ಬೆಂಗಳೂರಿನಲ್ಲಿ ಉದ್ಯೋಗ ನಷ್ಟ: ಕುಸಿದ ಮನೆ ಬಾಡಿಗೆ- ಈಗ ಎಲ್ಲೆಲ್ಲಿ ಎಷ್ಟೆಷ್ಟು? ಮಾಹಿತಿ ತಿಳಿಯಿರಿ
ಬೆಂಗಳೂರಿನಲ್ಲಿ ಉದ್ಯೋಗ ನಷ್ಟಗಳು ಹೆಚ್ಚಾಗುತ್ತಿವೆ. ಇದು ಮನೆ ಬಾಡಿಗೆ ವ್ಯವಹಾರದ ಮೇಲಂತೂ ನೇರವಾಗಿ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ. ಈ ವರದಿ ಓದಿ
ಬೆಂಗಳೂರು, ಮಾರ್ಚ್ 04: ಜಾಗತಿಕ ಆರ್ಥಿಕ ಕುಸಿತದಿಂದ ಬಳಲುತ್ತಿರುವ ನಗರಗಳಲ್ಲಿ ಕರ್ನಾಟಕ ರಾಜಧಾನಿ, ಸಿಲಿಕಾನ್ ಸಿಟಿ ಬೆಂಗಳೂರು ಸಹ ಒಂದು. ಬೃಹತ್ ಕಂಪನಿಗಳಲ್ಲಿ ಆಗುತ್ತಿರುವ ಉದ್ಯೋಗ ನಷ್ಟದಿಂದ ಬೆಂಗಳೂರು ಮಹಾನಗರ ನಲುಗುತ್ತಿದೆ. ಈ ಉದ್ಯೋಗ ನಷ್ಟಗಳು ಹಲವು ವ್ಯವಹಾರಗಳ ಮೇಲೆ ಭಾರೀ ಪರಿಣಾಮ ಬೀರುತ್ತಿದೆ ಎಂದು ವರದಿಯಾಗಿದೆ. ಇದು ಮನೆ ಬಾಡಿಗೆ ವ್ಯವಹಾರದ ಮೇಲಂತೂ ನೇರವಾಗಿ ದುಷ್ಪರಿಣಾಮ ಬೀರುತ್ತಿದೆ ಎಂದು ತಿಳಿದುಬಂದಿದೆ. ಈ ಕುರಿತು ಕೆಲವರನ್ನು ಸಂದರ್ಶಿಸಿದ 'ಮನಿ ಕಂಟ್ರೋಲ್' ವೆಬ್‌ಸೈಟ್ ವಿವಾರವಾದ ವರದಿಯೊಂದನ್ನು ನೀಡಿದೆ. ಇದನ್ನು ಓದಿ.

ಕೆಲಸ ಕಳೆದುಕೊಂಡ ಉದ್ಯೋಗಿಯ ಅಳಲು
ಅಶ್ವಿನಿ (ವಿನಂತಿಯ ಮೇರೆಗೆ ಹೆಸರು ಬದಲಾಗಿದೆ) ಕಳೆದ ಎಂಟು ವರ್ಷಗಳಿಂದ ಬೆಂಗಳೂರಿನಲ್ಲಿ ಐಟಿ ಮಾರ್ಕೆಟಿಂಗ್ ವೃತ್ತಿಪರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮನಿ ಕಂಟ್ರೋಲ್ ವೆಬ್‌ಸೈಟ್ ಜೊತೆ ಮಾತನಾಡಿರುವ ಅವರು, 'ಸಾಕಷ್ಟು ಹೋರಾಟದ ನಂತರ, ಕಳೆದ ವರ್ಷ ನಾನು ನನ್ನ ಕೆಲಸದ ಸ್ಥಳದ ಬಳಿ ಅಪಾರ್ಟ್ಮೆಂಟ್ ಅನ್ನು ಬಾಡಿಗೆಗೆ ತೆಗೆದುಕೊಂಡೆ. ಅದರ ಬಾಡಿಗೆ ತಿಂಗಳಿಗೆ 30,000 ರೂ. ಇತ್ತು' ಎಂದು ಅವರು ಮಾಹಿತಿ ನೀಡಿದ್ದಾರೆ.
'ಕಳೆದ ವರ್ಷದ ನವೆಂಬರ್‌ನಲ್ಲಿ, ಜಾಗತಿಕ ಆರ್ಥಿಕ ಕುಸಿತದಿಂದ ಕಂಪನಿಯು ನಷ್ಟದತ್ತ ಸಾಗಿತು. ನಾನು ನನ್ನ ಕೆಲಸವನ್ನು ಕಳೆದುಕೊಂಡೆ. ಈಗ ಅನಿವಾರ್ಯವಾಗಿ ನನ್ನ ಹುಟ್ಟುಸ್ಥಳವಾದ ಚೆನ್ನೈಗೆ ಮರಳಿದ್ದೇನೆ' ಎಂದು ತಿಳಿಸಿದ್ದಾರೆ.

ಹೈದರಾಬಾದ್‌ಗೆ ಮರಳಿದ ಉದ್ಯೋಗಿ
ಇದೇ ವಿಚಾರವಾಗಿ ಇನ್ನೊಬ್ಬ ಸಾಫ್ಟ್‌ವೇರ್ ಉದ್ಯೋಗಿ ಮಾತನಾಡಿ, 'ಸರ್ಜಾಪುರದಲ್ಲಿ ನಾನು 1 ಬಿಹೆಚ್‌ಕೆ ಮನೆಯನ್ನು ಬಾಡಿಗೆಗೆ ತೆಗೆದುಕೊಂಡೆ. ಅದು ತಿಂಗಳಿಗೆ 25,000 ರೂ. ಇತ್ತು. ಕಳೆದ ವರ್ಷ ನಾನು ಕೆಲಸ ಕಳೆದುಕೊಂಡೆ. ಆರು ವರ್ಷಗಳ ಕಾಲ ಕೆಲಸ ಮಾಡಿದ ನಂತರ, ನಾನು ಈಗ ಹೈದರಾಬಾದ್‌ಗೆ ಮರಳಿದ್ದೇನೆ' ಎಂದು ಅವರು ಹೇಳಿದ್ದಾರೆ.

ಪ್ರಮುಖ ಟೆಕ್ ಕಂಪನಿಗಳಲ್ಲಿ ವಜಾ
ಗೂಗಲ್ ಮತ್ತು ಮೈಕ್ರೋಸಾಫ್ಟ್‌ನಂತಹ ಪ್ರಮುಖ ಟೆಕ್ ಕಂಪನಿಗಳಲ್ಲಿ ವಜಾಗೊಳಿಸುವ ಪ್ರಕ್ರಿಯೆ ಮುಂದುವರಿದಿದೆ. ಸುಮಾರು 2 ಲಕ್ಷ ಐಟಿ ಉದ್ಯೋಗಿಗಳು ಮೂರು ತಿಂಗಳಲ್ಲಿ ಜಾಗತಿಕವಾಗಿ ಉದ್ಯೋಗವನ್ನು ಕಳೆದುಕೊಂಡಿದ್ದಾರೆ. ಇತ್ತೀಚೆಗೆ, ಮೈಕ್ರೋಸಾಫ್ಟ್ ಇಂಡಿಯಾ ಬೆಂಗಳೂರು ಮತ್ತು ಹೈದರಾಬಾದ್‌ನಲ್ಲಿ ಉದ್ಯೋಗಿಗಳನ್ನು ವಜಾಗೊಳಿಸಲು ಪ್ರಾರಂಭಿಸಿದೆ. ಅದರೊಂದಿಗೆ, ಅಮೆಜಾನ್ ಇಂಡಿಯಾ ಸುಮಾರು 1,000 ರಷ್ಟು ಉದ್ಯೋಗಿಗಳನ್ನು ಕೆಲಸದಿಂದ ತೆಗೆದುಹಾಕಿದೆ.

ಜಾಗತಿಕ ಆರ್ಥಿಕ ಕುಸಿತದ ಭಯ
ಇದು ವಸತಿ ಮಾರುಕಟ್ಟೆಯ ಮೇಲೆ ನೇರ ಪ್ರಭಾವ ಬೀರಿದೆ. ಜಾಗತಿಕ ಆರ್ಥಿಕ ಕುಸಿತದ ಭಯ ಮತ್ತು ಪ್ರಮುಖ ವಜಾಗೊಳಿಸುವ ಭಯವು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ವಹಿವಾಟಿನಲ್ಲಿ ಕುಸಿತಕ್ಕೆ ಕಾರಣವಾಗಿದೆ ಎಂದು ತಜ್ಞರು ಹೇಳಿದ್ದಾರೆ.

ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ
ಹೆಚ್ಚಿನ ಪ್ರಮುಖ ಟೆಕ್ ಕಂಪನಿಗಳು ಬೆಂಗಳೂರಿನಲ್ಲಿ ದೊಡ್ಡ ಕಾರ್ಯಾಚರಣೆಗಳನ್ನು ಹೊಂದಿವೆ. ಆರ್ಥಿಕ ಕುಸಿತದೊಂದಿಗೆ ಇಂತಹ ವಜಾಗೊಳಿಸುವಿಕೆಯು ರಿಯಲ್ ಎಸ್ಟೇಟ್ ಕ್ಷೇತ್ರದ ಮೇಲೆ ಪರಿಣಾಮ ಬೀರುತ್ತದೆ ಎಂದು ರಿಯಲ್ ಎಸ್ಟೇಟ್ ಅಸೋಸಿಯೇಟ್ಸ್ ಆಫ್ ಇಂಡಿಯಾ (ಕ್ರೈ) ನ ಒಕ್ಕೂಟದ ಬೆಂಗಳೂರು ಶಾಖೆಯ ಅಧ್ಯಕ್ಷ ಪ್ರದೀಪ್ ಜೋ ಹೇಳಿದ್ದಾರೆ.
ರಿಯಲ್ ಎಸ್ಟೇಟ್ ಪ್ಲಾಟ್‌ಫಾರ್ಮ್ ಇಂಡಿಯಾ ಅಸೆಟ್ಜ್‌ನ ರಾಘವೇಂದ್ರ ರಾವ್ ಮಾತನಾಡಿ, 'ಸಾಂಕ್ರಾಮಿಕ-ಪ್ರೇರಿತ ಲಾಕ್‌ಡೌನ್ ಸಮಯದಲ್ಲಿ, ಆರ್ಥಿಕ ಕುಸಿತಗಳು ರಿಯಲ್ ಎಸ್ಟೇಟ್ನಂತಹ ಕ್ಷೇತ್ರಗಳಲ್ಲಿ ಭಾರೀ ಪರಿಣಾಮವನ್ನು ಉಂಟುಮಾಡಿವೆ' ಎಂದು ವಿವರಿಸಿದ್ದಾರೆ.
'ಉದ್ಯೋಗವನ್ನು ಕಳೆದುಕೊಳ್ಳುವ ಹೆಚ್ಚಿನ ಜನರು ಆತಂಕದಲ್ಲಿದ್ದಾರೆ. ರಿಯಲ್ ಎಸ್ಟೇಟ್ ಮಾರುಕಟ್ಟೆಯ ತಾತ್ಕಾಲಿಕ ನಷ್ಟಕ್ಕೆ ಇದು ಪ್ರಮುಖ ಕಾರಣವಾಗಿದೆ' ಎಂದು ಅವರು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಪ್ರಾಪರ್ಟಿ ಕನ್ಸಲ್ಟೆನ್ಸಿ ಅನರೊಕ್ ಉಪಾಧ್ಯಕ್ಷ ಸಂತೋಷ್ ಕುಮಾರ್, 'ಇದು ಸಂಕಷ್ಟದ ಸಮಯವು ಕೊನೆಗೊಳ್ಳಲಿದೆ. ಇತ್ತೀಚಿನ ವಜಾಗೊಳಿಸುವಿಕೆಯು ಸ್ವಲ್ಪ ಪರಿಣಾಮ ಬೀರಬಹುದು' ಹೇಳಿದ್ದಾರೆ.

ಹೆಚ್ಚುತ್ತಿರುವ ಬಡ್ಡಿದರ
ಹೆಚ್ಚುತ್ತಿರುವ ಬಡ್ಡಿದರಗಳು ದೊಡ್ಡ ಪರಿಣಾಮವನ್ನು ಬೀರುತ್ತವೆ. ಇಲ್ಲಿಯವರೆಗೆ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ರೆಪೊ ದರವನ್ನು 125 ಬೇಸಿಸ್ ಪಾಯಿಂಟ್‌ಗಳಿಂದ 6.25 ಪ್ರತಿಶತಕ್ಕೆ ಏರಿಸಿದೆ. ಸರ್ಕಾರದ ಹಸ್ತಕ್ಷೇಪವು ನಿರ್ಣಾಯಕವಾಗಿದೆ ಎಂದು ತಜ್ಞರು ಹೇಳಿದ್ದಾರೆ.
ಬೆಂಗಳೂರಿನ ಕೇಂದ್ರ ವ್ಯಾಪಾರ ಸ್ಥಳಗಳಾದ ರಿಚ್ಮಂಡ್ ಟೌನ್ ಮತ್ತು ಎಂಜಿ ರಸ್ತೆಯಂತಹ ಜಾಗಗಳಲ್ಲಿ ಬಾಡಿಗೆ ಅಪಾರ್ಟ್‌ಮೆಂಟ್‌ಗಳ ಬೇಡಿಕೆ 15 ಪ್ರತಿಶತದಷ್ಟು ಕುಸಿದಿದೆ. ಈ ಸ್ಥಳಗಳಲ್ಲಿ ಕಡಿಮೆ ದರದಲ್ಲಿ ಮನೆಗಳು ಬಾಡಿಗೆಗೆ ಸಿಗುತ್ತವೆ ಎಂದು ತಿಳಿದುಬಂದಿದೆ.












Click it and Unblock the Notifications