Get Updates
Get notified of breaking news, exclusive insights, and must-see stories!

ಬಸಣ್ಣಿ ಬಾ... ಬಸಣ್ಣಿ ಬಾ.... ಅಂದವನ ಕೈಯಲ್ಲಿ ಕೊಲೆ ಮಾಡಿಸಿದ ಸುಬ್ಬನ ಸುಬ್ಬಿ....

ಬಸಣ್ಣಿ ಬಾ... ಬಸಣ್ಣಿ ಬಾ.... ಅಂತಾ ಹಾಡು ಹೇಳಿ ಅಭಿಮಾನಿಗಳನ್ನು ಕುಣಿದು ಕುಪ್ಪಳಿಸುವಂತೆ ಮಾಡಿದ ಖ್ಯಾತ ನಟ ದರ್ಶನ್ ಈಗ ಕೊಲೆ ಆರೋಪಿ. ದರ್ಶನ್‌ ಈ ಸ್ಥಿತಿಗೆ ನೇರ ಕಾರಣ ಅವರ ಪ್ರೇಯಸಿ ಪವಿತ್ರಾ ಗೌಡ. ಯಾಕೆಂದರೆ ಈ ಕೊಲೆಯ ಕಿಂಗ್ ಪಿನ್ ಈ ಸುಬ್ಬಿನೇ ಅನ್ನೋದು ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಎ1 ಆರೋಪಿಯಾಗಿರುವ ಪವಿತ್ರಾ ಗೌಡ ಜೈಲು ಸೇರಿದ್ದಾರೆ. ಸುಬ್ಬನ ನೆಚ್ಚಿನ ಸುಬ್ಬಿಯನ್ನು ಸದ್ಯ ಪೊಲೀಸ್ ಠಾಣೆಯಿಂದ ಪರಪ್ಪನ ಅಗ್ರಹಾರ ಜೈಲಿಗೆ ಶಿಫ್ಟ್ ಮಾಡಲಾಗಿದೆ. ಇಂದಿನಿಂದ ಪವಿತ್ರಾ ಗೌಡ ಸೇರಿದಂತೆ ಇನ್ನುಳಿದ ಆರೋಪಿಗಳಿಗೆ ಮುದ್ದೆ ಊಟ ಗ್ಯಾರೆಂಟಿ.

Renukaswamy murder case Pavithra is the main accused in the new remand copy

ಜುಲೈ 10ರವರೆಗೆ ಕೋರ್ಟ್ ಈಕೆಯನ್ನು ಪರಪ್ಪನ ಅಗ್ರಹಾರ ಜೈಲಿಗೆ ವರ್ಗಾಯಿಸುವಂತೆ ಆದೇಶಿಸಿದೆ. ಇದೇ ಸಮಯದಲ್ಲಿ ಸಾಕ್ಷಿಗಳನ್ನು ಆಧರಿಸಿ ಪೊಲೀಸರು ಹೊಸ ರಿಮ್ಯಾಂಡ್ ಕಾಪಿಯನ್ನು ತಯಾರಿಸಿದ್ದಾರೆ. ಇದರಲ್ಲಿ ಪವಿತ್ರಾ ಗೌಡನೇ ಕೊಲೆಯ ಕಿಂಗ್ ಪಿನ್ ಎನ್ನುವುದನ್ನು ಉಲ್ಲೇಖಿಸಲಾಗಿದೆ.

ಹಾಗಾದರೆ ಪೊಲೀಸರ ರಿಮ್ಯಾಂಡ್ ಕಾಪಿಯಲ್ಲಿ ಏನಿದೆ? ಪವಿತ್ರಾ ಗೌಡ ಕೊಲೆ ಸಂಚು ರೂಪಿಸಿದ್ದು ಹೇಗೆ? ದರ್ಶನ್ ಅವರನ್ನ ಪ್ರೀತಿಯಿಂದ ಸುಬ್ಬಾ... ಸುಬ್ಬಾ... ಅಂತ ಕರೆಯುತ್ತಿದ್ದ ಈ ಸುಬ್ಬಿ ಮಾಡಿದ ಕೆಲಸ ಎಂಥದ್ದು? ಇಲ್ಲಿದೆ ನೋಡಿ ಸುಬ್ಬನ ಬಸಣ್ಣಿ ಮಾಡಿದ ಪ್ಲ್ಯಾನ್...

ರೇಣುಕಾಸ್ವಾಮಿ ಕೊಲೆ ಆರೋಪದಲ್ಲಿ ಒಟ್ಟು 16 ಆರೋಪಿಗಳು ನೇರವಾಗಿ ಭಾಗಿಯಾಗಿದ್ದಾರೆ. ಪೋಲಿಸರು ವಶಕ್ಕೆ ಪಡೆದ ಸಾಕ್ಷ್ಯಾಧಾರಗಳಿಂದ ಈ ಆರೋಪಿಗಳಿಗೆ ಕಾನೂನಿನ ಮೇಲೆ ಕಿಂಚಿದ್ದು ಭಯ ಹಾಗೂ ಗೌರವ ಇರುವುದು ಕಾಣಿಸುವುದೇ ಇಲ್ಲ. ಮನಬಂದಂತೆ, ಮನಸ್ಸಿಗೆ ತಿಳಿದಂತೆ ಒಬ್ಬ ವ್ಯಕ್ತಿಯನ್ನ ಕೊಂದು ಹಾಕಿದ ಆರೋಪವನ್ನು ಹೊತ್ತಿದ್ದಾರೆ.

Renukaswamy murder case Pavithra is the main accused in the new remand copy

ಈ ಕೊಲೆಯಲ್ಲಿ ಸಿಂಹಪಾಲು ಪವಿತ್ರಾ ಗೌಡ ಅವರದ್ದೇ ಇದೆ ಎಂದು ಸಾಕ್ಷ್ಯಾಧಾರಗಳು ಬಹಿರಂಗಪಡಿಸುತ್ತವೆ. ಎ1 ಆರೋಪಿ ಪವಿತ್ರಾನೇ ಕೊಲೆಗೆ ಪ್ರಚೋದನೆ ನೀಡಿದ್ದಾರೆ. ಅಲ್ಲದೆ ಇತರ ಆರೋಪಿಗಳೊಂದಿಗೆ ಸೇರಿ ಈಕೆ ಕೊಲೆಗೆ ಒಳಸಂಚು ರೂಪಿಸಿರುವುದು ತನಿಖೆಯಲ್ಲಿ ದೃಢಪಟ್ಟಿದೆ.

ರೇಣುಕಾಸ್ವಾಮಿಯಿಂದ ಅಶ್ಲೀಲ ಮೆಸೇಜ್ ಮಾತ್ರ ದರ್ಶನ್‌ಗೆ ತೋರಿಸಿ ಪವಿತ್ರಾ ಗೌಡ ಸುಮ್ಮನಾಗಿರಲಿಲ್ಲ. ಬದಲಿಗೆ ಪವಿತ್ರಾ ಗೌಡ ದರ್ಶನ್ ಸ್ಟಾರ್‌ಗಿರಿಯನ್ನು ಪ್ರಶ್ನೆ ಮಾಡಿ, ಅಶ್ಲೀಲ ಫೋಟೋ ಕಳಿಸಿದವನಿಗೆ ಏನು ಮಾಡಿದಿಯಾ ಅಂತ ಪದೇ ಪದೇ ಜಗಳ ಆಗಿದ್ದಳು. ನಿನಗೇನು ಮಾಡಲು ಆಗಲ್ಲ ಬಿಡು ಅಂತ ಕೊಂಕು ಮಾತನಾಡಿ ಕೊನೆಗೆ ಮಾತು ಕೂಡ ಬಿಟ್ಟಿದ್ದಳು ಎಂದು ತನಿಖೆಯಿಂದ ಬಯಲಾಗಿದೆ. ಇದೇ ವಿಚಾರ ದರ್ಶನ್ ರೊಚ್ಚಿಗೇಳುವಂತೆ ಮಾಡಿತ್ತು.

ರೇಣುಕಾಸ್ವಾಮಿ ಅಪಹರಣ ಮಾಡುವುದರಿಂದ ಹಿಡಿದು ಕೊಲೆಯಾಗುವವರೆಗೂ ಪವಿತ್ರಾ ಆರೋಪಿಗಳೊಂದಿಗೆ ಕರೆಯಲ್ಲಿ ಮಾತನಾಡಿರುವ ಸಾಕ್ಷ್ಯಾಧಾರಗಳು ಸಿಕ್ಕಿವೆ.

ಈ ಕೊಲೆ ಪ್ರಕರಣದಲ್ಲಿ ಎ2 ಆರೋಪಿಯಾಗಿರುವ ದರ್ಶನ್ ತನ್ನ ಹಣ, ಇತರೆ ಆರೋಪಿಗಳು ಹಾಗೂ ತನ್ನ ಅಭಿಮಾನ ಬಳಗವನ್ನು ಬಳಸಿಕೊಂಡು ಕೃತ್ಯದಲ್ಲಿ ಭಾಗಿಯಾಗಿ ಹಾಗೂ ಭಾಗಿಯಾಗಿಸಿ ಕಾನೂನನ್ನು ದುರುಪಯೋಗ ಪಡಿಸಿಕೊಂಡಿರುವುದು ಸಾಕ್ಷ್ಯಾಧಾರಗಳಿಂದ ದೃಢಪಟ್ಟಿದೆ.

ಹಣಬಲ ಹಾಗೂ ಪ್ರಭಾವಿ ಅಭಿಮಾನಿ ಬಳಗವನ್ನು ಬಳಸಿಕೊಂಡು ಅಮಾಯಕ ಮೃತ ರೇಣುಕಾಸ್ವಾಮಿಯನ್ನು ಚಿತ್ರದುರ್ಗದಿಂದ ಎ4, ಎ6 ಮತ್ತು ಎ8ರವರೆಗಿನ ಆರೋಪಿಗಳಿಂದ ಅಪಹರಣ ಮಾಡಿಸಿದ್ದಾರೆ. ರೇಣುಕಾಸ್ವಾಮಿ ಬಳಿ ಇದ್ದ ಚಿನ್ನಾಭರಣಗಳನ್ನು ಬಿಚ್ಚಿಸಿಕೊಂಡು ಪುಟ್ಟಣಗೆರೆ ಶೆಡ್ಡಿಗೆ ಆತನನ್ನು ಕರೆದೊಯ್ದು ಮಾರಣಾಂತಕ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ ಎನ್ನುವುದು ಸಿಕ್ಕ ಸಾಕ್ಷಿಗಳಿಂದ ದೃಢಪಟ್ಟಿದೆ. ತಾಂತ್ರಿಕ ಹಾಗೂ ವೈಜ್ಞಾನಿಕ ಸಾಕ್ಷ್ಯಾಧಾರಗಳಲ್ಲಿ ಆರೋಪಿಗಳು ಕೊಲೆಯಲ್ಲಿ ಭಾಗಿಯಾಗಿರುವುದು ದೃಢವಾಗಿದೆ.

ಅಲ್ಲದೆ ರೇಣುಕಾಸ್ವಾಮಿ ಅವರನ್ನು ಹತ್ಯೆ ಮಾಡಿ ಸಂಚು ರೂಪಿಸಿ ಸಾಕ್ಷಿ ನಾಶಕ್ಕೂ ಹೊಂಚು ಹಾಕಲಾಗಿರುವುದು ಬಹಿರಂಗವಾಗಿದೆ. ಪ್ರಭಾವಿಗಳಿಗೆ ಹಣ ನೀಡಿ ಆಮಿಷ ತೋರಿಸಿ ಅವರ ಮೂಲಕ ಶವವನ್ನು ಸಾಗಿಸುವ ಕೃತ್ಯಕ್ಕೆ ಕೈಹಾಕಿರುವುದು ಗೊತ್ತಾಗಿದೆ. ಅಲ್ಲದೆ ಈ ಪ್ರಕರಣದಲ್ಲಿ ಭಾಗಿಯಾದವರಲ್ಲಿ ಕೆಲವರು ಕ್ರಿಮಿನಲ್ ಪ್ರಕರಣ ಹಿನ್ನೆಲೆಯುಳ್ಳವರು ಆಗಿದ್ದಾರೆ ಎಂದು ಪೊಲೀಸರು ರಿಮ್ಯಾಂಡ್‌ ಕಾಪಿಯಲ್ಲಿ ಉಲ್ಲೇಖಿಸಿದ್ದಾರೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+