ಒಂಟಿಯಾದ ಅಶೋಕ, ತೇಜಸ್ವಿ ಸೂರ್ಯ ಎಲ್ಲಿದೀರಾ? ಎಂದ ಕಾಂಗ್ರೆಸ್‌ ನಾಯಕಿ!

ಬೆಂಗಳೂರು, ಜನವರಿ 14: ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದಂತೆ ಬಿಜೆಪಿ ನಾಯಕರು ಭಾನುವಾರ ದೇವಾಲಯದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು. ಆದರೆ ಪ್ರತಿಪಕ್ಷ ನಾಯಕ ಆರ್. ಅಶೋಕ ನಡೆಸಿದ ಸ್ವಚ್ಛತಾ ಕಾರ್ಯದ ಕುರಿತು ಕಾಂಗ್ರೆಸ್‌ ವ್ಯಂಗ್ಯವಾಡಿದೆ.

ಆರ್. ಅಶೋಕ ಕರ್ನಾಟಕದ ಪ್ರತಿಪಕ್ಷ ನಾಯಕ. ಬೆಂಗಳೂರಿನ ಪದ್ಮನಾಭನಗರ ಕ್ಷೇತ್ರದ ಬಿಜೆಪಿ ಶಾಸಕ. ಆದರೆ ಅವರು ಜಯನಗರ 4ನೇ ಹಂತದ ಶ್ರೀ ವಿನಾಯಕ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಿದರು.

r-ashok-news

ಇದನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಯಕಿ, ಜಯನಗರ ಕ್ಷೇತ್ರದ ಮಾಜಿ ಶಾಸಕ ಸೌಮ್ಯಾ ರೆಡ್ಡಿ ಟ್ವೀಟ್ ಮಾಡಿದ್ದಾರೆ. 'ವಿರೋಧ ಪಕ್ಷದ ನಾಯಕರಾಗಿದ್ದರೂ ಸಹ ಸಂಸದರ ಬೆಂಬಲವಿಲ್ಲದೆ ನೀವು ಒಬ್ಬೊಂಟಿ ಎಂಬುದು ಇದರಿಂದಲೇ ತಿಳಿಯುತ್ತದೆ!!' ಎಂದು ಕುಟುಕಿದ್ದಾರೆ.

ಸೌಮ್ಯಾ ರೆಡ್ಡಿ ಟ್ವೀಟ್‌; ಸೌಮ್ಯಾ ರೆಡ್ಡಿ ಟ್ವೀಟ್ ಮಾಡಿ, 'ಮಾನ್ಯ ಶ್ರೀ ಆರ್. ಅಶೋಕ ಸರ್, ಇದು ಫೋಟೋಶೂಟ್‌ಗೆ ಸೀಮಿತನ ಅಥವಾ ಪ್ರತಿದಿನ ಇದೇ ರೀತಿ ಎಲ್ಲಾ ಕಡೆ ಸ್ವಚ್ಛತಾ ಕಾರ್ಯ ಕೈಗೊಳ್ಳುವಿರಾ?' ಎಂದು ಕೇಳಿದ್ದಾರೆ.

'ನಿಮ್ಮ ಸ್ವಂತ ಕ್ಷೇತ್ರದಲ್ಲಿ ಎಲ್ಲಾ ಮಾಜಿ ಪಾಲಿಕೆ ಸದಸ್ಯರು ಹಾಗೂ ಮುಖಂಡರು ನಿಮ್ಮ ದುರಾಡಳಿತದಿಂದ ಬೇಸತ್ತು ಕಾಂಗ್ರೆಸ್ ಸೇರಿಬಿಟ್ಟಿದ್ದಾರೆ. ಇಲ್ಲಿ ನೀವು ನೋಡಿದರೆ ನಿಮ್ಮ ಕ್ಷೇತ್ರ ಬಿಟ್ಟು ಪಕ್ಕದ ಜಯನಗರಕ್ಕೆ ಬಂದು ಸಂಸದರಿಲ್ಲದೇ, ಪಾಪ ಒಬ್ಬರೇ ಸ್ವಚ್ಛತೆ ಮಾಡುತ್ತಿದ್ದೀರಾ. ನಮ್ಮನ್ನು ಕರೆದಿದ್ದರೆ ನಾವಾದರೂ ಬರುತ್ತಿದ್ವಿ!' ಎಂದು ಹೇಳಿದ್ದಾರೆ.

'ವಿರೋಧ ಪಕ್ಷದ ನಾಯಕರಾಗಿದ್ದರೂ ಸಹ ಸಂಸದರ ಬೆಂಬಲವಿಲ್ಲದೆ ನೀವು ಒಬ್ಬೊಂಟಿ ಎಂಬುದು ಇದರಿಂದಲೇ ತಿಳಿಯುತ್ತದೆ!! ಸಂಸದರಾದ ಶ್ರೀ ತೇಜಸ್ವಿ ಸೂರ್ಯ ರವರೇ .. ಎಲ್ಲಿದೀರಾ?!' ಎಂದು ಸೌಮ್ಯಾ ರೆಡ್ಡಿ ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯರನ್ನು ಪ್ರಶ್ನೆ ಮಾಡಿದ್ದಾರೆ.

ಆರ್. ಅಶೋಕ ದೇವಾಲಯ ಸ್ವಚ್ಛ ಮಾಡಿರುವ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿದ್ದಾರೆ. 'ರಾಮಮಂದಿರದ ಭವ್ಯ ಸ್ವಾಗತಕ್ಕಾಗಿ ಸ್ವಚ್ಛತೀರ್ಥ ಅಭಿಯಾನ ಅಯೋಧ್ಯೆಯಲ್ಲಿ ಐತಿಹಾಸಿಕ ಶ್ರೀ ರಾಮನ ಪ್ರಾಣಪ್ರತಿಷ್ಠೆ ನಡೆಯಲಿರುವ ಹಿನ್ನೆಲೆಯಲ್ಲಿ ದೇಶದಾದ್ಯಂತ ಎಲ್ಲಾ ದೇಗುಲ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಪ್ರಧಾನಿ ಶ್ರೀ Narendra Modi ಜೀ ಅವರ ಕರೆ ಮೇರೆಗೆ ಜಯನಗರ 4ನೇ ಹಂತದ ಶ್ರೀ ವಿನಾಯಕ ದೇವಾಲಯದ ಆವರಣವನ್ನು ಸ್ವಚ್ಛಗೊಳಿಸಲಾಯಿತು. ಈ ಸಂದರ್ಭದಲ್ಲಿ ಸಂಸದ ಮುನಿಸ್ವಾಮಿ, ಶಾಸಕ ಸಿ. ಕೆ. ರಾಮಮೂರ್ತಿ, ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು' ಎಂದು ಹೇಳಿದ್ದಾರೆ.

ಜಯನಗರದಲ್ಲಿ ಪ್ರತಿಪಕ್ಷ ನಾಯಕರು ಕೈಗೊಂಡ ದೇವಾಲಯ ಸ್ವಚ್ಛತಾ ಕಾರ್ಯದಲ್ಲಿ ಜಯನಗರ ಕ್ಷೇತ್ರದ ಬಿಜೆಪಿ ಶಾಸಕ ಸಿ. ಕೆ. ರಾಮಮೂರ್ತಿ, ಕೋಲಾರದ ಬಿಜೆಪಿ ಸಂಸದ ಮುನಿಸ್ವಾಮಿ ಪಾಲ್ಗೊಂಡಿದ್ದರು. ಆದರೆ, ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಗೈರು ಹಾಜರಿ ಕಾಂಗ್ರೆಸ್‌ ನಾಯಕರ ಗಮನ ಸೆಳೆದಿದೆ.

ಜನವರಿ 22ಕ್ಕೆ ಮೊದಲು ದೇವಾಲಯದಲ್ಲಿ ಸ್ವಚ್ಛತಾ ಅಭಿಯಾನವನ್ನು ನಡೆಸುವಂತೆ ಹಾಗೂ ದೇಶಾದ್ಯಂತ ದೇವಾಲಯಗಳನ್ನು ಶುದ್ಧೀಕರಿಸುವಂತೆ ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ. ತಾವು ನೀಡಿದ ಕರೆಯಂತೆ ನರೇಂದ್ರ ಮೋದಿ ನಾಸಿಕ್‌ನಲ್ಲಿರುವ ಶ್ರೀ ಕಲಾರಾಮ್ ದೇವಸ್ಥಾನದಲ್ಲಿ ಸ್ವಚ್ಛತಾ ಕಾರ್ಯವನ್ನು ನಡೆಸಿದರು.

ಬಳಿಕ ದೇವರ ದರ್ಶನ ಮತ್ತು ವಿಶೇಷ ಪೂಜೆಯಲ್ಲಿ ಅವರು ಶುಕ್ರವಾರ ಪಾಲ್ಗೊಂಡರು. ಶ್ರೀ ರಾಮ ಮಂದಿರದ ಪ್ರಾಣ ಪ್ರತಿಷ್ಠಾಪನಾ ಸಮಾರಂಭಕ್ಕೂ ಮುನ್ನ ದೇಶದ ಎಲ್ಲಾ ದೇವಾಲಯಗಳು ಮತ್ತು ಯಾತ್ರಾ ಸ್ಥಳಗಳಲ್ಲಿ ಸ್ವಚ್ಛತಾ ಅಭಿಯಾನ ನಡೆಸಲು ಮೋದಿ ಕರೆ ನೀಡಿದ್ದಾರೆ. ಜನವರಿ 14 ರಿಂದ 22ರ ತನಕ ಈ ಅಭಿಯಾನವನ್ನು ನಡೆಸಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+