ಬೆಂಗಳೂರಿಗರೇ ಎಚ್ಚರ, ಇನ್ನೂ 48 ಗಂಟೆಗಳ ಕಾಲ ಮಳೆ
ಬೆಂಗಳೂರು, ಸೆಪ್ಟೆಂಬರ್ 27 : ಉದ್ಯಾನ ನಗರಿ ಬೆಂಗಳೂರಿನಲ್ಲಿ ಬುಧವಾರವೂ ಭಾರೀ ಮಳೆಯಾಗಿದೆ. ಮುಂದಿನ 48 ಗಂಟೆಗಳ ಕಾಲ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಮಂಗಳವಾರ ರಾತ್ರಿ ಮತ್ತು ಬುಧವಾರ ಮುಂಜಾನೆ ಬೆಂಗಳೂರಿನಲ್ಲಿ ಭಾರೀ ಮಳೆಯಾಗಿದೆ. ತಗ್ಗು ಪ್ರದೇಶಗಳು ಜಲಾವೃತವಾಗಿದ್ದು, ಹಲವು ಮನೆಗಳಿಗೆ ನೀರು ನುಗ್ಗಿದೆ. ಬುಧವಾರ ಸಂಜೆಯೂ ಕೆಲವು ಬಡಾವಣೆಗಳಲ್ಲಿ ಭಾರೀ ಮಳೆಯಾಗಿದೆ.

ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ಮಾಹಿತಿಯಂತೆ ಉತ್ತರಹಳ್ಳಿಯಲ್ಲಿ 54, ಬಿಟಿಎಂನಲ್ಲಿ 50, ಅಗ್ರಹಾರ ದಾಸರಹಳ್ಳಿಯಲ್ಲಿ 90, ರಾಜಾಜಿನಗರದಲ್ಲಿ 53, ಎಚ್‌ಎಸ್‌ಆರ್ ಲೇಔಟ್‌ನಲ್ಲಿ 63, ಹಂಪಿನಗರದಲ್ಲಿ 122 ಮಿ.ಮೀ. ಮಳೆ ಸುರಿದಿದೆ.
@blrcitytraffic @AddlCPTraffic @DCPTrEastBCP @AcpSe Due to waterlogging on inner ring rd. slow moving traffic from Sony World towards Domlur pic.twitter.com/spvxjqIwxi
— Adugodi Traffic PS (@adugoditraffic1) September 27, 2017
ಇನ್ನೂ ಎರಡು ದಿನಗಳ ಕಾಲ ಬೆಂಗಳೂರು ನಗರದಲ್ಲಿ ಮಳೆ ಮುಂದುವರೆಯಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಭಾರತ-ಆಸ್ಟ್ರೇಲಿಯಾ ನಡುವಿನ 4ನೇ ಏಕದಿನ ಕ್ರಿಕೆಟ್ ಪಂದ್ಯ ಸಹ ಗುರುವಾರ ನಿಗದಿಯಾಗಿದೆ. ಕ್ರಿಕೆಟ್ ಪಂದ್ಯಕ್ಕೆ ಮಳೆ ಅಡ್ಡಿಯಾಗುವ ಸಾಧ್ಯತೆ ಇದೆ.
Amazing work by @blrcitytraffic . Rain or shine, we'll be there to serve you. Monsoon is here, let's be prepared to face it.@CPBlr pic.twitter.com/u35pjhjc0P
— M.G.N. Kumar (@DcpComdCentre) September 27, 2017
ಚನ್ನಪಟ್ಟಣದಲ್ಲಿ ಬುಧವಾರ ಭಾರೀ ಮಳೆಯಾಗುತ್ತಿದ್ದು ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ 4 ಅಡಿಗಳಷ್ಟು ನೀರು ನಿಂತಿದೆ. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಒಂದೇ ದಿನ 4 ಅಡಿ ನೀರು ಹರಿದುಬಂದಿದೆ. ಚನ್ನಪಟ್ಟಣ ರೈಲು ನಿಲ್ದಾಣವೂ ಜಲಾವೃತವಾಗಿದೆ.












Click it and Unblock the Notifications