ಪರಪ್ಪನ ಅಗ್ರಹಾರದಲ್ಲಿ ಶಶಿಕಲಾ- ರಾಮಲಿಂಗಾ ರೆಡ್ಡಿ ಭೇಟಿ
ಪರಪ್ಪನ ಅಗ್ರಹಾರ ಜೈಲು ಪರಿವೀಕ್ಷಿಸಿದ ನೂತನ ಗೃಹ ಸಚಿವ ರಾಮಲಿಂಗಾ ರೆಡ್ಡಿ. ತಪಾಸಣೆ ವೇಳೆ ಮಹಿಳಾ ಬರಾಕ್ ಬಳಿ ತೆರಳಿ ಎಐಎಡಿಎಂಕೆ ನಾಯಕಿ ಶಶಿಕಲಾ ಕುಶಲೋಪರಿ ವಿಚಾರಿಸಿದ ಸಚಿವರು.
ಬೆಂಗಳೂರು, ಸೆಪ್ಟೆಂಬರ್ 12: ಪರಪ್ಪನ ಅಗ್ರಹಾರದಲ್ಲಿರುವ ಕೇಂದ್ರ ಕಾರಾಗೃಹಕ್ಕೆ ನೂತನ ಗೃಹ ಸಚಿವ ರಾಮಲಿಂಗಾ ರೆಡ್ಡಿ ಭೇಟಿ ನೀಡಿ ಸ್ವಚ್ಛತೆಯನ್ನು ಪರಿಶೀಲಿಸಿದರು. ಇದೇ ವೇಳೆ ಅವರು, ಮಹಿಳಾ ಬರಾಕ್ ಗೆ ತೆರಳಿ ಅಲ್ಲಿ ಬಂಧಿತರಾಗಿರುವ ಎಐಡಿಎಂಕೆಯ ಮಾಜಿ ನಾಯಕಿ ಶಶಿಕಲಾ ಅವರ ಕುಶಲೋಪರಿ ವಿಚಾರಿಸಿದರು.
ಸುಮಾರು 2 ಗಂಟೆಗಳ ಕಾಲ ಜೈಲಿನಲ್ಲಿ ಸುತ್ತಾಡಿದ ರೆಡ್ಡಿ, ಅಡುಗೆ ಮನೆ, ಊಟದ ಮನೆ ಮುಂತಾದ ಕಡೆಗಳಲ್ಲಿ ಸ್ವಚ್ಛತೆಯನ್ನು ಪರಿಶೀಲಿಸಿದರು.

ಹಲವಾರು ಕೈದಿಗಳ ಜತೆ ಮಾತುಕತೆ ನಡೆಸಿದ ಅವರು, ಅವರ ಕುಂದು ಕೊರತೆಗಳನ್ನು ಆಲಿಸಿದರು. ಆನಂತರವೇ ಅವರು ಮಹಿಳಾ ಬರಾಕ್ ಗೆ ತೆರಳಿದ್ದು. ಅಲ್ಲಿ ಶಶಿಕಲಾ ಅವರನ್ನು ತಮಿಳಿನಲ್ಲೇ ಮಾತನಾಡಿಸಿದ ರೆಡ್ಡಿ, ಆರೋಗ್ಯ ವಿಚಾರಿಸಿದರು.
ಪಳನಿಸ್ವಾಮಿ ಸರ್ಕಾರವನ್ನು ಉರುಳಿಸುವ ಸವಾಲ್ ಹಾಕಿದ ದಿನಕರನ್
ಆನಂತರ, ಅಧಿಕಾರಿಗಳೊಂದಿಗೆ ಕೆಲಹೊತ್ತು ಮಾತನಾಡಿದ ಅವರು, ಅಗ್ರಹಾರ ಜೈಲಿನಿಂದ ಹೊರನಡೆದರು.












Click it and Unblock the Notifications