Breaking news:24 ಗಂಟೆಯೊಳಗೆ ರೇಖಾ ಹಂತಕರ ಬಂಧನ
ಬೆಂಗಳೂರು, ಜೂನ್ 25: ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿಗಳನ್ನು ಕಾಟನ್ ಪೇಟೆ ಪೊಲೀಸರು ಬಂಧಿಸಿದ್ದಾರೆ. ಘಟನೆ ನಡೆದ 24 ಗಂಟೆಯೊಳಗೆ ಎಲ್ಲಾ ಆರೋಪಿಗಳನ್ನು ಬಂಧನವಾಗಿದೆ. ಕೊಲೆ ಸಂಚಿನಲ್ಲಿ ಪಾಲ್ಗೊಂಡಿದ್ದ ನಾಲ್ವರು ಆರೋಪಿಗಳನ್ನು ಶುಕ್ರವಾರ ಬೆಳಗ್ಗೆ ಬಂಧಿಸಲಾಗಿತ್ತು. ಇದೀಗ ಪ್ರಮುಖ ಆರೋಪಿಗಳಾದ ಪೀಟರ್, ಸೂರ್ಯನನ್ನು ರೋಚಕವಾಗಿ ಸೆರೆ ಹಿಡಿಯಲಾಗಿದೆ.
ಮಾಜಿ ಕಾರ್ಪೋರೇಟರ್ ರೇಖಾ ಕದಿರೇಶ್ ಹತ್ಯೆ ಪ್ರಕರಣದ ಸಂಚು ರೂಪಿಸುವಲ್ಲಿ ಮೊದಲಿಗೆ ಮೂವರು ಭಾಗಿಯಾಗಿದ್ದಾರೆ ಎಂದು ಶಂಕಿಸಲಾಗಿತ್ತು. ಆದರೆ, ಪ್ರಾಥಮಿಕ ತನಿಖೆ ನಂತರ ಮೂವರಲ್ಲ, ಆರು ಮಂದಿ ಎಂದು ತಿಳಿದು ಬಂದಿದೆ. ಪೀಟರ್, ಸೂರ್ಯ, ಸ್ಟೀಫನ್ ಮತ್ತು ಇನ್ನೂ 3 ಮಂದಿ ಭಾಗಿಯಾಗಿರುವ ಮಾಹಿತಿಯಿದ್ದು, ಆರು ಮಂದಿ ಬಗ್ಗೆ ಮಾಹಿತಿ ಕಲೆಹಾಕಲಾಗಿತ್ತು.
ಬಂಧಿತ ನಾಲ್ವರು ನೀಡಿದ ಮಾಹಿತಿ ಮೇರೆಗೆ ಪೀಟರ್, ಸೂರ್ಯನಿಗಾಗಿ ಬಲೆ ಬೀಸಿದ ಕಾಟನ್ ಪೇಟೆ ಪೊಲೀಸರು ಕಾರ್ಯಾಚರಣೆಯಲ್ಲಿ ಯಶಸ್ವಿಯಾಗಿದ್ದು, ಸೂರ್ಯ, ಪೀಟರ್ ಹೆಡೆಮುರಿ ಕಟ್ಟಿದ್ದಾರೆ.

ಸುಮನಹಳ್ಳಿ ಶನಿ ಮಹಾತ್ಮ ದೇಗುಲ ಬಳಿ ರೇಖಾ ಹಂತಕರಿಗೆ ಶರಣಾಗಲು ಪೊಲೀಸರು ಸೂಚಿಸಿದ್ದಾರೆ. ಆದರೆ ಪೊಲೀಸರ ಮೇಲೆ ಹಲ್ಲೆಗೆ ಯತ್ನಿಸಿದ್ದರಿಂದ ಸ್ವಯಂರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಇನ್ಸ್ ಪೆಕ್ಟರ್ ಶಿವಸ್ವಾಮಿ ಗುಂಡು ಹಾರಿಸಿ, ನಂತರ ಬಂಧಿಸಿದ್ದಾರೆ.
ರೇಖಾ ಕದಿರೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ರೇಖಾ ಸಂಬಂಧಿ ಸಂಜಯ್ ನೀಡಿದ ದೂರಿನ ಮೇರೆಗೆ ಕಾಟನ್ ಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದರು. ಇಂದು ಆರೋಪಿಗಳಾದ ಲಂಬೂ ಪೀಟರ್ ಹಾಗೂ ಸೂರ್ಯನನ್ನು ಬಂಧಿಸಿ, ವೈದ್ಯಕೀಯ ತಪಾಸಣೆಗಾಗಿ ಸುಂಕದಕಟ್ಟೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.
ಈ ಪ್ರಕರಣದಲ್ಲಿ ಸೂರ್ಯ ಎ1 ಆಗಿದ್ದು, ಪೀಟರ್ ಎ2 ಎಂದು ಕಾಟನ್ ಪೇಟೆ ಪೊಲೀಸರು ಹಾಕಿರುವ ಎಫ್ಐಆರ್ ನಿಂದ ತಿಳಿದು ಬಂದಿದೆ ದಾಖಲಿಸಲಾಗಿದೆ. ಆರೋಪಿಗಳ ವಿರುದ್ಧ ಐಪಿಸಿ ಎಕ್ಷನ್ 34, 302 ಹಾಕಲಾಗಿದೆ.
Recommended Video
ಛಲವಾದಿ ಪಾಳ್ಯದ ಮಾಜಿ ಕಾರ್ಪೋರೇಟರ್ ಅಗಿದ್ದ ರೇಖಾ ಕದಿರೇಶ್ ಫ್ಲವರ್ ಗಾರ್ಡನ್‌ನಲ್ಲಿ ವಾಸವಾಗಿದ್ದರು. ಕೊರೊನಾಸೋಂಕು ಹಿನ್ನೆಲೆಯಲ್ಲಿ ಬಡವರಿಗೆ ಅನ್ನದಾನ ಮಾಡುತ್ತಿದ್ದರು. ಶುಕ್ರವಾರ ಬೆಳಗ್ಗೆ ಬೆಳಗ್ಗೆ 9.30 ರ ಸುಮಾರಿಗೆ ಛಲವಾದಿ ಪಾಳ್ಯದಲ್ಲಿರುವ ಕಚೇರಿಗೆ ರೇಖಾ ಬಂದಿದ್ದರು. ಕಚೇರಿಯಿಂದ ಹೊರಗೆ ಕರೆಸಿಕೊಳ್ಳುವ ಮುನ್ನ ಕಚೇರಿಯ ಎರಡು ಸಿಸಿಟಿವಿ ಕ್ಯಾಮರಾಗಳನ್ನು ಮೇಲಕ್ಕೆ ತಿರುಗಿಸಿದ್ದಾರೆ. ಹೊರಗೆ ಬಂದ ರೇಖಾ ಕದಿರೇಶ್ ಅವರನ್ನು ಬೆಳಗ್ಗೆ 10.30 ರ ಸುಮಾರಿಗೆ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಿದ್ದಾರೆ. ಗಾಯಗೊಂಡ ರೇಖಾ ಅವರನ್ನು ಕೆಂಪೇಗೌಡ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ.












Click it and Unblock the Notifications