Property: ಬೆಂಗಳೂರಿನ ಈ ನಾಲ್ಕು ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ! ಆಸ್ತಿ ಬೆಲೆ ದುಪ್ಪಟ್ಟು..

Property: ಬೆಂಗಳೂರಿನಲ್ಲಿ ಕೆಲವು ಪ್ರಮುಖ ಏರಿಯಾಗಳಲ್ಲಿ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಿದೆ. ವಿವಿಧ ಕಾರಣಕ್ಕೆ ಬೆಂಗಳೂರಿನಲ್ಲಿ ಭೂಮಿಗೆ ಬಂಗಾರದ ಬೆಲೆ ಬರುತ್ತಿದ್ದು ಇದೀಗ ನಾಲ್ಕು ಪ್ರಮುಖ ಪ್ರದೇಶಗಳಲ್ಲಿ ಭೂಮಿಯ ಬೆಲೆ ಭರ್ಜರಿ ಹೆಚ್ಚಳವಾಗಿದೆ. ಬೆಂಗಳೂರು ನಿರಂತರವಾಗಿ ಅಭಿವೃದ್ಧಿಯಾಗುತ್ತಿದ್ದು ರಿಯಲ್‌ ಎಸ್ಟೇಟ್‌ಗೆ ಬೂಸ್ಟ್‌ ಸಿಕ್ಕಿದೆ. ಗ್ರೇಟರ್ ಬೆಂಗಳೂರು ಪರಿಕಲ್ಪನೆಯ ನಂತರ ಬೆಂಗಳೂರಿನಲ್ಲಿ ಮಾತ್ರವಲ್ಲ ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲೂ ಭೂಮಿಯ ಬೆಲೆ ಹೆಚ್ಚಳವಾಗುತ್ತಿದೆ. ಬೆಂಗಳೂರಿನ ಯಾವ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಿದೆ. ಈ ಹಿಂದೆ ಎಷ್ಟಿತ್ತು ಹಾಗೂ ಈಗ ಭೂಮಿಯ ಬೆಲೆ ಎಷ್ಟಿದೆ ಎನ್ನುವ ಸಂಪೂರ್ಣ ವಿವರ ಇಲ್ಲಿದೆ.

ಸುರಂಗ ಮಾರ್ಗ, ಗ್ರೇಟರ್ ಬೆಂಗಳೂರು ಹಾಗೂ ನಮ್ಮ ಮೆಟ್ರೋ ಯೋಜನೆಗಳಿಂದ ಬೆಂಗಳೂರಿನ ಆಸ್ತಿದಾರರಿಗೆ ಲಾಭವಾಗುತ್ತಿದೆ. ಇನ್ನು ಬೆಂಗಳೂರು ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ವಿಚಾರವೂ ಚರ್ಚೆಯಲ್ಲಿದೆ. ಇದೀಗ ಬೆಂಗಳೂರಿನ ಪ್ರಮುಖ ಮೆಟ್ರೋ ಯೋಜನೆಗಳಲ್ಲಿ ಒಂದಾಗಿರುವ ಹೆಬ್ಬಾಳ ಮತ್ತು ಸರ್ಜಾಪುರ ನಡುವೆ ನಮ್ಮ ಮೆಟ್ರೋ ರೆಡ್‌ಲೈನ್ ಯೋಜನೆ ಅಭಿವೃದ್ಧಿ ಆಗುತ್ತಿದೆ. ಇದು ಉತ್ತರದಿಂದ ಆಗ್ನೇಯ ಬೆಂಗಳೂರಿನ ಪ್ರಮುಖ ಕಾರಿಡಾರ್‌ ಎಂದೇ ಪ್ರಸಿದ್ಧಿ ಗಳಿಸಿದೆ. ನಮ್ಮ ಮೆಟ್ರೋ ಯೋಜನೆ ಅಭಿವೃದ್ಧಿಯಿಂದಾಗಿ ಟ್ರಾಫಿಕ್ ಜಾಮ್ ಕಡಿಮೆ ಆಗಲಿದೆ. ಅಲ್ಲದೇ ಇದರೊಂದಿಗೆ ಬೆಂಗಳೂರು ರಿಯಲ್ ಎಸ್ಟೇಟ್‌ಗೂ ಬೂಸ್ಟ್‌ಸಿಕ್ಕಿದೆ.

Property Boom in Bengaluru s Hebbal Nagawara HSR Layout and Sarjapur Gold Price for land

ಹೆಬ್ಬಾಳ (ಉತ್ತರ ಬೆಂಗಳೂರು)ನಿಂದ ಸರ್ಜಾಪುರ (ಆಗ್ನೇಯ ಬೆಂಗಳೂರು)ಗೆ ಈ ರೆಡ್‌ಲೈನ್ ಯೋಜನೆ ಸಂಪರ್ಕ ಕಲ್ಪಿಸುತ್ತದೆ. 36.59 ಕಿಮೀ 28 ನಿಲ್ದಾಣಗಳನ್ನು ಈ ಯೋಜನೆ ಒಳಗೊಂಡಿದೆ. ಈ ಯೋಜನೆಯ ಬೆನ್ನಲ್ಲೇ ಈ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಬಹುದು ಎಂದು ನಿರೀಕ್ಷೆ ಮಾಡಲಾಗಿತ್ತು. ಇದೀಗ ನಿರೀಕ್ಷೆಗೂ ಮೀರಿ ಭೂಮಿಯ ಬೆಲೆ ಹೆಚ್ಚಳವಾಗಿದೆ. ಬೆಂಗಳೂರಿನ ಹೆಬ್ಬಾಳ, ನಾಗವಾರ, ಎಚ್‌ಎಸ್‌ಆರ್ ಲೇಔಟ್ ಹಾಗೂ ಸರ್ಜಾಪುರ ಪ್ರದೇಶಗಳಲ್ಲಿ ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗಿದೆ.

ಬೆಲೆಯ ಬೆಲೆ ಹೆಚ್ಚಳ: ಈ ನಾಲ್ಕು ಪ್ರದೇಶಗಳಲ್ಲಿ ಭೂಮಿಯ ಬೆಲೆಯು ಭರ್ಜರಿ ಹೆಚ್ಚಳವಾಗಿದೆ. ಹೌದು ಮೆಟ್ರೋ ಯೋಜನೆಗಳು ಬಂದ ಮೇಲೆ ಬೆಂಗಳೂರಿನ ವಿವಿಧ ಭಾಗದಲ್ಲಿ ಭೂಮಿಯ ಬೆಲೆ ಹೆಚ್ಚಳವಾಗಿದೆ. ರೆಡ್‌ಲೈನ್ ಮಾರ್ಗದಲ್ಲಿ ಹಲವು ಪಟ್ಟು ಹೆಚ್ಚಳವಾಗಿದೆ. ಹೆಬ್ಬಾಳದಲ್ಲಿ ಭೂಮಿಯ ಬೆಲೆ ಪ್ರತಿ ಚ. ಮೀಗೆ 8,000- 12,000 ರೂಪಾಯಿ ಇದ್ದು, ಮುಂದಿನ ದಿನಗಳಲ್ಲಿ 10,000 ರಿಂದ 14,000 ರೂಪಾಯಿ ಆಗಲಿದೆ. ನಾಗವಾರದಲ್ಲಿ 6,500 ರಿಂದ 9,000 ರೂಪಾಯಿ ಇದ್ದು ಮುಂದಿನ ದಿನಗಳಲ್ಲಿ 8,500 ರಿಂದ 11,000 ಸಾವಿರ ರೂಪಾಯಿ ಆಗಲಿದೆ ಎಂದು ರಿಯಲ್ ಎಸ್ಟೇಟ್‌ ತಜ್ಞರು ಹೇಳಿದ್ದಾರೆ. ಇನ್ನು HSR ಲೇಔಟ್‌ನಲ್ಲಿ ಪ್ರತಿ ಚ.ಮೀ ಬೆಲೆಯು 9,000 ಸಾವಿರ ರೂಪಾಯಿಯಿಂದ 14,000 ಸಾವಿರ ರೂಪಾಯಿ ಆಗಿದೆ. ಮುಂದಿನ ದಿನಗಳಲ್ಲಿ 11,000 ರಿಂದ 16,000 ರೂಪಾಯಿ ಹಾಗೂ ಸರ್ಜಾಪುರ ರಸ್ತೆಯಲ್ಲಿ 5,500 ರಿಂದ 8,500 ರೂಪಾಯಿ ಇದೆ. ಮುಂದೆ ಇದು 7,500 ರಿಂದ 10,500 ರೂಪಾಯಿ ಆಗಲಿದೆ ಎಂದು ಹೇಳಲಾಗಿದೆ.

ಒಟ್ಟಾರೆ ಮೆಟ್ರೋ ಯೋಜನೆಯು ಬೆಂಗಳೂರಿನ ಸುತ್ತಮುತ್ತಲಿನ ಪ್ರದೇಶದಲ್ಲಿ ಭೂಮಿಗೆ ಬಂಗಾರದ ಬೆಲೆ ತಂದಿದೆ. ಮುಂದಿನ ದಿನಗಳಲ್ಲಿ ಬೆಂಗಳೂರಿನ ವಿವಿಧ ಭಾಗದಲ್ಲೂ ಭೂಮಿಯ ಬೆಲೆ ಹೆಚ್ಚಳವಾಗಲಿದೆ ಎಂದು ಹೇಳಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+