ಬೆಂಗಳೂರಿನ ಪ್ರೆಸ್‌ಕ್ಲಬ್ ಅಧ್ಯಕ್ಷರಾಗಿ ಶ್ರೀಧರ್ ಅವಿರೋಧ ಆಯ್ಕೆ
ಬೆಂಗಳೂರು, ಆಗಸ್ಟ್ 10: ಬೆಂಗಳೂರಿನ ಪ್ರೆಸ್‌ಕ್ಲಬ್ ನ ವಿವಿಧ ಹುದ್ದೆಗಳಿಗೆ ಭಾನುವಾರ ನಡೆದ 2015-16ನೆ ಸಾಲಿನ ಚುನಾವಣೆಯಲ್ಲಿ ಅಧ್ಯಕ್ಷರಾಗಿ ಶ್ರೀಧರ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಶಿವಕುಮಾರ್ ಬೆಳ್ಳಿತಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಎಸ್.ಶಿವಪ್ರಕಾಶ್ ಹಾಗೂ ಕಾರ್ಯದರ್ಶಿಯಾಗಿ ಬಿ.ಎನ್.ರಮೇಶ್ ಆಯ್ಕೆಯಾಗಿದ್ದಾರೆ.
ಸದಸ್ಯರ ಸಾಮಾನ್ಯಸಭೆ ಹಾಗೂ ಆಡಳಿತಮಂಡಳಿಗೆ ಚುನಾವಣೆಗಳು ಕಬ್ಬನ್ ಪಾರ್ಕಿನಲ್ಲಿರುವ ಕ್ಲಬ್ಬಿನ ಆವರಣದಲ್ಲಿ ಭಾನುವಾರ ನಡೆಯಿತು. ಅಧ್ಯಕ್ಷ, ಉಪಾಧ್ಯಕ್ಷ, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ, ಖಚಾಂಜಿ ಹಾಗೂ ಆಡಳಿತ ಮಂಡಳಿಗೆ ಸದಸ್ಯರನ್ನು ಆಯ್ಕೆ ಮಾಡಲಾಯಿತು. ನೂತನ ಪದಾಧಿಕಾರಿಗಳ ಹೆಸರುಗಳು ಕೆಳಕಂಡಂತಿದೆ.
ಖಜಾಂಚಿಯಾಗಿ ಮೋಹನ್ ಕುಮಾರ್ (ಅವಿರೋಧ) ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ಮುಮ್ತಾಝ್ ಅಲೀಮ್, ಡಿ.ಆಲ್‌ಫ್ರೆಡ್ ಟೆನ್ನಿಸನ್, ಶ್ರೀಕಾಂತ್ ಹುಣಸವಾಡಿ, ಶರಣಬಸಪ್ಪ, ಜಿ.ಮೋಹನ್ ರಾವ್ ಸಾವಂತ್, ಜಿ.ಎಸ್. ನಾರಾಯಣರಾವ್(ಜೆಸುನಾ) ಆಯ್ಕೆಗೊಂಡಿದ್ದಾರೆ ಎಂದು ಪ್ರೆಸ್‌ಕ್ಲಬ್ ಪ್ರಕಟಿಸಿದೆ.

ಅಧ್ಯಕ್ಷ : ಶ್ರೀಧರ್ ಆರ್
ಉಪಾಧ್ಯಕ್ಷ : ಶಿವಕುಮಾರ್ ಬೆಳ್ಳಿತಟ್ಟೆ (161 ಮತಗಳು)
ಪ್ರಧಾನ ಕಾರ್ಯದರ್ಶಿ: ಎಸ್.ಶಿವಪ್ರಕಾಶ್ ಲಾಟರಿ ಮುಖಾಂತರ ಗೆಲುವು 214 ಮತಗಳು ಅಶೋಕ್ ಯಾದವ್ ಜೊತೆ.
ಕಾರ್ಯದರ್ಶಿ: ಬಿ.ಎನ್.ರಮೇಶ್ (251 ಮತಗಳು)
ಖಜಾಂಚಿ: ಮೋಹನ್ ಕುಮಾರ್ ಬಿ.ಎನ್ (ಅವಿರೋಧ ಆಯ್ಕೆ)
ಕಾರ್ಯಕಾರಿ ಸಮಿತಿ ಸದಸ್ಯರಾಗಿ ಜಿ.ಮುಮ್ತಾಝ್ ಅಲೀಮ್ (248 ಮತಗಳು), ಡಿ.ಆಲ್‌ಫ್ರೆಡ್ ಟೆನ್ನಿಸನ್ (222), ಶ್ರೀಕಾಂತ್ ಹುಣಸವಾಡಿ (221), ಶರಣಬಸಪ್ಪ (202), ಜಿ.ಮೋಹನ್ ರಾವ್ ಸಾವಂತ್ (195), ಜಿ.ಎಸ್. ನಾರಾಯಣರಾವ್ (ಜೆಸುನಾ) (185)
ರಿಟರ್ನಿಂಗ್ ಆಫೀಸರ್: ಬೃಂಗೇಶ್ ಎನ್.
(ಒನ್ ಇಂಡಿಯಾ ಸುದ್ದಿ)












Click it and Unblock the Notifications