Darshan Case: ದರ್ಶನ್‌ಗೆ ಮತ್ತೊಂದು ಆಘಾತ; ಪ್ರದೋಷ್ ಹೇಳಿಕೆ ದಾಖಲಿಕೆಗೆ ತಡೆ ನೀಡಲು ಕೋರ್ಟ್ ನಕಾರ
ಬೆಂಗಳೂರು: ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆಗಳು ನಡೆಯುತ್ತಿವೆ. ಇದರಿಂದ ಜೈಲಿನಲ್ಲಿರುವ ನಟ ದರ್ಶನ್ ತೂಗುದೀಪ ಮತ್ತು ಪವಿತ್ರಾ ಗೌಡಗೆ ಮೇಲಿಂದ ಮೇಲೆ ಶಾಕ್ ಎದುರಾಗುತ್ತಿದೆ. ಕೇಸ್ 14ನೇ ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಪರಿಗಣಿಸಿ ಅವರ ಹೇಳಿಕೆ ಪಡೆಯಲಾಗಿದೆ. ಮತ್ತೊಂದೆಡೆ ಮಾಫಿ ಸಾಕ್ಷಿ ವಿಚಾರಣೆಗೆ ತಡೆ ನೀಡುವಂತೆ ಕೋರಿದ್ದ ನಟ ದರ್ಶನ್ ಮೆಮೋವನ್ನು 59ನೇ ಸಿಸಿಎಚ್ ಕೋರ್ಟ್ ವಜಾಗೊಳಿಸಿದೆ.
ಪ್ರಕರಣದ ವಿಚಾರಣೆಯು 59ನೇ ಸಿಸಿಎಚ್ ಕೋರ್ಟ್‌ನಲ್ಲಿ ನಡೆಯುತ್ತಿದ್ದು, ಇಂದು ಮಾಫಿ ಸಾಕ್ಷಿ ಪ್ರದೋಷ್ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದೆ. ಆರೋಪಿ ಪ್ರದೋಷ್ ಮಾಫಿ ಸಾಕ್ಷಿಯಾಗಿ ಬದಲಾಗುವುದಕ್ಕೆ ದರ್ಶನ್ ಆಕ್ಷೇಪ ವ್ಯಕ್ತಪಡಿಸುತ್ತಾ ಬಂದರೂ ಸಹಿತ ಅದೃಷ್ಟ ಕೈ ಹಿಡಿದಿಲ್ಲ. ಅವರಿಗೆ ಮೇಲಿಂದ ಮೇಲೆ ಸಂಕಷ್ಟ ಎದುರಾಗಿವೆ.

ಇಂದು ಸಹ ಮಾಫಿ ಸಾಕ್ಷಿ ವಿಚಾರಣೆಗೆ ತಡೆ ಕೋರಿದ್ದ ದರ್ಶನ್ ಮನವಿಯನ್ನು ಈ ಹಿಂದೆ ವಿಚಾರಣಾ ನ್ಯಾಯಾಲಯ ನ್ಯಾಯಾದೀಶರು ವಜಾಗೊಳಿಸಿದ್ದರು. ಆಗ ಹೈಕೋರ್ಟ್ ಮೆಟ್ಟಿಲೇರಿದ್ದ ದರ್ಶನ್ ಅವರ ಮನವಿಯು ಅಲ್ಲಿಯು ತಿರಸ್ಕೃರಿಸಿದ್ದ ನ್ಯಾಯಪೀಠವು 59ನೇ ಸಿಸಿಎಚ್ ಆದೇಶ ಎತ್ತಿ ಹಿಡಿದಿತ್ತು. ಬಳಿಕ ವಿಚಾರಣಾದೀನ ನ್ಯಾಯಾಲಯದಲ್ಲಿ ನಟ ದರ್ಶನ್ ಅವರು, ತಾವು ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲಾಗುವುದು. ಅಲ್ಲಿಯವರೆಗೆ ಮಾಫಿ ಸಾಕ್ಷಿ ವಿಚಾರಣೆಗೆ ತಡೆ ನೀಡುವಂತೆ ಮೆಮೋ ಸಲ್ಲಿಸಿದ್ದರು.
ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ: ದರ್ಶನ್ ಕೇಳಿಕೊಂಡಿದ್ದೇನು?
ಇದಕ್ಕೆ ಪ್ರತಿಕ್ರಿಯಿಸಿದ 59ನೇ ಸಿಸಿಎಚ್ ನ್ಯಾಯಾಲಯದ ನ್ಯಾಯಾಧೀಶರು, ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಲು ಆರೋಪಿಗಳಿಗೆ ಹಕ್ಕಿದೆ. ಪ್ರದೋಷ್ ಹೇಳಿಕೆಯು ಸುಪ್ರೀಂ ಕೋರ್ಟ್ ಹೇಳಿಕೆಗೆ ಒಳಪಡುತ್ತದೆ. ಒಂದು ವೇಳೆ ಸುಪ್ರೀಂ ಕೋರ್ಟ್ ನಿಮ್ಮ ಅಜಿ ಪುರಸ್ಕರಿಸಿ, ಮಾಫಿ ಸಾಕ್ಷಿ ಹೇಳಿಕೆ ಪರಿಗಣಿಸಬಾರದು ಎಂದಾದರೆ ಆಗ ಅವರ ಹೇಳಿಕೆಯಿಂದ ಕೈ ಬಿಡಬಹುದು ಎಂದರ್ಥದಲ್ಲಿ ಉಲ್ಲೇಖಿಸಿ ದರ್ಶನ್ ಮೆಮೋ ಅನ್ನು ವಜಾ ಮಾಡಿತು.
ಪ್ರದೋಷ್ ಮಾಫಿ ಸಾಕ್ಷಿಯಾಗಿ ಹೇಳಿಕೆ ದಾಖಲು
ವಿಚಾರಣಾ ನ್ಯಾಯಾಲಯದಲ್ಲಿ ಇಂದು ಸಂಬಂಧಿಸಿದ ವಕೀಲರನ್ನು ಬಿಟ್ಟು ಉಳಿದೆಲ್ಲವರನ್ನು ಹೊರಕ್ಕೆ ಕಳುಹಿಸಿ ಮಾಫಿ ಸಾಕ್ಷಿ ಪ್ರದೋಷ್ ರಿಂದ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಈ ವೇಳೆ ಪ್ರಕರಣ ಎ1ಆರೋಪಿ ಪವಿತ್ರಾ ಗೌಡ ಮತ್ತು ಎ2 ನಟ ದರ್ಶನ್ ಅವರನ್ನು ವಿಡಿಯೋ ಕಾನ್ಫ್‌ರೆನ್ಸ್ ಮೂಲಕ ಹಾಜರುಪಡಿಸಲಾಯಿತು.
ಪ್ರಕರಣವು ಕೋರ್ಟ್ ವಿಚಾರಣೆ ಹಂತದಲ್ಲಿರುವಾಗ ಪ್ರಕರಣ ಆರೋಪಿಯು ಸರ್ಕಾರದ ಪರವಾಗಿ ಸಾಕ್ಷ್ಯ ಹೇಳುವುದಕ್ಕೆ ಸ್ವಯಂ ಪ್ರೇರಿತವಾಗಿ ಒಪ್ಪಿದರೆ ಆತ ಮಾಫಿ ಸಾಕ್ಷಿಯಾಗುತ್ತಾನೆ. ಆತನನ್ನು ಪ್ರಕರಣ ಸಾಕ್ಷಿಯಾಗಿ ಪರಿಗಣಿಸಲಾಗುತ್ತದೆ. ಈ ರೀತಿಯಲ್ಲಿ ಪ್ರದೋಷ್ ಸಹ ತಾನು ಪ್ರಕರಣ ಕುರಿತು ಕೆಲವು ಮಾಹಿತಿ ನೀಡುವುದಾಗಿ ನಿರ್ಧರಿಸಿದ್ದಾನೆ. ಇದನ್ನು ಆಕ್ಷೇಪಿಸಿ ತಡೆಯುಲು ಮುಂದಾದ ನಟ ದರ್ಶನ್ ಸಕಲ ಪ್ರಯತ್ನಗಳ ಕೈಹಿಡಿಯುತ್ತಿಲ್ಲ. ಚಿತ್ರದುರ್ಗ ರೇಣುಕಾಸ್ವಾಮಿ ಪ್ರಕರಣದಲ್ಲಿ ಜೈಲಿನೊಳಗಿರುವ ದರ್ಶನ್, ಪವಿತ್ರಾ ಸೇರಿ ಎಲ್ಲ ಆರೋಪಿಗಳಿಗೂ ಪ್ರದೋಷ್ ಹೇಳಿಕೆಗಳು ಕುತ್ತು ತರುವ ಸಾಧ್ಯತೆಗಳು ಇವೆ.


Click it and Unblock the Notifications
