ಸೌಮ್ಯಾ ರೆಡ್ಡಿ ಅವರ ಫ್ಲೆಕ್ಸ್ ತೆರವು ಅಭಿಯಾನದ ರಿಯಾಲಿಟಿ ಚೆಕ್ ಮಾಡಿದಾಗ ಕಂಡದ್ದು ಇದು
Recommended Video

ಬೆಂಗಳೂರು, ಜೂನ್ 19: ಜಯನಗರದ ನೂತನ ಶಾಸಕಿ ಸೌಮ್ಯಾ ರೆಡ್ಡಿ ಅವರು ಪ್ರಮಾಣ ವಚನ ಸ್ವೀಕರಿಸಿದ ದಿನವೇ ನಿರ್ಧಾರವನ್ನು ತಳೆದಿದ್ದರು. ತಮ್ಮ ಜಯಕ್ಕೆ ಶುಭಾಶಯ ಕೋರಿದ್ದ ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವುಗೊಳಿಸುವ ನಿರ್ಧಾರವನ್ನು ಅವರು ತಳೆದಿದ್ದರು.
ಶಾಸಕಿ ಸೌಮ್ಯಾ ರೆಡ್ಡಿ ಅವರ ಈ ನಿರ್ಧಾರಕ್ಕೆ ಪತ್ರಿಕೆಗಳಲ್ಲಿ, ಪೋರ್ಟಲ್ ಗಳಲ್ಲಿ, ಫೇಸ್ ಬುಕ್ ಮತ್ತು ಟ್ವಿಟ್ಟರ್ ಸೇರಿದಂತೆ ಸೋಷಿಯಲ್ ಮೀಡಿಯಾದಲ್ಲಿ ಭಾರಿ ಮೆಚ್ಚುಗೆಯೂ ವ್ಯಕ್ತವಾಗಿತ್ತು. ಆದರೆ ಈ ಫ್ಲೆಕ್ಸ್ ತೆರವು ಅಭಿಯಾನ ಕಾರ್ಯರೂಪಕ್ಕೆ ಬಂದಿದೆಯೇ ಇಲ್ಲವೆ ಎಂದು 'ಒನ್ಇಂಡಿಯಾ ಕನ್ನಡ' ರಿಯಾಲಿಟ್ ಚೆಕ್ ಮಾಡಿತು. ಆಗ ಎದುರಾದ ಸತ್ಯವೇ ಬೇರೆ.
ಕ್ಲೀನ್ ಜಯನಗರ ಹೆಸರಿನಲ್ಲಿ ಸೌಮ್ಯಾ ರೆಡ್ಡಿ ಅವರು ಫ್ಲೆಕ್ಸ್ ಮತ್ತು ಬ್ಯಾನರ್‌ಗಳನ್ನು ತೆರವು ಮಾಡುವಂತೆ ಸೂಚಿಸಿದ್ದು ಸರಿಯಷ್ಟೆ. ಆದರೆ ಫ್ಲೆಕ್ಸ್ ಗಳು ತೆರವಾಗಿಬಿಟ್ಟಿದೆಯೇ ಎಂದು ಕೇಳಿದರೆ ಉತ್ತರ ಮಾತ್ರ ಇಲ್ಲ ಎಂದೇ ಹೇಳಬೇಕು. ಮಾಧ್ಯಮದಿಂದ ಪಬ್ಲಿಸಿಟಿ ಪಡೆದುಕೊಳ್ಳಲು ಅವರು ಹೀಗೆ ಮಾಡಿದರೆ? ಉತ್ತರ ಜಯನಗರದ ಶಾಸಕಿಯೇ ನೀಡಬೇಕು.

ಮಯ್ಯಾಸ್ ವೃತ್ತದಲ್ಲಿ ತೆರವು ಮಾಡಿದ್ದರು
ಸೌಮ್ಯಾ ರೆಡ್ಡಿ ಅವರು ಮೊನ್ನೆ ಮಯ್ಯಾಸ್ ವೃತ್ತದಲ್ಲಿ ತಮ್ಮದೇ ಫ್ಲೆಕ್ಸ್ ಬ್ಯಾನರ್‌ಗಳನ್ನು ತೆರವುಗೊಳಿಸಿದ್ದರು. ಜಯನಗರದಾದ್ಯಂತ ಹಾಕಲಾಕಿರುವ ಅನವಶ್ಯಕ ಫ್ಲೆಕ್ಸ್‌ಗಳನ್ನು ತೆರವು ಮಾಡುವಂತೆ ಸೂಚಿಸಿದ್ದರು ಆದರೆ ಬಹುತೇಕ ಕಡೆ ಫ್ಲೆಕ್ಸ್ ಬ್ಯಾನರ್‌ಗಳು ಹಾಗೆಯೇ ಇವೆ.

ದ.ರಾ.ಬೇಂದ್ರೆ ವೃತ್ತದಲ್ಲಿ ನಗುತ್ತಿದ್ದಾರೆ ಸೌಮ್ಯಾ ರೆಡ್ಡಿ
ಜಯನಗರದ ದ.ರಾ.ಬೇಂದ್ರೆ ವೃತ್ತದಲ್ಲಿ ಎರಡು ದೊಡ್ಡ ಫ್ಲೆಕ್ಸ್ ಬ್ಯಾನರ್‌ನಲ್ಲಿ ಸೌಮ್ಯಾ ರೆಡ್ಡಿ ನಗುತ್ತಿದ್ದಾರೆ. ದೊಡ್ಡ ವೃತ್ತವಾದ ಇಲ್ಲಿ ಸಿಗ್ನಲ್ ದೀಪದ ಪಕ್ಕದಲ್ಲಿಯೇ ಕಾಂಗ್ರೆಸ್ ಮತ್ತು ಜೆಡಿಎಸ್ ಎರಡೂ ಪಕ್ಷದವರು ಸೌಮ್ಯಾ ರೆಡ್ಡಿಗೆ ಶುಭಾಶಯ ಕೋರಿ ಫ್ಲೆಕ್ಸ್ ಹಾಕಿದ್ದಾರೆ.

ಜಯನಗರ 3ನೇ ಹಂತದಲ್ಲೂ ಇವೆ
ಜಯನಗರ ಮೂರನೇ ಹಂತದ ಸಿಗ್ನಲ್ ಬಳಿ ಸೌಮ್ಯಾ ರೆಡ್ಡಿ ಅವರಿಗೆ ಶುಭಾಷಯ ಕೋರಿ ಉದ್ದನೆಯ ಫ್ಲೆಕ್ಸ್ ಹಾಕಲಾಗಿದೆ. ಇದು ಸಹ ಸಿಗ್ನಲ್ ಬಳಿಯೇ ಇದ್ದು, ಫ್ಲೆಕ್ಸ್ ಹಿಂದೆ ಇರುವ ಅಂಗಡಿಗಳಿಗೆ ಇದರಿಂದ ಕಿರಿ-ಕಿರಿ ಆಗುತ್ತಿದೆ.

ಚೆನ್ನಮ್ಮ ಕ್ರೀಡಾಂಗಣದ ಪಕ್ಕವೂ ಇದೆ
ಜಯನಗರದ ಕಿತ್ತೂರ ಚೆನ್ನಮ್ಮ ಕ್ರೀಡಾಂಗಣದ ಪಕ್ಕ ರಸ್ತೆಯ ತಿರುವಿನಲ್ಲಿ ದೊಡ್ಡ ಫ್ಲೆಕ್ಸ್ ಹಾಕಲಾಗಿದೆ. ಸೌಮ್ಯಾ ರೆಡ್ಡಿ ಮತ್ತು ಅಪ್ಪ ರಾಮಲಿಂಗಾ ರೆಡ್ಡಿ ಅವರು ಫ್ಲೆಕ್ಸ್‌ನಲ್ಲಿ ರಾರಾಜಿಸುತ್ತಿದ್ದಾರೆ. ರಸ್ತೆಯ ತಿರುವಿನಲ್ಲೇ ಈ ಫ್ಲೆಕ್ಸ್ ಇದ್ದು ವಾಹನ ಸವಾರರ ಗಮನ ಫ್ಲೆಕ್ಸ್ ಕಡೆ ಹೋದರೆ ಬೀಳುವುದು ಗ್ಯಾರೆಂಟಿ.

ಬಿಎಂಟಿಸಿ ಸಂಕೀರ್ಣದ ಬಳಿಯೂ ಇದೆ ಗತಿ
ಜಯನಗರ ಬಿಎಂಟಿಸಿ ಸಂಕೀರ್ಣದ ಬಳಿ ನಾಲ್ಕೈದು ಫ್ಲೆಕ್ಸ್‌ಗಳು ಒಂದೇ ವೃತ್ತದಲ್ಲಿ ರಾರಾಜಿಸುತ್ತಿವೆ. ಇಲ್ಲಿನ ಒಂದು ಫ್ಲೆಕ್ಸ್ ಅನ್ನಂತೂ ಫುಟ್‌ಪಾತ್ ಮೇಲೆಯೇ ಹಾಕಲಾಗಿದೆ.

ಸೌಮ್ಯಾ ರೆಡ್ಡಿ ಅವರಲ್ಲಿ ವಿಶ್ವಾಸವಿದೆ
ಸೌಮ್ಯಾ ರೆಡ್ಡಿ ಅವರು ಫ್ಲೆಕ್ಸ್ ತೆರವಿಗೆ ಸೂಚಿಸಿರುವುದು ಸತ್ಯವೇ ಆದರೆ ಕಾರ್ಯ ಪರಿಣಾಮಕಾರಿಯಾಗಿ ಆಗುವಂತೆ ನೋಡಿಕೊಳ್ಳುವುದು ಕೂಡ ಅವರದ್ದೇ ಜವಾಬ್ದಾರಿ. ಉತ್ಸಾಹದ ಚಿಲುಮೆಯಂತಿರುವ ಅವರ ಮೇಲೆ ಜಯನಗರದ ಜನರಿಗೆ ವಿಶ್ವಾಸವಿದೆ. ಆದರೆ ವೀಶ್ವಾಸವನ್ನು ಉಳಿಸಿಕೊಳ್ಳುವ ಬದ್ಧತೆ ಅವರು ಪ್ರದರ್ಶಿಸಬೇಕಿದೆಯಷ್ಟೆ.
-
Karnataka Weather: ಇಂದು ರಾಜ್ಯದ ಹಲವೆಡೆ ಗುಡುಗು ಸಹಿತ ಅಕಾಲಿಕ ಮಳೆ, ಬೆಂಗಳೂರಿನಲ್ಲಿ ಹೇಗಿರಲಿದೆ ವಾತಾವರಣ? -
Gold Rate: ಮಾರುಕಟ್ಟೆಯಲ್ಲಿ ಚಿನ್ನ-ಬೆಳ್ಳಿ ಬೆಲೆ ತುಸು ಇಳಿಕೆ; ನಿಮ್ಮ ನಗರದಲ್ಲಿ ಇಂದಿನ ನಿಖರ ದರವೆಷ್ಟು ಗೊತ್ತೇ? -
ಐಪಿಎಲ್ 2026 ಅಂಕಪಟ್ಟಿ: ರಾಜಸ್ಥಾನ್ ರಾಯಲ್ಸ್ ನಂಬರ್ 1, ಎರಡನೇ ಸ್ಥಾನದಲ್ಲಿ ಅಬ್ಬರಿಸುತ್ತಿರುವ ಆರ್ಸಿಬಿ! -
April 2 Horoscope: ಆರೋಗ್ಯ ಮತ್ತು ಆರ್ಥಿಕ ಸ್ಥಿತಿಯ ಸಂಪೂರ್ಣ ಮಾಹಿತಿ -
Karnataka Weather: ರಾಜ್ಯದಲ್ಲಿಂದು ಭಾರಿ ಮಳೆ ಮುನ್ಸೂಚನೆ; ಬೆಂಗಳೂರು ಹವಾಮಾನ ಹೇಗಿದೆ? -
Gold Rate: ಮಾರುಕಟ್ಟೆಯಲ್ಲಿ ಇಂದಿನ ನಿಖರ ಚಿನ್ನ, ಬೆಳ್ಳಿ ಬೆಲೆ ಎಷ್ಟು? ಇಲ್ಲಿದೆ ದರ ಪಟ್ಟಿ -
SSLC ಸಮಾಜ ವಿಜ್ಞಾನ ಪರೀಕ್ಷೆ ವಿಶ್ಲೇಷಣೆ: ಪ್ರಶ್ನೆಪತ್ರಿಕೆ ಹೇಗಿತ್ತು? ವಿದ್ಯಾರ್ಥಿಗಳ ಪ್ರತಿಕ್ರಿಯೆ ಏನು? -
ಉಬರ್ ಕ್ಯಾಬ್ ಬುಕ್ ಮಾಡಿದಷ್ಟೇ ಸುಲಭವಾಗಿ ತೆಂಗಿನಕಾಯಿ ಕೀಳುವವರನ್ನು ಕರೆಯಿರಿ: ಆನಂದ್ ಮಹೀಂದ್ರಾ ಹಂಚಿಕೊಂಡ Video Viral -
SSLC ಪರೀಕ್ಷೆ-1ರಲ್ಲಿ ಅಂಕ ಕಡಿಮೆಯಾಗಿದೆಯೇ? ಚಿಂತೆ ಬಿಡಿ, ಮೇ 18ರಿಂದ ನಡೆಯುವ ಪರೀಕ್ಷೆ-2ಕ್ಕೆ ಸಜ್ಜಾಗಿ -
Bengaluru: ಪಬ್ನಲ್ಲಿ 150 ರೂ. ಕೊಟ್ಟು ಆರ್ಡರ್ ಮಾಡಿದ್ರೆ ಬಂದಿದ್ದು ಬರೀ ಹಪ್ಪಳ-ಸಂಡಿಗೆ: ದಂಗಾದ ಗ್ರಾಹಕ -
ಇಂಡೋನೇಷ್ಯಾದಲ್ಲಿ 7.4 ತೀವ್ರತೆಯ ಪ್ರಬಲ ಭೂಕಂಪ: ಏಷ್ಯಾ ರಾಷ್ಟ್ರಗಳಲ್ಲಿ ಸುನಾಮಿ ಆತಂಕ, ಭಾರತದ ಮೇಲಾಗುವ ಪರಿಣಾಮವೇನು? -
Bengaluru House Rent: ಬೆಂಗಳೂರಿನ ಪ್ರೈಮ್ ಏರಿಯಾದಲ್ಲೂ ನಾನ್ವೆಜ್ ಪ್ರಿಯರಿಗೆ ಮನೆ ಸಿಗ್ತಿಲ್ಲ, ಸೋಷಿಯಲ್ ಮೀಡಿಯಾ ಚರ್ಚೆ












Click it and Unblock the Notifications