Bengaluru Weather Today: ಬೆಂಗಳೂರಿಗೆ ಭಾರೀ ಮಳೆ ಸಂಭವ! ಯೆಲ್ಲೋ ಅಲರ್ಟ್
ಬೆಂಗಳೂರು, ಜೂನ್ 23: ಕರ್ನಾಟಕದಾದ್ಯಂತ ತಗ್ಗಿರುವ ಮುಂಗಾರು ಮಳೆಯು ಮತ್ತೆ ಚುರುಕುಗೊಳ್ಳುವ ಲಕ್ಷಣ ಇದೆ. ಇದರ ಬೆನ್ನಲ್ಲೆ ಬೆಂಗಳೂರಿನ ಕೆಲವೆಡೆ ಭಾನುವಾರ ಉತ್ತಮ ಮಳೆ ಆಗಿದೆ. ಮುಂದಿನ ಕೆಲವು ದಿನಗಳ ಕಾಲ ನಗರದಲ್ಲಿ ಸಾಧಾರಣದಿಂದ ಭಾರಿ ಮಳೆ ಆಗುವ ನಿರೀಕ್ಷೆಗಳು ಇವೆ. ತಾಪಮಾನ ಸಹ ಇಳಿಕೆ ಆಗಲಿದ್ದು, ಹೆಚ್ಚಿನ ಪ್ರಮಾಣದಲ್ಲಿ ಚಳಿ ಉಂಟಾಗಬಹುದು ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 26 ಅಥವಾ ಜೂನ್ 27ರವರೆಗೆ ರವರೆಗೆ ನಗರಾದ್ಯಂತ ಸಾಮಾನ್ಯ ಮಳೆ ಆಗಬಹುದು. ಇದರ ನಂತರ ಮುಂಗಾರು ಮಳೆ ನಗರಾದ್ಯಂತ ಅಬ್ಬರಿಸಲಿದ್ದು, ಸಾಧಾರಣದಿಂದ ಭಾರೀ ಮಳೆ ಆಗುವ ನಿರೀಕ್ಷೆ ಇದೆ. ನಗರದೆಲ್ಲಡೆ ಮಬ್ಬು ವಾತಾವರಣ, ಚಳಿ ಉಂಟಾಗಲಿದೆ. ಜೂನ್ 28ರಂದು ಬೆಂಗಳೂರಿನಾದ್ಯಂತ ಭಾರೀ ಮಳೆ ಆಗಲಿದ್ದು, ಕನಿಷ್ಠ 6.50 ಮಿಲಿ ಮೀಟರ್‌ನಿಂದ 110.5 ಮಿಲಿ ಮೀಟರ್‌ವರೆಗೆ ಮಳೆ ಸಾಧ್ಯತೆ ಇದೆ. ಹವಾಮಾನ ಇಲಾಖೆ ಆ ದಿನ ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೆ 'ಯೆಲ್ಲೋ ಅಲರ್ಟ್' ಘೋಷಿಸಿದೆ.

ಹವಾಮಾನ ಇಲಾಖೆ ಸೋಮವಾರದ ಮುನ್ಸೂಚನೆ ಪ್ರಕಾರ, ಬೆಂಗಳೂರು ಸೇರಿದಂತೆ ರಾಜ್ಯಾದ್ಯಂತ ಮಳೆ ಚುರುಕಾಗಲಿದೆ. ಕಳೆದ ವಾರ ಮುಂಗಾರು ಮಳೆ ಕಡಿಮೆ ಆಗಿ ಬಿಸಿಲಿನ ದರ್ಶನವೇ ಹೆಚ್ಚಾಗಿತ್ತು. ಭಾನುವಾರ ಸಹ ನಗರದಲ್ಲಿ ಉತ್ತಮ ಮಳೆ ಆಗಿದ್ದು, ನಗರಕ್ಕೆ ಮಳೆ ತಂಪೆರೆದಿದೆ.
ಎಲ್ಲೆಲ್ಲಿ ಎಷ್ಟು ಮಳೆ ಆಗಿದೆ?
ಅಂಜನಾಪುರ 17.5 ಮಿಲಿ ಮೀಟರ್, ವಿ.ನಾಗೇನಹಳ್ಳಿ 16.5 ಮಿಲಿ ಮೀಟರ್, ಎಚ್‌ಬಿಆರ್ ಬಡಾವಣೆ 15.5 ಮಿಲಿ ಮೀಟರ್, ಬಾಣಸವಾಡಿ 15.5 ಮಿಲಿ ಮೀಟರ್, ಗೊಟ್ಟಿಗೆರೆ 14.5 ಮಿಲಿ ಮೀಟರ್, ಬೆಗೂರು 14.6 ಮಿಲಿ ಮೀಟರ್, ಪುಲಕೇಶಿನಗರ 14 ಮಿಲಿ ಮೀಟರ್, ಬಾಗಲಗುಂಟೆ 11 ಮಿಲಿ ಮೀಟರ್, ಚೊಕ್ಕಸಂದ್ರ 11 ಮಿಲಿ ಮೀಟರ್ ಮಳೆ ಭಾನುವಾರ ದಾಖಲಾಗಿದೆ. ಇದರಿಂದ ಅಲ್ಲಲ್ಲಿ ಸಂಚಾರ ದಟ್ಟಣೆ, ಜನ ಸಂಚಾರಕ್ಕೆ ಕಿರಿ ಕಿರಿ ಉಂಟಾಯಿತು. ಉಳಿದಂತೆ ನಗರದಲ್ಲಿ ತಂಪು ವಾತಾವರಣ ಕಂಡು ಬಂದಿದೆ.
ನಗರದಲ್ಲಿ ಮುಂಗಾರು ಮತ್ತೆ ಚುರುಕು
ಇಂದು ಸೋಮವಾರ ಸಹ ನಗರದ ವಿವಿಧೆಡೆ ತುಂತುರು ಮಳೆ ಸಂಭವವಿದೆ. ಇಂದಿನಿಂದ ಮುಂದಿನ ಶುಕ್ರವಾರವರೆಗೆ ಇದೇ ರೀತಿ ಮಳೆ ಆಗಲಿದ್ದು, ಶನಿವಾರ (ಜೂನ್ 28ರಂದು) ಭಾರೀ ಮಳೆ ಆಗಲಿದೆ. ಈ ಮೂಲಕ ನಗರದಲ್ಲಿ ಮೂರನೇ ಭಾರಿ ಮುಂಗಾರು ಮಳೆ ತನ್ನ ಆರ್ಭಟ ಮುಂದುವರಿಸಲಿದೆ.
ಕರ್ನಾಟಕದ ಏಳು ಜಿಲ್ಲೆಗಳಿಗೆ ಆರೆಂಜ್ ಅಲರ್ಟ್
ನಾಳೆ ಮಂಗಳವಾರ (ಜೂನ್ 24) ಕರ್ನಾಟಕದಲ್ಲಿ ಭಾರೀ ಮಳೆ ಆಗಲಿದೆ. ರಾಜ್ಯದ ಉಡುಪಿ,ಉತ್ತರ ಕನ್ನಡ, ದಕ್ಷಿಣ ಕನ್ನಡ, ಬೆಳಗಾವಿ, ಚಿಕ್ಕಮಗಳೂರು, ಕೊಡಗು ಹಾಗೂ ಶಿವಮೊಗ್ಗ ಜಿಲ್ಲೆಗಳಲ್ಲಿ ಅತ್ಯಧಿಕ ಮಳೆ ಆಗಲಿದೆ. ಕನಿಷ್ಠ 110ರಿಂದ 200 ಮಿಲಿ ಮೀಟರ್‌ವರೆಗೆ ಮಳೆ ಆಗುವ ನಿರೀಕ್ಷೆ ಇದ್ದು, ಒಂದು ದಿನ 'ಆರೆಂಜ್ ಅಲರ್ಟ್' ನೀಡಲಾಗಿದೆ ಎಂದು ಸೋಮವಾರದ ಐಎಂಡಿ ಮಳೆ ಮುನ್ಸೂಚನೆ ವರದಿ ತಿಳಿಸಿದೆ.
-
IPL 2026: ಸಿಎಸ್ಕೆ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೆ ಮಳೆ ಭೀತಿ ಇದ್ಯಾ? ಹವಾಮಾನ ಇಲಾಖೆ ಹೇಳೋದೇನು -
Bengaluru Rain: ಸುಡುವ ಬಿಸಿಲಿನಿಂದ ಕಂಗೆಟ್ಟಿದ್ದ ಬೆಂಗಳೂರಿನ ಹಲವೆಡೆ ತುಂತುರು ಮಳೆ -
Ankita Jayaram: ನಟನೆಯ ನಡುವೆಯೂ ದ್ವಿತೀಯ ಪಿಯುಸಿಯಲ್ಲಿ ಕರ್ಣ ಧಾರಾವಾಹಿ ಖ್ಯಾತಿಯ ನಟಿ ಅಂಕಿತಾ ಜಯರಾಮ್ ಅಮೋಘ ಸಾಧನೆ -
April 10 Horoscope: 12 ರಾಶಿಗಳಿಗೆ ಇಂದು ಆರೋಗ್ಯ, ಹಣಕಾಸು ಮತ್ತು ಪ್ರೇಮದಲ್ಲಿ ಮಿಶ್ರ ಫಲ -
ಬೆಂಗಳೂರು ನಾಯಂಡಳ್ಳಿಯಲ್ಲಿ ಮನೆಯ ಮೊದಲ ಮಹಡಿಯಿಂದ ಬಿದ್ದ ಒಂದೂವರೆ ವರ್ಷದ ಕಂದಮ್ಮ -
SSLC Hindi: ಅಂಕ ಬದಲು ಗ್ರೇಡಿಂಗ್ ವಿರೋಧಿಸಿ ಅರ್ಜಿ ಸಲ್ಲಿಸಿದ ಅರ್ಜಿದಾರರಿಗೆ 1 ಲಕ್ಷ ರೂ. ದಂಡ: ಕರವೇ ಹೇಳಿದ್ದೇನು -
Bengaluru: ಬೆಂಗಳೂರು ನಗರದಲ್ಲಿ ಸ್ವಿಗ್ಗಿ, ಜೊಮ್ಯಾಟೋ ಡೆಲಿವರಿ ಬಾಯ್ಸ್ಗೆ ಸಂಕಷ್ಟ, ಅಮಾನವೀಯ ಲಿಫ್ಟ್ ಸಂಸ್ಕೃತಿ -
ಚಿಕ್ಕಮಗಳೂರಲ್ಲಿ ನಾಪತ್ತೆಯಾಗಿದ್ದ ಕೇರಳದ ಬಾಲಕಿ ಶ್ರಿನಂದಾ ಸಾವು: 2 ಸಾವಿರ ಅಡಿ ಪ್ರಪಾತದಲ್ಲಿ ಶವ ಪತ್ತೆ -
Copra: ತಿಪಟೂರು ಎಪಿಎಂಸಿ ಮಾರುಕಟ್ಟೆಯಲ್ಲಿ ಮತ್ತೆ ದಾಖಲೆ ಬೆಲೆಗೆ ಮಾರಾಟವಾದ ಕೊಬ್ಬರಿ: ನಿರ್ಮಾಣವಾಯ್ತು ಹೊಸ ಇತಿಹಾಸ -
Mona Lisa: ಮಹಾಕುಂಭ ಮೇಳದ ಫೇಮಸ್ ಮೊನಾಲಿಸಾ ಪತಿಗೆ ಕಾನೂನು ಸಂಕಷ್ಟ: ಫರ್ಮಾನ್ ಖಾನ್ ಮೇಲೆ ಪೋಕ್ಸೋ ಪ್ರಕರಣ -
2nd PUC: ಬೆಂಗಳೂರು - ಪಿಯುಸಿಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ 260 ವಿದ್ಯಾರ್ಥಿಗಳಿಗೆ 35,000 ರೂ. -
RBI New Rule: ಇನ್ಮುಂದೆ ಆನ್ಲೈನ್ ವಹಿವಾಟಿನಲ್ಲಿ ದೊಡ್ಡ ಬದಲಾವಣೆ: 10,000 ರೂ. ಹಣ ವರ್ಗಾವಣೆಗೂ ಹೊಸ ನಿಯಮ












Click it and Unblock the Notifications