ಬಾಲಕಿ ರೇಪ್: ಮುಖ್ಯ ಶಿಕ್ಷಕ, ಕಾರ್ಯದರ್ಶಿ ಬಂಧನ

ಬೆಂಗಳೂರು, ಆಗಸ್ಟ್, 06 : ಇಂದಿರಾ ನಗರ ಖಾಸಗಿ ಶಾಲಾ ಬಾಲಕಿ ಮೇಲೆ ನಡೆದ ಲೈಂಗಿಕ ದೌರ್ಜನ್ಯದ ಹಿನ್ನೆಲೆಯಲ್ಲಿ ಶಾಲೆಯ ಮುಖ್ಯೋಪಾಧ್ಯಾಯರು ಹಾಗೂ ಕಾರ್ಯದರ್ಶಿಯನ್ನು ಗುರುವಾರ ಪೊಲೀಸರು ಬಂಧಿಸಿದ್ದಾರೆ.

ಶಾಲಾ ಬಾಲಕಿ ಮೇಲೆ ದುಷ್ಕೃತ್ಯ ಎಸಗಿದ್ದ ಆರೋಪಿಯಾದ ಶಾಲೆಯ ಸೆಕ್ಯುರಿಟಿ ಗಾರ್ಡ್ ಗೌತಮ್ ನ್ನು ಮಂಗಳವಾರ ವಶಕ್ಕೆ ತೆಗೆದುಕೊಂಡು ವಿಚಾರಣೆಗೆ ಒಳಪಡಿಸಿದ ಬೆನ್ನಲೇ ಶಾಲೆಯ ಮುಖ್ಯೋಪಾಧ್ಯಾಯರನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.[ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ, ಆರೋಪಿಯ ಬಂಧನ]

Rape case in bengaluru: Principal, Secretary of school arrested

ಶಾಲೆಗೆ ಗೌತಮ್ ನ್ನು ಆಯ್ಕೆ ಮಾಡಿಕೊಳ್ಳುವ ಸಂದರ್ಭದಲ್ಲಿ ಆತನ ಹಿನ್ನೆಲೆಯನ್ನು ವಿಚಾರಿಸದೆ, ಆತನನ್ನು ಕೆಲಸಕ್ಕೆ ನೇಮಿಸಿಕೊಂಡ ಆರೋಪದ ಮೇಲೆ ಬಂಧಿಸಿದ ಪೊಲೀಸರು ಹೆಚ್ಚಿನ ತನಿಖೆ ಕೈಗೊಳ್ಳಲು ಮುಂದಾಗಿದ್ದಾರೆ.

ಈ ಘಟನೆ ನಡೆದ ಹಿನ್ನೆಲೆಯಲ್ಲಿ ಮಕ್ಕಳ ಸುರಕ್ಷತಾ ಸಮಿತಿ ಸದಸ್ಯರು ಶಾಲೆಗೆ ಭೇಟಿ ನೀಡಿದ್ದು, ಘಟನೆ ಕುರಿತು ಕೂಲಂಕುಶವಾಗಿ ವಿಚಾರಿಸಿದಾಗ ಈ ಮಾಹಿತಿ ತಿಳಿದಿದೆ. ಹಾಗಾಗಿ ಶಾಲಾ ಮುಖ್ಯೋಪಾಧ್ಯಾರು ಹಾಗೂ ಕಾರ್ಯದರ್ಶಿಯನ್ನು ಸೆರೆಹಿಡಿದ ಪೊಲೀಸರು ಸೆಕ್ಷನ್ 188 (disobedience to order duly promulgated by public servant) ಮತ್ತು ಸೆಕ್ಷನ್ 336 (endangering life or personal safety of others) ಅಡಿಯಲ್ಲಿ ಕೇಸು ದಾಖಲಿಸಿಕೊಂಡಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+