Bengaluru Rain alert: ಕೆಲವೇ ಕ್ಷಣಗಳಲ್ಲಿ ನಗರದಲ್ಲಿ ಗುಡುಗು ಸಹಿತ ಮಳೆ ಅಬ್ಬರ! ಮುನ್ಸೂಚನೆ

ಬೆಂಗಳೂರು, ಮಾರ್ಚ್ 21: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಮಾರ್ಚ್ 23ರಂದು ವ್ಯಾಪಕ ಮಳೆ ಬರಲಿದೆ ಎಂದು ಮೊದಲು ಹೇಳಲಾಗಿತ್ತು. ಆದರೆ ಬದಲಾದ ಹವಾಮಾನ ವೈಪರಿತ್ಯ ಕಾರಣದಿಂದಾಗಿ ಇಂದು ಶುಕ್ರವಾರ ಸಂಜೆಗೆ ವಿವಿಧ ವಲಯಗಳ, ಹಲವು ವಾರ್ಡ್‌ಗಳಲ್ಲಿ ವ್ಯಾಪಕ ಮಳೆ ಸುರಿಯಲಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮುನ್ಸೂಚನೆ ನೀಡಿದೆ. ಆದ್ದರಿಂದ ಇಂದು ಸಂಜೆ ಇಲ್ಲವೇ ರಾತ್ರಿ ಸಂಚರಿಸುವವರು, ಮನೆಯಿಂದ ಹೊರ ಬರುವವರು ಎಚ್ಚರ ವಹಿಸಬೇಕಿದೆ.

ಇಂದು ಶುಕ್ರವಾರ (ಮಾರ್ಚ್ 21) ಅರ್ಧ ಬೆಂಗಳೂರಿಗೆ ಬೆಂಗಳೂರಿನಲ್ಲಿ ಗುಡುಗು ಮಿಂಚು ಸಹಿತ ಮಳೆಯಾಗಿಲಿದೆ. ಯಲಹಂಕ ವಲಯದ ವಾರ್ಡ್, ದಾಸರಹಳ್ಳಿ ವಲಯ ಮತ್ತು ಆರ್‌ಆರ್ ನಗರ ವ್ಯಾಪ್ತಿಯ ಪ್ರದೇಶದಲ್ಲಿ ಹಗುರದಿಂದ ಸಾಧಾರಣ ಮಳೆ ಆಗಲಿದೆ. ಈ ಭಾಗದಲ್ಲಿ ಪೂರ್ವ ಮುಂಗಾರು ಮಳೆ ಹೆಚ್ಚಿನ ಪ್ರಮಾಣದಲ್ಲಿ ಸುರಿಯಬಹುದು.

Rain Alert Bengaluru See Light to Moderate Rain Today March 21 Weather Forecast Temperature

ಬೊಮ್ಮನಹಳ್ಳಿ ವಲಯ, ಬೆಂಗಳೂರು ದಕ್ಷಿಣ ವಲಯ, ಪಶ್ಚಿಮ ವಲಯದಲ್ಲಿ ಹಗುರದಿಂದ ತುಂತುರು ಮಳೆ ಆಗುವ ಸಾಧ್ಯತೆ ಇದೆ. ಇನ್ನರ್ಧ ಭಾಗಕ್ಕೆ ಸಂಜೆ ವರೆಗೆ ಬಿರು ಬಿಸಿಲಿನ ತಾಪಮಾನ ಮುಂದುವರಿಯಲಿದ್ದು, ನಂತರ ತಂಪು ವಾತಾವರಣ ಕಂಡು ಬರಬಹುದು. ಕಳೆದ ಎರಡು ದಿನಗಳಿಂದ ರಾತ್ರಿ ಕಂಡು ಬರುತ್ತಿರುವ ತೇವಭರಿತ ಗಾಳಿಯು ಮುಂದಿನ ಮೂರು ದಿನ ಮುಂದುವರಿಯಲಿದೆ ಎಂದು ಹವಾಮಾನ ತಜ್ಞರು ಅಂದಾಜಿಸಿದ್ದಾರೆ.

ಮಾರ್ಚ್‌ 23ರಂದು ಬೆಂಗಳೂರಿಗೆ ಒಂದು ದಿನ ಸಾಧಾರಣದಿಂದ ಉತ್ತಮ ಮಳೆ ಮುನ್ಸೂಚನೆ ಇದೆ. ಇದಕ್ಕೆ ಪೂರಕವಾಗಿ ಶುಕ್ರವಾರ ಮಳೆ ಸುರಿಯಬಹುದು ಎನ್ನಲಾಗುತ್ತಿದೆ. ಬಂಗಾಳಕೊಲ್ಲಿ ಹಾಗೂ ಅರಬ್ಬಿ ಸಮುದ್ರ ಮಟ್ಟದಲ್ಲಿ ಆಗಿರುವ ಬದಲಾವಣೆ ಕಾರಣದಿಂದಾಗಿ ದಿಢೀರ್ ಮಳೆ ಸಕ್ರಿಯವಾಗಿದೆ.

ಬೆಂಗಳೂರಿನ ಗರಿಷ್ಠ ತಾಪಮಾನ 34-35 ಡಿಗ್ರಿ ಸೆಲ್ಸಿಯಸ್, ಕನಿಷ್ಠ ತಾಪಮಾನ 21 ಡಿಗ್ರಿ ಸೆಲ್ಸಿಯಸ್ ದಾಖಲಾಗುತ್ತಿದೆ. ಮುಂದಿನ ಎರಡು ದಿನ ಈ ತಾಪಮಾನದಲ್ಲಿ ತುಸು ಬದಲಾವಣೆ ಆಗಬಹುದು. ಸಂಜೆ ನಂತರ ಮೋಡ ಕವಿದ ಮಬ್ಬು ವಾತವರಣ ಸೃಷ್ಟಿಯಾಗುವ ಸಾಧ್ಯತ್ಯೆ ಇದೆ.

ಉತ್ತರ ಕರ್ನಾಟಕಕ್ಕೂ ಮಳೆ ಎಚ್ಚರಿಕೆ

ಬೆಂಗಳೂರು ಮಾತ್ರವಲ್ಲದೇ ಈವರೆಗೆ ಮೈಸೂರು, ಕೊಡಗು, ಚಾಮರಾಜನಗರಕ್ಕೆ ಸಿಮೀತವಾಗಿದ್ದ ಮಳೆ ಇದೀಗ ರಾಜ್ಯದ ಉದ್ದಗಲಕ್ಕೂ ವಿಸ್ತರಣೆ ಆಗಿದೆ. ಒಣಹವೆಯಿಂದ ತತ್ತರಿಸಿದ ಉತ್ತರ ಕರ್ನಾಟಕದ ಬಹುತೇಕ ಜಿಲ್ಲೆಗಳಲ್ಲಿ ಮುಂದಿನ ಐದಾರು ದಿನಗಳ ಕಾಲ ವ್ಯಾಪಕ ಮಳೆ ಆಗುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ (IMD) ಶುಕ್ರವಾರ ಮುನ್ಸೂಚನೆ ನೀಡಿದೆ.

ಬೆಂಗೂರಿನಲ್ಲಿ ಶನಿವಾರ ಮತ್ತು ಭಾನುವಾರ ಸಂಜೆ ಹೊತ್ತಿಗೆ ಮುಂಗಾರು ಮತ್ತಷ್ಟು ಚುರುಕಾಗುವ ಸಾಧ್ಯತೆ ಇದೆ. ಅಂದು ಗುಡುಗ ಸಹಿತ ವ್ಯಾಪಕ ಮಳೆ ಮುನ್ಸೂಚನೆ ಇದೆ. ನಗರದ ಕೆಲವೆಡೆ ಹಗುರ ಮಳೆ ಸುರಿದರೆ, ಇನ್ನೂ ಕೆಲವೆಡೆ ಜೋರು ಮಳೆಆಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+