ಬೆಂಗಳೂರಲ್ಲಿ ಮಳೆ: ಬೆಳ್ಳಂದೂರು ಕೆರೆಯಲ್ಲಿ ನೊರೆ!

ಬೆಂಗಳೂರು, ಜುಲೈ 20: ಕಳೆದ ಎರಡು ದಿನದಿಂದ ರಾಜ್ಯದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಬರದಿಂದ ಕಂಗಾಲಾಗಿದ್ದ ಜನರ ಮುಖದಲ್ಲಿ ಮಂದಹಾಸ ಮೂಡಿದೆ. ಆದರೆ ಬೆಂಗಳೂರಿನ ಬೆಳ್ಳಂದೂರು ಭಾಗದ ಜನರಿಗೆ ಮಾತ್ರ ಮಳೆ ಬಂತು ಅಂದ್ರೆ ನಿದ್ದೆ ಕೆಡುತ್ತದೆ!

ಉದ್ಯಾನ ನಗರಿಯಲ್ಲಿ ಸ್ವಲ್ಪ ಮಳೆ ಸುರಿದರೂ, ನೊರೆ ತುಂಬಿಕೊಂಡು ದುರ್ನಾತ ಬೀರುವ ಬೆಳ್ಳಂದೂರು ಕೆರೆ ಈ ಭಾಗದ ಜನರಿಗೆ ದೊಡ್ಡ ತಲೆನೋವಾಗಿದೆ. ನಿನ್ನೆ(ಜುಲೈ 19) ಬೆಂಗಳೂರಿನಲ್ಲಿ ಸುರಿದ ಮಳೆಗೆ ಬೆಳ್ಳಂದೂರು ಕೆರೆಯಲ್ಲಿ ಮತ್ತೆ ನೊರೆ ಏಳುವುದಕ್ಕೆ ಶುರುವಾಗಿದೆ.

Rain in Bengaluru: Bellandur lake spills toxic foam again

ಕೆರೆಯ ತುಂಬ ರಾಸಾಯನಿಕಯುಕ್ತ ಬಿಳಿ ನೊರೆ ತುಂಬಿಕೊಂಡಿದ್ದು, ರಸ್ತೆಗೆಲ್ಲ ಹಾರಿ, ದಾರಿಹೋಕರ ಮುಖಕ್ಕೆಲ್ಲ ರಾಚುತ್ತಿದೆ. ಬೆಳ್ಳಂದೂರು ಕೆರೆಯಲ್ಲಿ ಹೀಗೆ ಮಾಲಿನ್ಯಯುಕ್ತ ನೊರೆಯೇಳುವುದೇನು ಹೊಸ ವಿಷಯವಲ್ಲ. ಎಷ್ಟೋ ವರ್ಷಗಳಿಂದಲೂ ಇದು ನಡೆದುಕೊಂಡುಬಂದಿದೆ. ಕೆರೆಗೆ ಅವ್ಯಾಹತವಾಗಿ ಬಂದುಸೇರಿದ ಕಾರ್ಖಾನೆಗಳ ತ್ಯಾಜ್ಯ, ಪ್ಲಾಸ್ಟಿಕ್, ರಾಸಾಯನಿಕಗಳಿಂದಾಗಿ ಕೆರೆ ಮಾಲಿನ್ಯಕ್ಕೊಳಗಾಗಿದೆ.

ಈ ಅತಿಯಾದ ರಾಸಾಯನಿಕದಿಂದಾಗಿ ಕೆರೆಯಲ್ಲಿ ಆಗಾಗ ಬೆಂಕಿಯೂ ಏಳುತ್ತಿದೆ. ಈ ಎಲ್ಲ ಬೆಳವಣಿಗೆಯೊಂದಿಗೆ, ಸ್ಥಳಿಯರ ಆಕ್ರೋಶವೂ ಸೇರಿ ಬೆಳ್ಳಂದೂರು ಕೆರೆಯನ್ನು ಸ್ವಚ್ಛಗೊಳಿಸುವ ಕಾರ್ಯಕ್ಕೆ ಕೊನೆಗೂ ಸರ್ಕಾರ ನಾಂದಿ ಹಾಡಿತ್ತು. ಹೀಗೆ ಸರ್ಕಾರಕ್ಕೆ ಬೆಳ್ಳಂದೂರು ಕೆರೆಯ ಸ್ವಚ್ಛತೆ ನೆನಪಾಗಿದ್ದು, ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್ ಜಿಟಿ)ವು ಬಿಬಿಎಂಪಿ(ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ), ಎಲ್ ಡಿಎ(ಕೆರೆ ಅಭಿವೃದ್ಧಿ ಪ್ರಾಧಿಕಾರ) ಮತ್ತು ಕರ್ನಾಟಕ ಸರ್ಕಾರಕ್ಕೆ ಛೀಮಾರಿ ಹಾಕಿದ ಮೇಲೆ!

ಎನ್ ಜಿಟಿ ಸೂಚನೆಯ ಮೇರೆಗೆ ಬೆಳ್ಳಂದೂರು ಕೆರೆ ಸುತ್ತಲಿನ 76 ಕೈಗಾರಿಕೆಗಳನ್ನು ಮುಚ್ಚಿ, ಅವುಗಳಿಗೆ ನೀರು ಮತ್ತು ವಿದ್ಯುತ್ ಸಂಪರ್ಕವನ್ನು ಕಡಿತಗೊಳಿಸಿರುವ ಸರ್ಕಾರ ಬೆಳ್ಳಂದೂರು ಕೆರೆ ಸ್ವಚ್ಛತೆಗೆ ಆದ್ಯತೆ ನೀಡುತ್ತಿದೆ. ಆದರೆ ಎನ್ ಜಿಟಿ, 2017 ರ ಮೇ ತಿಂಗಳಾಂತ್ಯದ ವೇಳೆಗೇ ಕೆರೆಯನ್ನು ಸಂಪೂರ್ಣ ಸ್ವಚ್ಛಗೊಳಿಸುವಂತೆ ಹೇಳಿತ್ತಾದರೂ, ಆ ಡೆಡ್ ಲೈನ್ ನ ಗುರಿತಲುಪುವುದಕ್ಕೆ ಸಾಧ್ಯವೇ ಇಲ್ಲ ಎಂದು ಕರ್ನಾಟಕ ಸರ್ಕಾರ ಹೇಳಿತ್ತು.

ಏನೇ ಆಗಲಿ, ಕೆರೆ ಸ್ವಚ್ಛವಾಗಿ ನಮಗೆ ನೆಮ್ಮದಿಯಿಂದ ಉಸಿರಾಡುವಂತಾದರೆ ಸಾಕು ಎಂಬುದು ಬೆಳ್ಳಂದೂರು ಭಾಗದ ಜನರ ಅಂಬೋಣ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+