ಪುಲ್ವಾಮ ದಾಳಿ ಬೆಂಬಲಿಸಿದ್ದ ಮೂವರು ನರ್ಸಿಂಗ್ ವಿದ್ಯಾರ್ಥಿಗಳ ಬಂಧನ
ಬೆಂಗಳೂರು, ಫೆಬ್ರವರಿ 17 : ಪುಲ್ವಾಮದ ಅವಂತಿಪುರ್‌ನಲ್ಲಿ ನಡೆದ ಉಗ್ರರ ದಾಳಿ ಕುರಿತು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೂವರು ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರ ಮೂಲದ ಇವರು ಬೆಂಗಳೂರಿನಲ್ಲಿ ಓದುತ್ತಿದ್ದರು.
ವಾಕರ್ ಅಹಮದ್, ಗೌರ್ ಮುಸ್ತಾಕ್ ಮತ್ತು ಝಾಕೀರ್ ಮಕ್ಬಾಲ್ ಬಂಧಿತ ವಿದ್ಯಾರ್ಥಿಗಳು. ಪ್ರಧಾನಮಂತ್ರಿ ಸ್ಕಾಲರ್ ಶಿಪ್ ಯೋಜನೆಯ ಸಹಾಯ ಪಡೆದು ಮೂವರು ಆನೇಕಲ್ ಸಮೀಪದ ಕಾಲೇಜಿನಲ್ಲಿ ನರ್ಸಿಂಗ್ ಓದುತ್ತಿದ್ದರು.
ಪುಲ್ವಮದಲ್ಲಿ ನಡೆದ ಉಗ್ರರ ದಾಳಿ ಖಂಡಿಸಿ ಕಾಲೇಜಿನ ಸಹಪಾಠಿ ಕೌಶಿಕ್ ದೆಬನಾಥ್ ಫೇಸ್‌ಬುಕ್ ಪೋಸ್ಟ್ ಹಾಕಿದ್ದ. ಆಗ ಈ ಮೂವರು ಆ ರೀತಿ ಮಾತನಾಡಬಾರದು ಎಂದು ಕೌಶಿಕ್‌ಗೆ ಸಾಮಾಜಿಕ ಜಾಲತಾಣದಲ್ಲಿಯೇ ಬೆದರಿಕೆ ಹಾಕಿದ್ದರು.

ಪಾಕಿಸ್ತಾನ ಮತ್ತು ಉಗ್ರರ ಪರವಾಗಿ ಮೂವರು ವಿದ್ಯಾರ್ಥಿಗಳು ಮಾತನಾಡಿದ್ದರು. ಕೌಶಿಕ್ ಮೇಲೆ ಹಲ್ಲೆಯನ್ನು ಮಾಡಿದ್ದರು. ತಮ್ಮ ತವರು ರಾಜ್ಯದಲ್ಲಿ ಆದ ಘಟನೆಯನ್ನು ಖಂಡಿಸುವುದು ಬಿಟ್ಟು ಉಗ್ರರನ್ನು ಸಮರ್ಥಿಸಿಕೊಂಡಿದ್ದರು.












Click it and Unblock the Notifications