Darshan: ದರ್ಶನ್‌ ಬಿಡುಗಡೆಗೆ ಯಾರ ಮೊರೆ ಹೋಗಿದ್ದಾರೆ ದರ್ಶನ್‌ ಪರ ವಕೀಲ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೆ ಈಡಾಗಿರುವ ದರ್ಶನ್ ತನ್ನ ಬಿಡುಗಡೆಗೆ ಶತ ಪ್ರಯತ್ನವನ್ನು ನಡೆಸುತ್ತಿದ್ದಾರೆ. ತಮ್ಮನ್ನು ಭೇಟಿಗೆ ಬಂದವರ ಮುಂದೆ ತಮ್ಮ ಬಿಡುಗಡೆಗೆ ಮನವಿಯನ್ನು ಸಲ್ಲಿಸುತ್ತಿದ್ದಾರೆ. ಪರಪ್ಪನ ಅಗ್ರಹಾರ ಜೈಲಿನ ನಾಲ್ಕು ಗೋಡೆಗಳ ಒಳಗೆ ಕೂತು ದರ್ಶನ್‌ ಕಂಗಾಲಾಗಿದ್ದಾರೆ. ಇದರಿಂದ ಅವರಿಗೆ ಮುಕ್ತಿ ನೀಡಿ ಎಂದು ದರ್ಶನ್‌ ಪರ ವಕೀಲರು ಸಹ ಟೆಂಪಲ್‌ ರನ್‌ ನಡೆಸುತ್ತಿದ್ದಾರೆ.

ಇತ್ತೀಚಿಗೆ ದರ್ಶನ್‌ ಅವರನ್ನು ಭೇಟಿ ಆಗಲು ತಮ್ಮ ದಿನಕರ್‌ ತೂಗುದೀಪ್‌ ಪರಪ್ಪನ್‌ ಅಗ್ರಹಾರ ಜೈಲಿಗೆ ಆಗಮಿಸಿದ್ದರು. ಇದೇ ವೇಳೆ ಅಣ್ಣನಿಗೆ ಧೈರ್ಯ ತುಂಬುವ ಕೆಲಸ ಮಾಡಿದರು. ಇನ್ನು ದರ್ಶನ್‌ ಅವರ ಪತ್ನಿ ಅವರ ಬಿಡುಗಡೆಗೆ ಕಾನೂನು ಹೋರಾಟವನ್ನು ಮುಂದುವರೆಸಿದ್ದಾರೆ. ಈ ವೇಳೆ ದರ್ಶನ್‌ ಬಿಡುಗಡೆಗೆ ವಕೀಲರು ದೇವರ ಮೊರೆ ಹೋಗಿದ್ದಾರೆ.

Renukaswamy Murder Case Darshan s Lawyer Appeals to Dharmasthala Manjunath for His Release

ಯಾವ ದೇವರಿಗೆ ದರ್ಶನ್‌ ವಕೀಲ ಮೊರೆ?

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ2 ಆರೋಪಿ ಆಗಿರುವ ದರ್ಶನ್‌ ಅವರ ಬಿಡುಗಡೆಗೆ ದರ್ಶನ್‌ ಪರ ವಕೀಲ ನಾರಾಯಣ ಸ್ವಾಮಿ ಹಾಗೂ ಅವರ ತಂಡ, ಧರ್ಮಸ್ಥಳಕ್ಕೆ ಭೇಟಿ ನೀಡಿದೆ. ಇದೇ ವೇಳೆ ಮಂಜುನಾಥನ ಸನ್ನಿಧಿಯಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಿದ ತಂಡ, ತಮ್ಮ ಕಕ್ಷಿದಾರರನ್ನು ಬಿಡಿಸುವಂತೆ ದೇವರಲ್ಲಿ ಪಾರ್ಥನೆಯನ್ನು ಮಾಡಿದ್ದಾರೆ.

ದರ್ಶನ್‌ ಪತ್ನಿ ವಿಜಯಲಕ್ಷ್ಮಿ ಅವರು ಅವಕಾಶ ಸಿಕ್ಕಾಗ ಪತಿಯ "ದರ್ಶನ"ಕ್ಕಾಗಿ ಜಾತಕ ಪಕ್ಷದಂತೆ ಕಾಯುತ್ತಿದ್ದಾರೆ. ಅವಕಾಶ ಸಿಕ್ಕಾಗಲೆಲ್ಲಾ ವಿಜಯಲಕ್ಷ್ಮಿ ಪತಿಗೆ ಧೈರ್ಯ ನೀಡುವ ಕಾರ್ಯವನ್ನು ಮಾಡುತ್ತಲೇ ಇದ್ದಾರೆ. ಈ ಕಾರ್ಯಕ್ಕೆ ಈಗ ಅತ್ತಿಗೆಗೆ ದಿನಕರ ಸಹ ಕೈ ಜೋಡಿಸಿದ್ದಾರೆ. ಅವರು ಸಹ ಅಣ್ಣನನ್ನು ಭೇಟಿ ಮಾಡಿ ಮನೋಬಲವನ್ನು ಹೆಚ್ಚಿಸುವ ಕಾರ್ಯವನ್ನು ಮಾಡುತ್ತಿದ್ದಾರೆ.

ಮತ್ತೆ ವಿಚಾರಣೆ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ದರ್ಶನ್‌ ಅವರ ಆಪ್ತೆ ಪವಿತ್ರೆ ಗೌಡ ಅವರ ಸ್ನೇಹಿತೆ ಸಮತಾಳನ ವಿಚಾರಣೆ ನಡೆಸುತ್ತಿದ್ದಾರೆ. ಇವರು ರೇಣುಕಾಸ್ವಾಮಿಗೆ ನೀಡಿರುವ ಎಲೆಕ್ಟ್ರಿಕ್‌ ಶಾಕ್‌ ಡಿವೈಸ್‌ ಖರೀದಿಗೆ ಹಣವನ್ನು ನೀಡಿರುವ ಆರೋಪವನ್ನು ಎದುರಿಸುತ್ತಿದ್ದಾರೆ. ಇದೇ ವಿಚಾರಕ್ಕೆ ಸಮತಾ ಮತ್ತೊಮ್ಮೆ ಪೊಲೀಸರ ಮುಂದೆ ವಿಚಾರಣೆಗೆ ಹಾಜರಾಗಿದ್ದಾರೆ ಎಂದು ತಿಳಿದು ಬಂದಿದೆ.

Renukaswamy Murder Case Darshan s Lawyer Appeals to Dharmasthala Manjunath for His Release

ಊಟಾ ಒಗ್ಗುತ್ತಿಲ್ಲ

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿ ಆಗಿರುವ ಪವಿತ್ರಾ ಗೌಡ ಅವರಿಗೆ ಕುಟುಂಬಸ್ಥರು ಭೇಟಿ ಮಾಡಿದ್ದಾರೆ. ಪವಿತ್ರಾ ಗೌಡ ತಂದೆ, ತಾಯಿಯನ್ನು ಕಂಡು ಕಣ್ಣೀರು ಹಾಕಿದ್ದು, ಜೈಲಿನಲ್ಲಿ ಆಗುತ್ತಿರುವ ತೊಂದರೆಗಳ ಬಗ್ಗೆ ಎಳೆಎಳೆಯಾಗಿ ವಿವರಿಸಿದ್ದಾರೆ ಎಂದು ತಿಳಿದು ಬಂದಿದೆ. ಜೈಲಿನ ಊಟ ಒಗ್ಗುತ್ತಿಲ್ಲ ಎಂದು ಪವಿತ್ರಾ ಕಣ್ಣೀರು ಹಾಕಿದ್ದಾರೆ.

ಜೈಲಿನಲ್ಲಿರುವ ದರ್ಶನ್‌ ಅವರು ಈಗ ಮೊದಲಿಗಿಂತ ಚೇತರಿಸಿಕೊಂಡಿದ್ದಾರೆ. ಅದರಲ್ಲೂ ಕುಟುಂಬಸ್ಥರು ಬಂದು ಭೇಟಿ ಮಾಡಿರುವುದು ಮನೋಬಲ ಹೆಚ್ಚಿಸಿದೆ ಎಂದು ತಿಳಿದು ಬಂದಿದೆ.

ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಾಹರ ಜೈಲಿನಲ್ಲಿರುವ ದರ್ಶನ್ ಹಾಗೂ ಸಹಚರರ ನ್ಯಾಯಂಗ ಬಂಧನ ಜುಲೈ 18ರಂದು ಮುಕ್ತಾಯವಾಗಲಿದೆ.

In the Renukaswamy murder case, Darshan's lawyer has appealed to Dharmasthala Manjunath for his client's release:

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+