Property: ದೇಶದ 8 ನಗರದಲ್ಲಿ ಭೂಮಿಗೆ ಬಂಗಾರದ ಬೆಲೆ: ಬೆಂಗಳೂರಿಗೆ ಬಂಪರ್ ಜಾಕ್‌ಪಾಟ್
Property: ಬೆಂಗಳೂರಿನ ಮೂಲಸೌಕರ್ಯಗಳ ಬಗ್ಗೆ ಹೆಚ್ಚು ಚರ್ಚೆ ಆಗುತ್ತಿದೆ. ಇದು ಬೆಂಗಳೂರಿನ ರಿಯಲ್ ಎಸ್ಟೇಟ್ ಹಾಗೂ ಹೂಡಿಕೆಯ ಮೇಲೆ ಪರಿಣಾಮ ಬೀರಬಹುದು ಎಂದು ಅಂದಾಜಿಸಲಾಗಿತ್ತು. ಆದರೆ ಆ ಲೆಕ್ಕಾಚಾರಗಳು ತಲೆಕೆಳಗಾಗಿವೆ. ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬರುವುದು ಮುಂದುವರಿದಿದೆ. ಬೆಂಗಳೂರು ಮಾತ್ರವಲ್ಲದೇ ದೇಶದ 8 ಪ್ರಮುಖ ನಗರ ಪ್ರದೇಶಗಳಲ್ಲೂ ಭೂಮಿ ಬೆಲೆ ಭರ್ಜರಿ ಹೆಚ್ಚಳವಾಗಿದೆ.
2025ನೇ ಸಾಲಿನ ಮೂರನೇ ತ್ರೈಮಾಸಿಕದಲ್ಲಿ ದೇಶದ ಎಂಟು ಪ್ರಮುಖ ನಗರ ಪ್ರದೇಶಗಳಲ್ಲಿ ಆಸ್ತಿ ಬೆಲೆಗಳು ಬಂಪರ್ ಹೆಚ್ಚಳ ಕಂಡಿವೆ. ಇದಕ್ಕೆ ವಿಮೆ ಕಂತು ಅಥವಾ ಇಎಂಐ ಮಾದರಿಗಳಲ್ಲಿ ಹೆಚ್ಚುತ್ತಿರುವ ಬೇಡಿಕೆ ಸಹ ಪ್ರಮುಖ ಕಾರಣವಾಗಿದೆ. ಹೆಚ್ಚುತ್ತಿರುವ ವೆಚ್ಚಗಳು ಮತ್ತು ಸಿದ್ಧ-ಸ್ಥಳಾಂತರ ಮನೆಗಳ ಕೊರತೆಯೂ ಇದಕ್ಕೆ ಕಾರಣವಾಗಿದೆ. ಪ್ರಾಪ್‌ಟೈಗರ್ ವರದಿಯ ಪ್ರಕಾರ, ದೆಹಲಿ ಮತ್ತು ಎನ್‌ಸಿಆರ್ ಶೇ19% ರಷ್ಟು ತೀವ್ರ ವಾರ್ಷಿಕ ಲಾಭವನ್ನು ಕಂಡಿದೆ. ಇದಾದ ನಂತರ ಎರಡನೇ ಸ್ಥಾನದಲ್ಲಿ ಬೆಂಗಳೂರು 15% ಮತ್ತು ಮೂರನೇ ಸ್ಥಾನದಲ್ಲಿ ಹೈದರಾಬಾದ್ 13% ಇದೆ.

ದೆಹಲಿ - ಎನ್‌ಸಿಆರ್ ವಸತಿ ಬೆಲೆಗಳು 19% ರಷ್ಟು ತೀವ್ರ ವಾರ್ಷಿಕ ಲಾಭ ಬಂದಿದೆ. ನಂತರ ಬೆಂಗಳೂರು ಶೇ. 15% ರಷ್ಟು ಆಸ್ತಿ ಮೌಲ್ಯಗಳಲ್ಲಿನ ಏರಿಕೆಗೆ ಸಾಕ್ಷಿ ಆಗಿದೆ. ಪ್ರಸ್ತುತ ಖರೀದಿದಾರರ ಬೇಡಿಕೆಯನ್ನು ಪೂರೈಸಲು ಡೆವಲಪರ್‌ಗಳು ಪ್ರೀಮಿಯಂ ಮತ್ತು ಐಷಾರಾಮಿ ಯೋಜನೆಗಳ ಮೇಲೆ ಗಮನಹರಿಸಿರುವುದು ಸಹ ಬೇಡಿಕೆ ಹೆಚ್ಚಳವಾಗುವುದಕ್ಕೆ ಕಾರಣವಾಗಿದೆ.
ಡಿಜಿಟಲ್ ರಿಯಲ್ ಎಸ್ಟೇಟ್ ವಹಿವಾಟು ಮತ್ತು ಸಲಹಾ ಸಂಸ್ಥೆ PropTiger.com ವರದಿಯ ತ್ರೈಮಾಸಿಕ ವರದಿಯ ಪ್ರಕಾರ, ದೆಹಲಿ NCR ಐಷಾರಾಮಿ ಆಸ್ತಿಗಳು ಮತ್ತು ಮೂಲಸೌಕರ್ಯ ನವೀಕರಣಗಳಿಗೆ ಬಲವಾದ ಬೇಡಿಕೆ ಬಂದಿದೆ. ದೆಹಲಿ-ಎನ್‌ಸಿಆರ್‌ನಲ್ಲಿ ಮನೆಗಳ ಸರಾಸರಿ ಬೆಲೆಯು 2024 ರ ಮೂರನೇ ತ್ರೈಮಾಸಿಕದಲ್ಲಿ ಪ್ರತಿ ಚದರ ಅಡಿಗೆ 7,479 ರೂಪಾಯಿ ಇತ್ತು. ಆದರೆ 2025ರ ಮೂರನೇ ತ್ರೈಮಾಸಿಕದಲ್ಲಿ ಪ್ರತಿ ಚದರ ಅಡಿಗೆ 8900 ರೂಪಾಯಿಗೆ ಏರಿಕೆ ಕಂಡಿದೆ. ಏರಿತು.
ಬೆಂಗಳೂರು ಭೂಮಿ ಬೆಲೆಗೆ ಬಂಪರ್: ಬೆಂಗಳೂರಿನಲ್ಲಿ ಮೊದಲಿನಿಂದಲೂ ರಿಯಲ್ ಎಸ್ಟೇಟ್‌ಗೆ ಹೆಚ್ಚು ಬೇಡಿಕೆ ಇದೆ. ಬೆಂಗಳೂರಲ್ಲಿ ರಿಯಲ್ ಎಸ್ಟೇಟ್ ಅನ್ನು ಚಿನ್ನದ ಮೊಟ್ಟೆ ಎಂದೇ ಹೇಳಲಾಗುತ್ತಿದೆ. ಇಲ್ಲಿ ಭೂಮಿ ಹಾಗೂ ಆಸ್ತಿಗಳ ಬೆಲೆಯು ವರ್ಷದಿಂದ ವರ್ಷಕ್ಕೆ ಹೆಚ್ಚಳವಾಗುತ್ತಲ್ಲೇ ಇದೆ. ಬೆಂಗಳೂರು
ವರ್ಷದಲ್ಲಿ ಶೇ 15% ಮತ್ತು ಕಳೆದ ವರ್ಷದ ಕೊನೆಯ ತ್ರೈಮಾಸಿಕದಿಂದ ತ್ರೈಮಾಸಕ್ಕೆ 12.6% ಎರಡಂಕಿಯ ಬೆಲೆ ಬೆಳವಣಿಗೆಯನ್ನು ದಾಖಲಿಸಿದೆ. ಮೂರನೇ ಹಂತದಲ್ಲಿ ಹೈದರಾಬಾದ್ ವರ್ಷಕ್ಕೆ 13% ಮತ್ತು ತ್ರೈಮಾಸಿಕದಲ್ಲಿ 4.6% ಭರ್ಜರಿ ಬೆಳವಣಿಗೆಯನ್ನು ದಾಖಲಿಸಿದೆ. 2025 ರ ಮೂರನೇ ತ್ರೈಮಾಸಿಕದಲ್ಲಿ ಬೆಂಗಳೂರಿನಲ್ಲಿ ಪ್ರತಿ ಚದರ ಅಡಿಗೆ 8870ಕ್ಕೆ ಭರ್ಜರಿ ಹೆಚ್ಚಳವಾಗಿದೆ. ಇನ್ನು ಕಳೆದ ವರ್ಷ ಇದೇ ಅವಧಿಯಲ್ಲಿ ಪ್ರತಿ ಚದರ ಅಡಿಗೆ 7713 ರೂಪಾಯಿ ಆಗಿತ್ತು. ಹೈದರಾಬಾದ್‌ನಲ್ಲಿ ಬೆಲೆಗಳು 2024 ರ ಮೂರನೇ ತ್ರೈಮಾಸಿಕದಲ್ಲಿ ಪ್ರತಿ ಚದರ ಅಡಿಗೆ 6858 ರಿಂದ 2025 ರ ಮೂರನೇ ತ್ರೈಮಾಸಿಕದಲ್ಲಿ ಪ್ರತಿ ಚದರ ಅಡಿಗೆ 7750 ಕ್ಕೆ ಹೆಚ್ಚಳವಾಗಿದೆ.
ವಿವಿಧ ನಗರಗಳಲ್ಲೂ ಭೂಮಿ ಬೆಲೆ ಹೆಚ್ಚಳ: ದೆಹಲಿ, ಬೆಂಗಳೂರು ಹಾಗೂ ಹೈದರಾಬಾದ್ ಮಾತ್ರವಲ್ಲದೆ ಮುಂಬೈನಲ್ಲಿ ಶೇ. 7%, ಪುಣೆ ಶೇ. 9%, ಚೆನ್ನೈನಲ್ಲಿ ಶೇ. 9% ಹಾಗೂ ಕೋಲ್ಕತ್ತಾದಲ್ಲಿ ಭೂಮಿ ಹಾಗೂ ಆಸ್ತಿ ಬೆಲೆಯು ಶೇ.8% ಸೇರಿದಂತೆ ಪ್ರಮುಖ ನಗರಗಳ ಭೂಮಿ ಬೆಲೆಯ ಮಾರುಕಟ್ಟೆಗಳ ಬೆಲೆಯೂ ಭರ್ಜರಿ ಹೆಚ್ಚಳವಾಗಿದೆ. ದೇಶದ ಪ್ರಮುಖ ಎಂಟು ನಗರಗಳಲ್ಲಿ ಭೂಮಿ ಬೆಲೆ ಹಡಚ್ಚಳವಾಗಿದೆ. ಅಹಮದಾಬಾದ್, ಬೆಂಗಳೂರು, ಚೆನ್ನೈ, ಹೈದರಾಬಾದ್, ಕೋಲ್ಕತ್ತಾ, ಎನ್‌ಸಿಆರ್ ಗುರುಗ್ರಾಮ್, ನೋಯ್ಡಾ, ಗ್ರೇಟರ್ ನೋಯ್ಡಾ, ಗಾಜಿಯಾಬಾದ್ ಮತ್ತು ಫರಿದಾಬಾದ್, ಮುಂಬೈ, ನವಿ ಮುಂಬೈ ಮತ್ತು ಥಾಣೆ ಭಾಗದಲ್ಲಿ ಭೂಮಿ ಬಲೆ ಹೆಚ್ಚಳವಾಗಿದೆ.












Click it and Unblock the Notifications