• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಂಗಸೌರಭಕ್ಕೆ 15, ವಾರಾಂತ್ಯದಲ್ಲಿ ರಂಕುಲಾಟ

By ಮಲೆನಾಡಿಗ
|

ಬೆಂಗಳೂರು, ಅ.29: ಕಲೆ ಮತ್ತು ಸಾಂಸ್ಕೃತಿಕ ಮೌಲ್ಯಗಳನ್ನು ನಮ್ಮ ರಂಗ ಚಟುವಟಿಕೆ ಹಾಗೂ ರಂಗಪ್ರಯೋಗಗಳ ಮೂಲಕ ಉನ್ನತ ಸ್ತರಕ್ಕೆ ಕೊಂಡೊಯ್ಯುವ ಆಶಯ ಮತ್ತು ಕನಸನ್ನು ಹೊತ್ತಿರುವ ಬೆಂಗಳೂರಿನ ಹವ್ಯಾಸಿ ರಂಗ ತಂಡ ರಂಗಸೌರಭಕ್ಕೆ ಈಗ 15 ವರ್ಷಗಳ ಸಂಭ್ರಮ.

ಈ ಸಂಭ್ರಮವನ್ನು ವಿಶಿಷ್ಟವಾಗಿ, ಅರ್ಥಗರ್ಭಿತವಾಗಿ, ರಚನಾತ್ಮಕವಾಗಿ ಎಲ್ಲಾ ರಂಗಾಸಕ್ತರ ಸಮ್ಮುಖದಲ್ಲಿ ಆಚರಿಸುವ ಕನಸು ಹೊತ್ತಿದೆ. ಒಂದು ಇಡೀ ತಿಂಗಳ 4 ವಾರಾಂತ್ಯಗಳಲ್ಲಿ ಇಡೀ ಕರ್ನಾಟಕದ ಪ್ರತಿಭೆಗಳನ್ನು ಈ ರಂಗೋತ್ಸವದಲ್ಲಿ ಪ್ರಸ್ತುತ ಪಡಿಸುವ ಅಭಿಲಾಷೆ ಹೊಂದಿದೆ. ನಟ, ನಿರ್ದೇಶಕ, ರಂಗ ಕಲಾವಿದ ರಕ್ಷಿತ್ ಶೆಟ್ಟಿ ಆಹ್ವಾನ

'ರಂಕುಲಾಟ' - ಹಲವು ಮಕ್ಕಳ ನಾಟಕಗಳಿಗೆ, ಪ್ರಾಯೋಗಿಕ ಅಭಿವ್ಯಕ್ತಿಗಳಿಗೆ ಹಾಗೂ ನಮ್ಮ ತಂಡದ ಪ್ರಸಿದ್ಧ ನಾಟಕಗಳಾದ ಮೈಸೂರು ಮಲ್ಲಿಗೆ ಹಾಗೂ ಗಂಗಾವತರಣಗಳಿಗೆ ವೇದಿಕೆಯಾಗಲಿದೆ. ಜೊತೆಗೆ ರಂಗಭೂಮಿಯ ಆಳ, ಅಗಲ,ಎತ್ತರ ಬಿತ್ತರಗಳನ್ನು ಅರಿತುಕೊಳ್ಳಲು ಸಹಾಯ ಮಾಡುವಂತಹ ವಿಚಾರಸಂಕೀರಣಗಳನ್ನು ಹಾಗೂ ಕಾರ್ಯಾಗಾರಗಳನ್ನು ರಂಗದಿಗ್ಗಜರು ಈ ಉತ್ಸವದಲ್ಲಿ ನಡೆಸಿಕೊಡಲಿದ್ದಾರೆ. [ಉತ್ತರರಾಮಚರಿತೆ, ಬುದ್ಧಮಾಧವ ನಾಟಕ ಕಥನ]

ರಂಗಪ್ರಯೋಗಗಳಿಗೆ ತನ್ನದೇ ವಾತಾವರಣವನ್ನು ಸೃಷ್ಟಿ ಮಾಡಿಕೊಂಡಿರುವ ಪ್ರತಿಷ್ಠಿತ ಎಚ್. ಎನ್ ಕಲಾಕ್ಷೇತ್ರದಲ್ಲಿ ರಂಕುಲಾಟ ಜರುಗಲಿದೆ. ವಿನೂತನ, ವಿಭಿನ್ನ, ವೈಚಾರಿಕ, ಸಾಂಸ್ಕೃತಿಕ ವಿಚಾರಗಳನ್ನು ಗರ್ಭೀಕರಿಸಿಕೊಂಡಿರುವ ರಂಕುಲಾಟ ಖಂಡಿತವಾಗಿಯೂ ಎಲ್ಲ ರಂಗಾಸಕ್ತರಿಗೆ ವಿಶೇಷ ಅನುಭವವನ್ನೂ, ಅನುಭಾವದ ಕಾಣ್ಕೆಯನ್ನೂ ನೀಡಲಿದೆ ಎಂಬುದು ರಂಗಸೌರಭದ ನಂಬಿಕೆ. ವಾರಾಂತ್ಯದ ನಾಟಕಗಳ ವಿವರ ನಿಮ್ಮ ಮುಂದಿದೆ...

ಟಿಕೆಟ್ ಹಾಗೂ ಪಾಸ್ ಗಳಿಗೆ ಸಂಪರ್ಕಿಸಿ: 95353 22196, 99801 65724, 94488 04334

ನಾಟಕ: ಗಂಗಾವತರಣ

ನಾಟಕ: ಗಂಗಾವತರಣ

ಪ್ರದರ್ಶನದ ದಿನಾಂಕ: ನವೆಂಬರ್ 23

ತಂಡ: ರಂಗ ಸೌರಭ

ಸಮಯ: 7.30

ರಚನೆ, ನಿರ್ದೇಶನ: ರಾಜೇಂದ್ರ ಕಾರಂತ

ಕಲಾವಿದರು: ರಾಜೇಂದ್ರ ಕಾರಂತ, ರಾಕೇಶ್ ರಾಜ್ ಕುಮಾರ್, ಸುನಿಲ್ ಕುಮಾರ್ ವಿ, ಸುಪ್ರೀತಾ ಶೆಟ್ಟಿ, ಪ್ರಮೋದ್ ಕೆ ಶೆಟ್ಟಿ

ವಿವರಣೆ: ಡಾ. ದ.ರಾ ಬೇಂದ್ರೆ ಅವರಿಗೆ ಸಾಹಿತ್ಯ ಕೊಡುಗೆ ಗೌರವಿಸಿ ರಂಗ ನಮನ ಸಲ್ಲಿಸುವ ಅವರ ಬದುಕು ಬರಹ ಕುರಿತ ನಾಟಕ.

ಟಿಕೆಟ್ : ಬುಕ್ ಮೈ ಶೋ ಲಿಂಕ್ ಕ್ಲಿಕ್ ಮಾಡಿ

ನಾಟಕ: ಉಂಡಾಡಿ ಗುಂಡ

ನಾಟಕ: ಉಂಡಾಡಿ ಗುಂಡ

ಪ್ರದರ್ಶನದ ದಿನಾಂಕ: ನವೆಂಬರ್ 15

ತಂಡ:ಗ್ರೀನ್ ರೂಮ್

ಸಮಯ: 7.೦೦ ರಿಂದ 1.30 ಗಂಟೆ ಅವಧಿ

ನಿರ್ದೇಶನ: ಭಾರ್ಗವಿ ನಾರಾಯಣ್

ರಚನೆ: ಪರ್ವತವಾಣಿ

ಕಲಾವಿದರು: ಎಸ್ ಶಿವರಾಮ್, ಅಜಯ್ ರಾವ್, ಕುಲದೀಪಕ್, ಬಿ,ಆರ್ ಜಯರಾಮ್, ಎ ಪದ್ಮನಾಭ

ವಿವರಣೆ: ದಿವಂಗತ ಪರ್ವತವಾಣಿ ಅವರ ಹಾಸ್ಯಭರಿತ ನಾಟಕ ಈಗಾಗಲೇ ಜನಮಾನಸ ಗೆದ್ದಿದೆ. ಹಿರಿಯ ನಟ ಶಿವರಾಂ ಅವರ ನಟನೆಯನ್ನು ಕಾಣುವ ಅವಕಾಶ ರಂಗಪ್ರೇಮಿಗಳಿಗೆ ಮತ್ತೊಮ್ಮೆ ಸಿಗಲಿದೆ.

ಟಿಕೆಟ್ : ಬುಕ್ ಮೈ ಶೋ ಲಿಂಕ್ ಕ್ಲಿಕ್ ಮಾಡಿ

ನಾಟಕ: ಅವನು ಗಜಲ್ ಅವಳು ಶಾಯರಿ

ನಾಟಕ: ಅವನು ಗಜಲ್ ಅವಳು ಶಾಯರಿ

ಪ್ರದರ್ಶನದ ದಿನಾಂಕ: ನವೆಂಬರ್ 09

ತಂಡ: ವಿಎಎಸ್ ಪಿ

ಸಮಯ: 7.೦೦ ರಿಂದ 1.30 ಗಂಟೆ ಅವಧಿ

ನಿರ್ದೇಶನ: ವಿನಯ್ ಶಾಸ್ತ್ರಿ

ರಚನೆ: ಎಂ.ಸಿ ಮಹೇಶ್

ಕಲಾವಿದರು: ದೀಪಿಕಾ ಆರಾಧ್ಯ, ಸುನಿಲ್ ಕುಮಾರ್ ವಿ, ಅಶ್ವಥ್, ರಾಜೇಶ್ವರಿ, ನಿತ್ಯಾ ರಾವ್

ವಿವರಣೆ: ಶಾಯರಿ ಮತ್ತು ಗಜಲ್ ಗಳ ಸಮ್ಮಿಲನದೊಂದಿಗೆ 80ರ ದಶಕದ ರೊಮ್ಯಾಂಟಿಕ್ ಪ್ರೇಮ ಕಥೆ ಹಾಸ್ಯಮಯ ಧಾಟಿಯಲ್ಲಿ ಸಾಗುವ ನಾಟಕ ಇದಾಗಿದೆ.

ಟಿಕೆಟ್ : ಬುಕ್ ಮೈ ಶೋ ಲಿಂಕ್ ಕ್ಲಿಕ್ ಮಾಡಿ

ನಾಟಕ: ಏಕಲವ್ಯ

ನಾಟಕ: ಏಕಲವ್ಯ

ಪ್ರದರ್ಶನದ ದಿನಾಂಕ: ನವೆಂಬರ್ 08.

ತಂಡ: ಲಾವಣ್ಯ(ಬೈಂದೂರು)

ಸಮಯ: 7.೦೦ ರಿಂದ 1.30 ಗಂಟೆ ಅವಧಿ

ನಿರ್ದೇಶನ: ಸುರೇಶ್ ಅನಗಳ್ಳಿ

ರಚನೆ: ಡಾ.ಸಿದ್ದಲಿಂಗಯ್ಯ

ಕಲಾವಿದರು: ಕಾರ್ತಿಕ್ ಶೆಟ್ಟಿ, ಬಿ. ಕೃಷ್ಣಮೂರ್ತಿ ಕಾರಂತ, ನಾಗೇಂದ್ರ ಬಂಕೇಶ್ವರ್, ದಯಾನಂದ್, ಶ್ರೀಧರ್ ವಿ

ವಿವರಣೆ: ಏಕಲವ್ಯನ ಕಥೆ ಎಲ್ಲರಿಗೂ ಗೊತ್ತೇ ಇದೆ. ಇದನ್ನೇ ಆಧಾರವಾಗಿಟ್ಟುಕೊಂಡು ಸಿದ್ದಲಿಂಗಯ್ಯ ಅವರು ನಾಗರಿಕ ಮತ್ತು ಅನಾಗರಿಕ ಸಮಾಜದ ನಡುವಿನ ವೈರುಧ್ಯಗಳ ಪ್ರತಿಬಿಂಬವನ್ನು ಚೆಲ್ಲಿದ್ದಾರೆ.

ಟಿಕೆಟ್ : ಬುಕ್ ಮೈ ಶೋ ಲಿಂಕ್ ಕ್ಲಿಕ್ ಮಾಡಿ

ನಾಟಕ: ಹಲಗಲಿ ಬೇಡರ ದಂಗೆ

ನಾಟಕ: ಹಲಗಲಿ ಬೇಡರ ದಂಗೆ

ಪ್ರದರ್ಶನದ ದಿನಾಂಕ: ನವೆಂಬರ್ 02.

ತಂಡ: ನವೋದಯ

ಸಮಯ: 7.೦೦ ರಿಂದ 1.15 ಗಂಟೆ ಅವಧಿ

ನಿರ್ದೇಶನ: ಪೂರ್ಣಚಂದ್ರ ತೇಜಸ್ವಿ

ರಚನೆ: ಹೂಲಿ ಶೇಖರ್

ಕಲಾವಿದರು: ಪೂರ್ಣಚಂದ್ರ ತೇಜಸ್ವಿ, ಗುರುನಂದನ್, ಕಾರ್ತಿಕ್, ರಾಜೇಶ್, ಅರುಣ್, ವಿನೋದ್

ವಿವರಣೆ: ಬ್ರಿಟಿಷರ ಆಳ್ವಿಕೆ ಕಾಲದಲ್ಲಿ ಹಲಗಲಿಯ ಬುಡಕಟ್ಟು ಜನಾಂಗದ ಸ್ಥಿತಿಗತಿ ಅವರ ಪ್ರತಿಭಟನೆ ಕುರಿತ ನಾಟಕ

ಟಿಕೆಟ್ : ಬುಕ್ ಮೈ ಶೋ ಲಿಂಕ್ ಕ್ಲಿಕ್ ಮಾಡಿ

ನಾಟಕ: ಮೈಸೂರು ಮಲ್ಲಿಗೆ

ನಾಟಕ: ಮೈಸೂರು ಮಲ್ಲಿಗೆ

ಪ್ರದರ್ಶನದ ದಿನಾಂಕ: ನವೆಂಬರ್ 01.

ತಂಡ: ರಂಗ ಸೌರಭ

ಸಮಯ: 7.೦೦ ರಿಂದ 1.30 ಗಂಟೆ ಅವಧಿ

ರಚನೆ, ನಿರ್ದೇಶನ: ರಾಜೇಂದ್ರ ಕಾರಂತ

ಕಲಾವಿದರು: ರಾಜೇಂದ್ರ ಕಾರಂತ, ಸೀತಾ ಕೋಟೆ, ವಲ್ಲಭ ಸೂರಿ, ಪ್ರಮೋದ್ ಕೆ ಶೆಟ್ಟಿ, ಸುನಿಲ್ ಕುಮಾರ್ ವಿ.

ವಿವರಣೆ: ಕವಿ ಕೆಎಸ್ ನರಸಿಂಹಸ್ವಾಮಿ ಅವರ ಬದುಕು ಬರಹ ಆಧಾರಿತ ಗೀತಾ ನಾಟಕ.

ಟಿಕೆಟ್ : ಬುಕ್ ಮೈ ಶೋ ಲಿಂಕ್ ಕ್ಲಿಕ್ ಮಾಡಿ

ನಾಟಕ: ಬುದ್ಗನಾದ

ನಾಟಕ: ಬುದ್ಗನಾದ

ತಂಡ: ಜನಪದರು(ಹೊಸಕೋಟೆ)

ದಿನಾಂಕ 16 ನವೆಂಬರ್

ಸಮಯ: 7.00-8.30

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
On the eve of 15th anniversary of Ranga Sourabha which our team has desired to celebrate with style, though fullness and your presence will be of pivotal importance. Rankulaata a month long event in November 2014, spread over 4 weekends (Saturday & Sunday) showcases the best of talent from all over Karnataka and beyond.This festival is happening at HN Kalakshetra, Jayanagar, Benagluru.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more