ಧೈರ್ಯ‌ವಿದ್ದರೆ ತಂದೆಯ ಸಮಾಧಿ ಮೇಲೆ ಮೂತ್ರ ಮಾಡಲಿ

ಬೆಂಗಳೂರು, ಜೂ.11: ದೇವರ ಮೂರ್ತಿ‌ ಮೇಲೆ ಮೂತ್ರ ಮಾಡಿದರೇ ಏನೂ ಆಗುವುದಿಲ್ಲ ಎಂದು ಹೇಳಿದ ಕಲಬುರ್ಗಿ ಅವರು ಧೈರ್ಯ‌ವಿದ್ದರೆ ಅವರ ತಂದೆಯ ಸಮಾಧಿ ಮೇಲೆ ಮೂತ್ರ ಮಾಡಲಿ ಎಂದು ವಿಶ್ವ ಹಿಂದು ಪರಿಷತ್‌ನ ಸಂಘಟನಾ ಕಾರ್ಯದರ್ಶಿ‌ ಗೋಪಾಲ್‌ಜೀ ಸವಾಲು ಎಸೆದಿದ್ದಾರೆ.

ಡಾ.ಯು.ಆರ್‌.ಅನಂತಮೂರ್ತಿ ಬರಹವನ್ನು ಉಲ್ಲೇಖಿಸಿ ಹಿಂದುಗಳ ಭಾವನೆಗಳನ್ನು ಘಾಸಿಗೊಳಿಸುವಂತಹ ಹೇಯ ಹೇಳಿಕೆಯನ್ನು ನೀಡಿದ ಎಂ.ಎಂ.ಕಲಬುರ್ಗಿ ಅವರನ್ನು ಕೂಡಲೇ ಬಂಧಿಸಿ ಗಡೀಪಾರು ಮಾಡಬೇಕೆಂದು ಹಿಂದುಪರ ಸಂಘಟನೆಗಳು ಆಯೋಜಿಸಿದ ಪ್ರತಿಭಟನೆಯಲ್ಲಿ ಅವರು ಮಾತನಾಡಿದರು.[ದೇವರ ಬಗ್ಗೆ ಕಲಬುರ್ಗಿ‌ ಹೇಳಿದ್ದೇನು?]

ನಗರದ ಟೌನ್‌ಹಾಲ್‌ ಮುಂಭಾಗದಲ್ಲಿ ಬಜರಂಗ ದಳ, ವಿಶ್ವ ಹಿಂದು ಪರಿಷತ್‌ ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯ‌ಕರ್ತರು ಪಿಂಡ ಪ್ರಧಾನ ಮಾಡಿ ಎಂ.ಎಂ.ಕಲಬುರ್ಗಿ ಮತ್ತು ಅನಂತ ಮೂರ್ತಿ‌ಯವರ ಪ್ರತಿಕೃತಿಯನ್ನು ದಹಿಸುವ ಮೂಲಕ ವಿಶಿಷ್ಟವಾಗಿ ಪ್ರತಿಭಟನೆ ನಡೆಸಿದರು.

ಬಜರಂಗದಳದ ರಾಜ್ಯ ಸಂಚಾಲಕ ಸೂರ್ಯ‌ನಾರಾಯಣ ಮಾತನಾಡಿ, ಹಿಂದು ಧರ್ಮದಲ್ಲಿ ಹುಟ್ಟಿ ವಿದೇಶಿ ಚಿಂತನೆಗಳನ್ನು ಪ್ರಚಾರ ಮಾಡುತ್ತಿರುವ ಈ ಲದ್ದಿಜೀವಿಗಳನ್ನು ಕೂಡಲೇ ಗಡೀಪಾರು ಮಾಡಬೇಕು. ಹಿಂದು ಧರ್ಮ‌ವನ್ನು ಅವಹೇಳನ ಮಾಡಿದರೇ ಹಿಂದುಗಳಿಗೆ ಏನೂ ಆಗುವುದಿಲ್ಲ ಎಂದು ಸಾಹಿತಿಗಳು ಭಾವಿಸಿದ್ದಾರೆ. ಆದರೆ ಇನ್ನು ಮುಂದೆ ಈ ರೀತಿಯ ಹೇಳಿಕೆಗಳನ್ನು ಹಿಂದು ಸಮಾಜ ಸಹಿಸುವುದಿಲ್ಲ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ದುರುಪಯೋಗ ಮಾಡುತ್ತಿರುವ ಈ ಸಾಹಿತಿಗಳ ಮೇಲೆ ಕಾನೂನು ಕ್ರಮಗಳನ್ನು ಕೈಗೊಳ್ಳಬೇಕೆಂದು ರಾಜ್ಯ ಸರ್ಕಾರವನ್ನು ಅವರು ಒತ್ತಾಯಿಸಿದರು.

ಪ್ರತಿಭಟನೆಯ ಮತ್ತಷ್ಟು ಚಿತ್ರಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ: ಗ್ಯಾಲರಿ

 ದೇವರು ತಕ್ಕ ಶಿಕ್ಷೆ ನೀಡಿದ್ದಾನೆ

ದೇವರು ತಕ್ಕ ಶಿಕ್ಷೆ ನೀಡಿದ್ದಾನೆ

ದೇವರ ಮೂರ್ತಿ‌ ಮೇಲೆ ಮೂತ್ರ ಮಾಡಿದರೇ ಏನೂ ಆಗುವುದಿಲ್ಲ ಎಂದು ಹೇಳಿದ ಕಲ್ಬುರ್ಗಿ‌ಯವರು ಧೈರ್ಯ‌ವಿದ್ದರೆ ಅವರ ಅಪ್ಪನ ಸಮಾದಿ ಮೇಲೆ ಮೂತ್ರ ಮಾಡಲಿ. ಅನಂತ ಮೂರ್ತಿ‌ಯವರಿಗೆ ಪ್ರತಿದಿನ ಡಯಾಲಿಸಿಸ್‌ ನಡೆಯುತ್ತಿದೆ. ಹಿಂದೆ ದೇವರ ಮೂರ್ತಿ‌ ಮೇಲೆ ಮೂತ್ರ ಮಾಡಿದ್ದಕ್ಕೆ ಇಂದು ಅವರಿಗೆ ದೇವರು ತಕ್ಕ ಶಿಕ್ಷೆ ನೀಡಿದ್ದಾನೆ.
ಗೋಪಾಲ್‌ಜೀ, ಸಂಘಟನಾ ಕಾರ್ಯದರ್ಶಿ‌ ವಿಶ್ವಹಿಂದು ಪರಿಷತ್‌, ಆಂಧ್ರ ಕರ್ನಾಟಕ

ವಿಚಾರ ವಾದಿಗಳಲ್ಲ ವಿಕೃತವಾದಿಗಳು

ವಿಚಾರ ವಾದಿಗಳಲ್ಲ ವಿಕೃತವಾದಿಗಳು

ಸಿದ್ದರಾಮಯ್ಯ ಸರ್ಕಾರ ಬಂದ ಮೇಲೆ ಈ ಬುದ್ದಿಜೀವಿಗಳಿಗೆ ಜೀವ ಬಂದಿದೆ. ವಿಚಾರ ವಾದಿಗಳು ಎಂದು ಇವರನ್ನು ಗೌರವಿಸುವವರ ಸಂಖ್ಯೆ ಹೆಚ್ಚಾಗಿದೆ. ಇವರು ವಿಚಾರ ವಾದಿಗಳಲ್ಲ ವಿಕೃತವಾದಿಗಳು. ಈ ವಿಕೃತವಾದಿಗಳು ಹಿಂದು ಸಮಾಜದಲ್ಲೇ ಹುಟ್ಟಿರುವುದೇ ದೊಡ್ಡ ದುರಂತ
ಸೂರ್ಯ‌ನಾರಾಯಣ, ಬಜರಂಗದಳದ ರಾಜ್ಯ ಸಂಚಾಲಕ

 ರಾಜ್ಯ ಸರ್ಕಾರದ ಪತನ ಆರಂಭ

ರಾಜ್ಯ ಸರ್ಕಾರದ ಪತನ ಆರಂಭ

"ಯುಪಿಎ ಸರ್ಕಾರ ಹಿಂದು ವಿರೋಧಿ ನೀತಿಯನ್ನು ಅನುಸರಿಸಿದ್ದಕ್ಕೆ ದೇಶದ ಜನತೆ ತಕ್ಕ ಪಾಠವನ್ನು ನೀಡಿದ್ದಾರೆ. ರಾಜ್ಯದಲ್ಲೂ ಸಿದ್ದರಾಮಯ್ಯ ಸರ್ಕಾರ ಯುಪಿಎ ನೀತಿಯನ್ನೇ ಮುಂದುವರೆಸುತ್ತಿದೆ. ದೇಶದಲ್ಲಿ ಯುಪಿಎ ಹೇಗೆ ಪತನವಾಯಿತೋ ಅದೇ ರೀತಿಯಾಗಿ ರಾಜ್ಯದಲ್ಲೂ ಸಿದ್ದರಾಮಯ್ಯ ಸರ್ಕಾರ ಪತನವಾಗುವುದರಲ್ಲಿ ಯಾವುದೇ ಅನುಮಾನ ಬೇಡ"
ಉಲ್ಲಾಸ್‌, ಹಿಂದು ಜಾಗರಣ ವೇದಿಕೆ ಸಂಚಾಲಕ

 ಪಿಂಡ ಪ್ರಧಾನ ಮಾಡಿ ಪ್ರತಿಭಟನೆ

ಪಿಂಡ ಪ್ರಧಾನ ಮಾಡಿ ಪ್ರತಿಭಟನೆ

ಪಿಂಡ ಪ್ರಧಾನ ಮಾಡಿ ಎಂ.ಎಂ.ಕಲಬುರ್ಗಿ ಮತ್ತು ಅನಂತ ಮೂರ್ತಿ‌ಯವರ ಪ್ರತಿಕೃತಿಯನ್ನು ದಹಿಸುವ ಮೂಲಕ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

 ಹಿಂದು ಸಂಘಟನೆಗಳಿಂದ ಪ್ರತಿಭಟನೆ

ಹಿಂದು ಸಂಘಟನೆಗಳಿಂದ ಪ್ರತಿಭಟನೆ

ನಗರದ ಟೌನ್‌ಹಾಲ್‌ ಮುಂಭಾಗದಲ್ಲಿ ಬಜರಂಗ ದಳ, ವಿಶ್ವಹಿಂದು ಪರಿಷತ್‌ ಮತ್ತು ಹಿಂದು ಜಾಗರಣ ವೇದಿಕೆಯ ಕಾರ್ಯಕರ್ತರು ಈ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+