ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಬಸ್‌ಗಳಲ್ಲಿ ಸ್ತ್ರೀಯರಿಗೆ 'ಕೋರಿಕೆ ನಿಲುಗಡೆ': ಎಚ್.ಎಂ.ರೇವಣ್ಣ

|
Google Oneindia Kannada News

ಬೆಂಗಳೂರು, ಮಾರ್ಚ್ 06: ಮಹಿಳೆಯರಿಗಾಗಿ ಕೋರಿಗೆ ಮೇರೆಗೆ ನಿಲುಗಡೆ, ಇಂದಿರಾ ಸಾರಿಗೆ ಮತ್ತು ಕಟ್ಟಡ ಕಾರ್ಮಿಕರಿಗೆ ಉಚಿತ ಪಾಸ್ ನೀರುವ ವ್ಯವಸ್ಥೆಯನ್ನು ಸಾರಿಗೆ ಇಲಾಖೆ ಶೀಘ್ರದಲ್ಲೇ ಕಲ್ಪಿಸಲಿದೆ.

ಮಾರ್ಚ್.೮ರಂದು ವಿಶ್ವವ್ಯಾಪಿ ಮಹಿಳಾ ದಿನಾಚರಣೆ ಹಿನ್ನೆಲೆಯಲ್ಲಿ ಮಹಿಳೆಯರಿಗೆ ಸಾರಿಗೆ ಇಲಾಖೆ ಈ ಕೊಡುಗೆ ನೀಡಲಿದೆ ಎಂದು ಸಾರಿಗೆ ಸಚಿವ ಎಚ್.ಎಂ. ರೇವಣ್ಣ ಹೇಳಿದ್ದಾರೆ.

ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿ ಬಿಎಂಟಿಸಿಯಲ್ಲಿ ಮಹಿಳೆಯರಿಗಾಗಿ "ಗುಲಾಬಿ ಆಸನ'

ಬಸ್ ಪ್ರಯಾಣದ ವೇಳೆ ನಿಲ್ದಾಣಕ್ಕೆ ಮುನ್ನವೇ ಒಂಟಿ ಮಹಿಳೆಗೆ ಮನವಿ ಮೇಲೆ ನಿಲುಗಡೆ ನೀಡುವ ಸೌಲಭ್ಯ ಒದಗಿಸಲು ಕೋರಿಕೆ ನಿಲುಗಡೆ ವ್ಯವಸ್ಥೆ ಜಾರಿಗೊಳಿಸಲು ನಿರ್ಧರಿಸಲಾಗಿದೆ. ಈ ಸವಲತ್ತಿನಿಂದ ಮಹಿಳೆಯರು ಮನೆ ಅಥವಾ ಕಚೇರಿ ತಲುಪಲು ಅನುಕೂಲವಾಗುತ್ತದೆ, ಜತೆಗೆ, ಅಪರಾಧ ಚಟುವಟಿಕೆಗಳಿಗೂ ಕಡಿವಾಣ ಹಾಕಿದಂತಾಗುತ್ತದೆ ಎಂದರು.

Request stop Women in BMTC buses

ಬಿಎಂಟಿಸಿ ಬಸ್ ಗಳಲ್ಲಿ 2.5 ಲಕ್ಷ ಕಟ್ಟಡ ಕಾರ್ಮಿಕರಿಗೆ ಉಚಿತ ಬಸ್ ಪಾಸ್ ಸೌಲಭ್ಯ ಇಂದಿರಾ ಸಾರಿಗೆ ಮಾರ್ಚ್ 13 ರಂದು ಜಾರಿಗೆ ಬರಲಿದೆ. ಜತೆಗೆ 2 ಲಕ್ಷ ಗಾರ್ಮೆಂಟ್ಸ್ ಮಹಿಳಾ ಉದ್ಯೋಗಿಗಳಿಗೂ ಶೀಘ್ರದಲ್ಲಿಉಚಿತ ಬಸ್ ಪಾಸ್ ಸೌಲಭ್ಯ ಕಲ್ಪಿಸಲಾಗುತ್ತದೆ. ಮಹಿಳೆಯರಿಗೆ ಒದಗಿಸಿರುವ ಪಿಂಕ್ ಸೀಟ್ ವ್ಯವಸ್ಥೆಗೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ ಎಂದು ತಿಳಿಸಿದರು.

English summary
Now traveling in BMTC buses for women is more comfortable because the corporation has decided to provide any where stoppage for them as of their convenient.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X