಿಷಮ ಸ್ಥಿತಿ ಮನಗೊಂಡ ಸರ್ಕಾರವು ಪೊಲೀಸರ ಅವಶ್ಯಕತೆಗಳನ್ನು ಪೂರೈಸಲು ಕ್ರಮ ಕೈಗೊಳ್ಳುವುದಾಗಿ ಹೇಳಿತ್ತು. ಅದರ ಮೊದಲ ಹೆಜ್ಜೆಯಾಗಿ ಆರ್ಡರ್ಲಿ ಪದ್ಧತಿಯನ್ನು ತೆಗೆದುಹಾಕಲಾಗಿತ್ತು.

ಈಗ ನಿವೃತ್ತ ಪೊಲೀಸರಿಗೆ ಸರ್ಕಾರವು ಆರೋಗ್ಯ ಭಾಗ್ಯ ಯೋಜನೆ ಜಾರಿಗೆ ತಂದಿದ್ದು, ಈಗಲಾದರೂ ಪೊಲೀಸರಿಗೆ ಒಳ್ಳೆ ದಿನಗಳು ಪ್ರಾರಂಭವಾಗಿದೆ ಎಂದು ಸಮಾಧಾನದ ನಿಟ್ಟುಸಿರು ಬಿಡುವಂತಾಗಿದೆ.

English summary
Karnataka state govt announce news scheem 'Arogya Bhagya' in witch 20000 retired police will get health benifits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X