ಕೆಐಎಎಲ್ ಗೆ ಸಂಪರ್ಕ ಕಲ್ಪಿಸುವ ಮೆಟ್ರೋ ಯೋಜನೆಗೆ ಏರಾ ವಿರೋಧ

ಬೆಂಗಳೂರು, ಫೆಬ್ರವರಿ 20 : ಬೆಂಗಳೂರು ನಗರದಿಂದ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಸಂಪರ್ಕ ಕಲ್ಪಿಸುವ ಯೋಜನೆಗೆ ತಾಂತ್ರಿಕ ಕಾರಣ ಎದುರಾಗಿದ್ದು ಏರ್ ಪೋರ್ಟ್ ಎಕನಾಮಿಕ್ ರೆಗ್ಯುಲೇಟರಿ ಅಥಾರಿಟಿ ಆಫ್ ಇಂಡಿಯಾ ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದೆ.

ಬೆಂಗಳೂರಿಗೆ ಸಂಚರಿಸುವ ವಿಮಾನ ಪ್ರಯಾಣಿಕರಿಂದ ಯೋಜನೆ ಆರಂಭವಾಗುವ ಮೊದಲೇ ಬಳಕೆದಾರರ ಶುಲ್ಕವನ್ನು ವಸೂಲಿ ಮಾಡುವ ಬಿಐಎಎಲ್ ನಿರ್ಧಾರಕ್ಕೆ ಎರಡ ವಿರೋಧ ವ್ಯಕ್ತಪಡಿಸಿದೆ. ಈ ಹಿನ್ನೆಲೆಯಲ್ಲಿ ಬೆಂಗಳೂರಿನಿಂದ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಂಪರ್ಕ ಕಲ್ಪಿಸುವ ಯೋಜನೆಗೆ ತಾಂತ್ರಿಕ ಎದುರಾಗಿದೆ.

ಈ ಕುರಿತು ಏರಾ ಅಧಿಕಾರಿಗಳು ಬಿಐಎಎಲ್ ಗೆ ಪ್ರಯಾಣಿಕರ ಮೇಲೆ ಬಳಕೆದಾರರ ಶುಲ್ಕ ಹೇರದಂತೆ ಸ್ಪಷ್ಟ ನಿರ್ದೇಶನ ನೀಡಿದ್ದಾರೆ. ಏರಾ ಮುಖ್ಯಸ್ಥ ಎಸ್. ಮಚೇಂದ್ರನಾಥನ್ ಹೇಳುವಂತೆ ಹೆಚ್ಚುವರಿ ಬಳಕೆದಾರರ ಶುಲ್ಕವನ್ನು ದೇಶದ ಕೆಲವು ಯೋಜನೆಗಳಲ್ಲಿ ಹೇರಲಾಗುತ್ತಿದೆ.

Proposal to levy user development fee to raise fund spiked

ಆದರೆ ವಾಣಿಜ್ಯ ವಹಿವಾಟು ಆರಂಭದ ನಂತರವಷ್ಟೇ ಅಂದರೆ ಯಾವುದೇ ಯೋಜನೆ ಪೂರ್ಣವಾದ ನಂತರ ಆ ಯೋಜನೆಗಳಿಗೆ ಸಂಬಂಧಿಸಿದಂತೆ ವಿಮಾನ ಪ್ರಯಾಣಿಕರಿಂದ ಹೆಚ್ಚುವರಿ ಶುಲ್ಕವನ್ನು ವಸೂಲಿ ಮಾಡಬಹುದು. ಯೋಜನೆ ಆರಂಭಗೊಳ್ಳುವ ಮೊದಲೇ ಈ ರೀತಿಯ ಬಳಕೆದಾರರ ಶುಲ್ಕ ಹೇರಲು ಸಾಧ್ಯವಿಲ್ಲ ಎಂದಿದ್ದಾರೆ.

ಕಳೆದ ಡಿಸೆಂಬರ್ ನಲ್ಲಿ ರಾಜ್ಯ ಸರ್ಕಾರ 29 ಕಿಮೀ ಉದ್ದದ ನಾಗವಾರ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಮಧ್ಯದ ಮಾರ್ಗಕ್ಕೆ ಅನುಮೋದನೆ ನೀಡಿತ್ತು. ಈ ಯೋಜನೆಗಾಗಿ ವಿಮಾನ ಪ್ರಯಾಣಿಕರ ಬಳಕೆದಾರರ ಶುಲ್ಕದಿಂದ ೬೦ ರಿಂದ ೮೦ ಕೋಟಿ ತರೂ ಗಳನ್ನು ಸಂಗ್ರಹಿಸುವ ಗುರಿಯನ್ನು ಹೊಂದಲಾಗಿತ್ತು. ಈ ಯೋಜನೆಗೆ ಒಟ್ಟು ಒಂದು ಸಾವಿರ ಕೋಟಿ ರೂ ವೆಚ್ಚಮಾಡಲಾಗುತ್ತಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+