"ಚಿತ್ತಾಪುರ ರಿಪಬ್ಲಿಕ್‌ನ "ರಜಾಕರಿಗೆ' ಕೋರ್ಟ್ ಚಾಟಿ! ನವೆಂಬರ್ 2ರ RSS ಕಾರ್ಯಕ್ರಮಕ್ಕೆ ಅಸ್ತು''
ಬೆಂಗಳೂರು, ಅಕ್ಟೋಬರ್ 19: ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್ 2ರಂದು ಆಯೋಜಿಸಿರುವ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ಅನುಮತಿ ಕೋರಿದ್ದನ್ನು ನಿರಾಕರಿಸಲಾಗಿದೆ. ಪಥಸಂಚಲನಕ್ಕೆ ತಹಶೀಲ್ದಾರ್ ನಾಗಯ್ಯ ಹಿರೇಮಠ ಅವರು ಅನುಮತಿ ನಿರಾಕರಿಸಿದ್ದರು. ಈ ವಿಚಾರ ಕೋರ್ಟ್ ಮೆಟ್ಟಿಲೇರುತ್ತಿದ್ದಂತೆ ಆರ್‌ಎಸ್‌ಎಸ್ ಕಾರ್ಯಕ್ರಮಕ್ಕೆ ಅನುಮತಿ ನೀಡಿದೆ. ಇದನ್ನು "ಚಿತ್ತಾಪುರ ರಿಪಬ್ಲಿಕ್‌ನ "ರಜಾಕರಿಗೆ' ಕೋರ್ಟ್ ಚಾಟಿ' ಎಂದು ವಿಪಕ್ಷ ನಾಯಕರು ಬಣ್ಣಿಸಿದ್ದಾರೆ.
ಚಿತ್ತಾಪುರದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನಕ್ಕೆ ವಿಧಿಸಿದ್ದ ನಿಷೇಧವನ್ನು ಮಾನ್ಯ ಹೈಕೋರ್ಟ್ ರದ್ದು ಮಾಡಿ, ನವೆಂಬರ್ 2ರಂದು ಪಥಸಂಚಲನ ನಡೆಸಲು ಅನುಮತಿ ನೀಡಿದೆ ಎಂದು ವಿಪಕ್ಷ ನಾಯಕ ಆರ್.ಅಶೋಕ ಅವರು ಎಕ್ಸ್ ಪೋಸ್ಟ್ ಮಾಡಿದ್ದಾರೆ.

ಜನರು ಮಾತಬಿಕ್ಷೆ ನೀಡಿ ಗೆಲ್ಲಿಸಿಸುವ ಕ್ಷೇತ್ರವನ್ನು ತಮ್ಮದೇ ರಿಪಬ್ಲಿಕ್ ಎಂದು ಭಾವಿಸಿಕೊಂಡು, ದೇಶಭಕ್ತರ ಪಥಸಂಚಲನವನ್ನು ತಡೆಯಲು ಯತ್ನಿಸಿದ ಚಿತ್ತಾಪುರದ 'ರಜಾಕರು' ಇಂದು ನ್ಯಾಯದ ಮುಂದೆ ತಲೆಬಾಗಬೇಕಾದ ಪರಿಸ್ಥಿತಿ ಬಂದಿದೆ ಎಂದು ರಾಜ್ಯ ಸರ್ಕಾರಕ್ಕೆ ಹಾಗೂ ಸಚಿವ ಪ್ರಿಯಾಂಕ್ ಖರ್ಗೆ ಅವರಿಗೆ ಆದ ಹಿನ್ನಡೆ ಆಗಿದ್ದನ್ನು ಅವರು ಲೇವಡಿ ಮಾಡಿದರು.
ದೇಶಭಕ್ತಿ, ಶಿಸ್ತು ಮತ್ತು ಸೇವೆಯ ಪ್ರತೀಕವಾದ ರಾಷ್ಟ್ರೀಯ ಸ್ವಯಂಸೇವಕ ಸಂಘದ (RSS) ಪಥಸಂಚಲನವನ್ನು ತಡೆಯಲು ನಡೆದ ರಾಜಕೀಯ ನಾಟಕ ಈಗ ಸಂಪೂರ್ಣವಾಗಿ ಬಯಲಾಗಿದೆ. ಸತ್ಯವನ್ನು ತಾತ್ಕಾಲಿಕವಾಗಿ ತಡೆಯಬಹುದು, ಆದರೆ ಶಾಶ್ವತವಾಗಿ ಸೋಲಿಸಲು ಸಾಧ್ಯವಿಲ್ಲ. ಹೈಕೋರ್ಟ್ ತೀರ್ಪು ಇದರ ಜೀವಂತ ಸಾಕ್ಷಿ! ಎಂದು ಅವರು ಪಥಸಂಚಲನ ಕಾರ್ಯಕ್ರಮಕ್ಕೆ ಅವಕಾಶ ನೀಡದೇ ತಡೆ ನೀಡಿದ್ದ ಸರ್ಕಾರಕ್ಕೆ ತಿರುಗೇಟು ನೀಡಿದರು.
ಇದೇ ವಿಚಾರವಾಗಿ ಬಿ.ವೈ.ವಿಜಯೇಂದ್ರ ಅವರು ಸಹ ಆಕ್ರೋಶ ಹೊರ ಹಾಕಿದ್ದಾರೆ. ಸಂವಿಧಾನದ ಹೆಸರಿನಲ್ಲಿ ಸದಾ ಬೊಗಳೆ ಬಿಡುವ ಕಾಂಗ್ರೆಸ್ ನಾಯಕರು ಮತ್ತು ಸರ್ಕಾರ ಸಾಂವಿಧಾನಿಕ ಹಕ್ಕು ಕಸಿದುಕೊಂಡಿದ್ದಾರೆ. ಅಗತ್ಯ ದಾಖಲಾತಿ ನೀಡಿದರೂ ಸಹಿತ ಅನುಮತಿ ನೀಡದೇ ದುರುದ್ದೇಶಪೂರ್ವಕವಾಗಿ ತಡೆಯಲು ಮುಂದಾಗಿದ್ದ ಸರ್ಕಾರಕ್ಕೆ ಕೋರ್ಟ್ ಆದೇಶದಿಂದ ಮುಖಭಂಗವಾಗಿದೆ.












Click it and Unblock the Notifications