• search
  • Live TV
ಬೆಂಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಸನ್ನಿ ಲಿಯೋನ್‌ ಆಗಮನ ವಿರೋಧಿಸಿ ಕನ್ನಡಪರ ಸಂಘಟನೆಗಳಿಂದ ಪ್ರತಿಭಟನೆ

|

ಬೆಂಗಳೂರು, ಅಕ್ಟೋಬರ್ 22: ಮಾಜಿ ನೀಲಿ ಚಿತ್ರ ತಾರೆ ಸನ್ನಿ ಲಿಯೋನ್‌ ಬೆಂಗಳೂರಿಗೆ ಬರುವುದು ವಿರೋಧಿಸಿ ಹಾಗೂ ಆಕೆ ಕನ್ನಡದ 'ವೀರಮಹಾದೇವಿ' ಚಿತ್ರದಲ್ಲಿ ನಟಿಸದಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.

ನಗರದ ಟೌನ್‌ಹಾಲ್‌ ಮುಂದೆ ಸೇರಿದ್ದ ಕನ್ನಡಪರ ಸಂಘಟನೆಗಳ ಸದಸ್ಯರು ಸನ್ನಿಲಿಯೋನ್‌ ಪ್ರತಿಕೃತಿ ದಹಿಸಿದ್ದಾರೆ. ಅಲ್ಲದೆ ಬ್ಲೇಡಿನಿಂದ ಕೈಗೆ ಗಾಯಮಾಡಿಕೊಂಡು ಸನ್ನಿ ಲಿಯೋನ್‌ ಕರ್ನಾಟಕಕ್ಕೆ ಆಗಮಿಸುವುದನ್ನು ವಿರೋಧಿಸಿದ್ದಾರೆ.

ಈಜುಕೊಳ ಉದ್ಘಾಟನೆಗೆ ಚಿಕ್ಕಮಗಳೂರಿಗೆ ಸನ್ನಿ ಲಿಯೋನ್, ದೀಪಿಕಾ ಪಡುಕೋಣೆ!

ನವೆಂಬರ್ 3ರಂದು ಸನ್ನಿ ಲಿಯೋನ್‌ ಅವರು ಕಾರ್ಯಕ್ರಮವೊಂದಕ್ಕೆ ಬರುತ್ತಿದ್ದು, ಇದಕ್ಕೆ ಈಗಾಗಲೇ ಭಾರಿ ಸಂಖ್ಯೆಯಲ್ಲಿ ಟಿಕೆಟ್ ಮಾರಾಟವಾಗಿದೆ. ಆದರೆ ಆ ಕಾರ್ಯಕ್ರಮಕ್ಕೆ ಸನ್ನಿ ಬರಬಾರದೆಂದು ಕನ್ನಡಪರ ಸಂಘಟನೆ ಸದಸ್ಯರು ಒತ್ತಾಯಿಸುತ್ತಿದ್ದಾರೆ.

ಕಳೆದ ವರ್ಷಾಂತ್ಯದಲ್ಲಿ ಸಹ ಸನ್ನಿ ಲಿಯೋನ್‌ ಬೆಂಗಳೂರಿನಲ್ಲಿ 'ಸನ್ನಿ ನೈಟ್ಸ್‌' ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡುವರಿದ್ದರು. ಅದಕ್ಕೂ ಸಹ ಕನ್ನಡ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ್ದವು. ಕೊನೆಗೆ ಭದ್ರತೆಯ ನೆಪವೊಡ್ಡಿ ಬೆಂಗಳೂರು ಪೊಲೀಸರು ಕಾರ್ಯಕ್ರಮಕ್ಕೆ ಅನುಮತಿ ನೀಡಿರಲಿಲ್ಲ.

ಸನ್ನಿ ಲಿಯೋನ್ ಕುಣಿತಕ್ಕೆ ಓಕೆ ಎಂದ ಬೆಂಗಳೂರು ಪೊಲೀಸರು

ವೀರವನಿತೆ ವೀರಮಹಾದೇವಿ ಚಿತ್ರದಲ್ಲಿ ಸಹ ಸನ್ನಿಲಿಯೋನ್‌ ಮುಖ್ಯ ಪಾತ್ರದಲ್ಲಿ ನಟಿಸುತ್ತಿರುವುದು ಸಹ ಕನ್ನಡಪರ ಸಂಘಟನೆಗಳ ಕಣ್ಣು ಕೆಂಪಗಾಗಿಸಿದೆ. ಹಾಗಾಗಿ ಸನ್ನಿ ಲಿಯೋನ್ ಮೇಲೆ ಇಂದು ಕನ್ನಡ ಪರ ಸಂಘಟನೆಗಳ ಸದಸ್ಯರು ಪ್ರತಿಭಟನೆ ನಡೆಸಿದ್ದಾರೆ.

ಸನ್ನಿ ಲಿಯೋನ್ ಬಂದ್ರೆ ಸುಮ್ನಿರಲ್ಲ ಅಂತಿದಾರೆ ರಕ್ಷಣಾ ವೇದಿಕೆ ಹುಡುಗರು!

ಸನ್ನಿ ಲಿಯೋನ್ ಅಭಿನಯದ ವೀರಮಹಾದೇವಿ ಕನ್ನಡ, ತೆಲುಗು, ತಮಿಳು ಭಾಷೆಯಲ್ಲಿ ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ಸನ್ನಿ ಲಿಯೋನ್ ನಟನೆ ಕೈ ಬಿಡುವಂತೆ ಒತ್ತಾಯಿಸಿ ಕರ್ನಾಟಕ ರಕ್ಷಣಾ ಯುವ ವೇದಿಕೆ ಕಾರ್ಯಕರ್ತರು ಚಿತ್ರ ಪೋಸ್ಟರ್ ಗೆ ಬೆಂಕಿ ಹಚ್ಚಿ ಪ್ರತಿಭಟಿಸಿದರು.

ವೀರಮಹಾದೇವಿ ಚಿತ್ರದಲ್ಲಿ ಸನ್ನಿಲಿಯೋನ್ ಪಾತ್ರ ಕೈಬಿಡುವಂತೆ ಪ್ರತಿಭಟನೆ

ಸನ್ನಿ ಲಿಯೋನ್‌ ನವೆಂಬರ್‌ 3 ನೇ ತಾರೀಖು ನಡೆಸುತ್ತಿರುವ ಸನ್ನಿನೈಟ್ಸ್‌ ಕಾರ್ಯಕ್ರಮಕ್ಕೆ ಅಡ್ಡಿಪಡಿಸುತ್ತೇವೆ ಎಂದು ಇಂದು ಕನ್ನಡಪರ ಸಂಘಟನೆ ಸದಸ್ಯರು ಎಚ್ಚರಿಕೆ ನೀಡಿದ್ದಾರೆ. ಕಳೆದ ಬಾರಿ ಸನ್ನಿ ಬರದಂತೆ ತಡೆಯಲು ಯಶಸ್ವಿಯಾಗಿದ್ದ ಕನ್ನಡ ಪರ ಸಂಘಟನೆಗಳು ಈ ಬಾರಿ ಏನು ಮಾಡುತ್ತವೆ ಕಾದು ನೋಡಬೇಕು.

English summary
Pro Kannada activists today protest against Sunny Leon. They demand that Sunny should not come to Bengaluru for any programs and She should not act in 'Veera Mahadevi' movie.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X