ಮಳೆ ಎಫೆಕ್ಟ್; ಮಂಗಳವಾರ ಬೆಂಗಳೂರಿನ ಈ ಪ್ರದೇಶಗಳಲ್ಲಿ ಪವರ್ ಕಟ್

ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ಹಲವೆಡೆ ಮುಂಗಾರು ಪೂರ್ವ ಮಳೆ ಜೋರಾಗಿದ್ದು, ಕಳೆದ ಎರಡ್ಮೂರು ದಿನಗಳಿಂದ ಧಾರಾಕಾರ ಮಳೆ ಜನಜೀವನ ದುಸ್ತರವಾಗಿದೆ. ಜಮೀನುಗಳಲ್ಲಿ ನೀರು ನಿಂತು ಬೆಳೆಗಳು ನೀರು ಪಾಲಾಗಿವೆ.

ಬೆಂಗಳೂರು ನಗರ ವ್ಯಾಪ್ತಿಯಲ್ಲಿ ಭಾನುವಾರ ಮತ್ತು ಸೋಮವಾರ ಸುರಿದ ಮಳೆಗೆ ಹತ್ತಾರು ಕಡೆಗಳಲ್ಲಿ ಬೃಹತ್ ಮರಗಳು ಧರೆಗುರುಳಿವೆ. ವಿದ್ಯುತ್ ತಂತಿಯ ಮೇಲೆ ಸಣ್ಣ ಸಣ್ಣ ಕೊಂಬೆಗಳು ಬಿದ್ದಿರುವುದು ಸಾಮಾನ್ಯವಾಗಿತ್ತು. ಕೆಲವೆಡೆ ಮನೆ ಮುಂದೆ ನಿಲ್ಲಿಸಿರುವ ವಾಹನಗಳು ಮರ ಬಿದ್ದ ಪರಿಣಾಮ ಜಖಂಗೊಂಡಿವೆ.

Power Cut In Bengaluru

ಇದೇ ವೇಳೆ ಭಾರೀ ಗಾಳಿ-ಮಳೆಗೆ ವಿದ್ಯುತ್ ಕಂಬಗಳು ಧರೆಗೆ ಉರುಳಿದ್ದು, ಬೆಸ್ಕಾಂ ಸಿಬ್ಬಂದಿಗಳಿಗೆ ತಲೆನೋವಾಗಿ ಪರಿಣಮಿಸಿದೆ. ಇನ್ನು ಮಳೆಯ ಕಾರಣದಿಂದ ಬೆಂಗಳೂರು ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. ವಿದ್ಯುತ್ ಕಂಬಗಳಿಗೆ ಹಾನಿಯಾಗಿರುವ ಕಾರಣ ಸರಿಪಡಿಸುವ ಕಾರ್ಯದಲ್ಲಿ ಬೆಸ್ಕಾಂ ಸಿಬ್ಬಂದಿ ನಿರತರಾಗಲಿದ್ದಾರೆ.

ಮಂಗಳವಾರ, ಮೇ 23ರ ಬೆಳಗ್ಗೆ 10ರಿಂದ ಮಧ್ಯಾಹ್ನ 3 ಗಂಟೆಯವರೆಗೆ ಬೆಂಗಳೂರು ನಗರದ ಹಲವು ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ ಎಂದು ಬೆಸ್ಕಾಂ ಮಾಹಿತಿ ನೀಡಿದೆ.

ಬೆಂಗಳೂರಿನ ಜಯನಗರ ಡಿವಿಜನ್‌ನ ಕೆಪಿಟಿಸಿಎಲ್ ಸಬ್ ಸ್ಟೇಷನ್‌ನಲ್ಲಿ ಕಾಮಗಾರಿ ನಡೆಯಲಿರುವ ಹಿನ್ನೆಲೆಯಲ್ಲಿ ಮೇ 23ರ ಮಂಗಳವಾರ ಯಾವ ಪ್ರದೇಶಗಳಲ್ಲಿ ಕರೆಂಟ್ ಇರುವುದಿಲ್ಲ ಎನ್ನುವ ಮಾಹಿತಿ ಇಲ್ಲಿದೆ.

Power Cut In Bengaluru

ಅಶೋಕ ನಗರ, ಗರುಡಾ ಮಾಲ್ ಸುತ್ತಮುತ್ತ, ಬ್ರೆಂಟನ್ ರಸ್ತೆ, ಐಸಿಐಸಿಐ ಬ್ಯಾಂಕ್, ಎಂಬಸ್ಸಿ ಹೈಟ್ಸ್, ಅರ್ಬನ್ ಲೈಫ್ಸ್, ಅಸ್ಟಿನ್ ಟೌನ್, ವಿಮಾನ ನಿಲ್ದಾಣ ರಸ್ತೆ, ವಿವೇಕ ನಗರ, ವಿಕ್ಟೋರಿಯಾ ಲೇಔಟ್, ಟ್ರಿನಿಟಿ ಚರ್ಚ್, ಮ್ಯೂಸಿಯಂ ರಸ್ತೆ, ಆಲ್ಬರ್ಟ್ ಸ್ಟ್ರೀಟ್, ಲೆವೆಲ್ಲಿ ರೋಡ್,ಸೇಂಟ್ ಮಾರ್ಕ್ಸ್‌ ರಸ್ತೆ ಪ್ರದೇಶಗಳಲ್ಲಿ ವಿದ್ಯುತ್ ಕಡಿತ ಮಾಡಲಾಗುತ್ತದೆ.

ಇನ್ನು ರಿಚ್ಮಂಡ್ ಟೌನ್, ಲಾಂಗ್ಫೋರ್ಟ್ ರಸ್ತೆ, ಬ್ರೈಟ್ ಸ್ಟ್ರೀಟ್, ಫುಡ್ ವರ್ಡ್ ರಸ್ತೆಗಳು, ಬ್ರಿಗೇಡ್ ರಸ್ತೆ, ವಿಠಲ್ ಮಲ್ಯ ರಸ್ತೆ, ಶಾಪರ್ ಸ್ಟಾಪ್, ನೀಲಸಂದ್ರ, ಆನೇಪಾಳ್ಯ, ಸಿದ್ದಯ್ಯ ರಸ್ತೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ತೆಗೆಯಲಾಗುತ್ತದೆ.

ಭಾನುವಾರ ಮಧ್ಯಾಹ್ನ ಮತ್ತು ಸೋಮವಾರ ಸಂಜೆ ಸುರಿದ ಭಾರೀ ಮಳೆಗೆ ರಾಜ್ಯದಲ್ಲಿ 546 ಕಂಬಗಳು ಧರೆಗುರುಳಿವೆ. ಇನ್ನು 44 ಟ್ರಾನ್ಸ್‌ಫಾರ್ಮರ್‌ಗಳಿಗೆ ಹಾನಿಯಾಗಿದ್ದು, ಅದರ ದುರಸ್ತಿ ಕಾರ್ಯದ ಸಲುವಾಗಿ ಹಲವೆಡೆ ವಿದ್ಯುತ್ ಕಡಿತ ಮಾಡಲಾಗುತ್ತಿದೆ.

Power Cut In Bengaluru

ಕೇವಲ ಬೆಂಗಳೂರು ನಗರ ಹಾಗೂ ಗ್ರಾಮಾಂತರದಲ್ಲೇ 158 ವಿದ್ಯುತ್ ಕಂಬಗಳು ಬಿದ್ದಿವೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹಲವು ಪ್ರದೇಶಗಳಲ್ಲಿ ವಿದ್ಯುತ್ ಪೂರೈಕೆ ಕಷ್ಟವಾಗುತ್ತಿದೆ.

ಬೆಂಗಳೂರು ನಗರದ ಹೆಬ್ಬಾಳ, ಮಲ್ಲೇಶ್ವರಂ, ಯಲಹಂಕ, ವಿಜಯನಗರ, ನಾಗರಭಾವಿ, ಮಹಾಲಕ್ಷ್ಮಿ ಬಡಾವಣೆ, ಹೆಸರಘಟ್ಟ, ಕೋರಮಂಗಲ, ರಾಜಾನುಕುಂಟೆ, ಜಯನಗರ, ಶಿವಾಜಿನಗರ, ಇಂದಿರಾನಗರ, ಕೆಂಗೇರಿ, ರಾಜರಾಜೇಶ್ವರಿ ನಗರ, ಪೀಣ್ಯ ಸೇರಿದಂತೆ ಹಲವು ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.

ಬೆಂಗಳೂರು ಸೇರಿದಂತೆ ಬೆಸ್ಕಾಂ ವ್ಯಾಪ್ತಿಯ ಪ್ರದೇಶಗಳಲ್ಲಿ ಎಲ್ಲೆಲ್ಲಿ ಕಂಬಗಳು ಬಿದ್ದಿವೆಯೋ, ಅಲ್ಲೆಲ್ಲ ಬೆಸ್ಕಾಂ ಸಿಬ್ಬಂದಿ ಬೀಡು ಬಿಟ್ಟಿದ್ದಾರೆ. ಕಳೆದ 48 ಗಂಟೆಗಳಿಂದ ನಿರಂತರ ಕೆಲಸದಲ್ಲಿ ತೊಡಗಿದ್ದಾರೆ. ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಮುರಿದ ಕಂಬಗಳು ಮತ್ತು ಸುಟ್ಟ ಟ್ರಾನ್ಸ್‌ಫಾರ್ಮಾರ್‌ಗಳನ್ನು ಬೇರೆಡೆಗೆ ಸ್ಥಳಾಂತರಿಸುತ್ತಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+